ETV Bharat / bharat

ಲಸಿಕೆ ನಂತರವೂ 23 ಸಾವಿರ ಮಂದಿಗೆ ತಗುಲಿದ ಕೊರೊನಾ!

author img

By

Published : Sep 16, 2021, 9:18 AM IST

ಮುನ್ಸಿಪಲ್ ಕಾರ್ಪೊರೇಷನ್ ನಡೆಸಿದ ಸಮೀಕ್ಷೆಯು ಭಾಗಶಃ ಲಸಿಕೆ ಪಡೆದ ನಂತರವೂ ಮುಂಬೈನಲ್ಲಿ ಒಟ್ಟು 23,239 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ಮಾಡಿದೆ.

Corona
ಮುಂಬೈ ಮುನ್ಸಿಪಲ್ ಕಾರ್ಪೋರೇಶನ್

ಮುಂಬೈ: ಭಾಗಶಃ ಲಸಿಕೆ ಪಡೆದ ನಂತರವೂ ಮುಂಬೈನಲ್ಲಿ ಒಟ್ಟು 23,239 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅದರಲ್ಲೂ ಸಂಪೂರ್ಣವಾಗಿ ಎರಡು ಪ್ರಮಾಣದ ಲಸಿಕೆ ಪಡೆದವರಲ್ಲಿ ಸುಮಾರು 9000 ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಡೆಸಿದ ಸಮೀಕ್ಷೆಯ ವರದಿಯಲ್ಲಿ ತಿಳಿದು ಬಂದಿದೆ. ಇದು ಮುಂಬೈ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮುನ್ಸಿಪಲ್ ಕಾರ್ಪೊರೇಷನ್ ನಡೆಸಿದ ಸಮೀಕ್ಷೆಯು ಎಷ್ಟು ನಾಗರಿಕರಿಗೆ ಲಸಿಕೆ ಪಡೆದ ಬಳಿಕ ಮತ್ತೆ ಸೋಂಕು ತಗುಲಿದೆಯೆಂದು ವರದಿ ಮಾಡಿದೆ. ಮುಂಬೈನಲ್ಲಿ, ಎರಡೂ ಡೋಸ್ ಲಸಿಕೆ ತೆಗೆದುಕೊಂಡವರ ಸಂಖ್ಯೆ ಸುಮಾರು 25.39 ಲಕ್ಷ. ಅವರಲ್ಲಿ, 23,239 ಜನರಿಗೆ ಮತ್ತೆ ಸೋಂಕು ತಗುಲಿದೆ. ಅಷ್ಟೇ ಅಲ್ಲದೆ, ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡವರಲ್ಲಿ 9,001 ಜನರಿಗೆ ಕೋವಿಡ್​ ವಕ್ಕರಿಸಿದೆ. ಕೋವಿಡ್ ಲಸಿಕೆ ಮೊದಲ ಡೋಸ್ ತೆಗೆದುಕೊಂಡ ನಂತರ ಮತ್ತೆ ಸೋಂಕಿಗೆ ಒಳಗಾದವರ ಸಂಖ್ಯೆ 14,239.

ಶೇ.0.35 ಜನರಿಗೆ ಮತ್ತೆ ಕೊರೊನಾ: ಮುಂಬೈನಲ್ಲಿ ಒಟ್ಟು ಲಸಿಕೆ ಹಾಕಿದ ಜನರಲ್ಲಿ, ಶೇ.0.35ರಷ್ಟು ಜನರು ಮತ್ತೆ ಸೋಂಕಿಗೆ ಒಳಗಾಗಿದ್ದಾರೆ. ಅಂದರೆ 1,00,000 ನಾಗರಿಕರಲ್ಲಿ 350 ಜನರು ಎರಡೂ ಡೋಸ್ ತೆಗೆದುಕೊಂಡಿದ್ದರೂ ಕೋವಿಡ್​ಗೆ ತುತ್ತಾಗಿದ್ದಾರೆ. ಇನ್ನು ಈ ವರದಿ ನಂತರ ಭಯಭೀತರಾದ ಜನರಿಗೆ ಮುನ್ಸಿಪಲ್​ ಕಾರ್ಪೊರೇಷನ್ ಕಿವಿ ಮಾತು ಹೇಳಿದ್ದು, ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು ಎಂದಿದೆ.

ಮುಂಬೈನಲ್ಲಿ ಲಸಿಕಾಕರಣ: ಜನವರಿ 16 ರಿಂದ ಮುಂಬೈನಲ್ಲಿ ಒಂದು ಕೋಟಿಗೂ ಅಧಿಕ ಮಂದಿಗೆ ಲಸಿಕೆಗಳನ್ನು ನೀಡಲಾಗಿದೆ. ಈ ಪೈಕಿ 74,64,139 ಫಲಾನುಭವಿಗಳಿಗೆ ಮೊದಲ ಡೋಸ್​ ಮತ್ತು ಮತ್ತು 31 ಲಕ್ಷದ 32 ಸಾವಿರದ 274 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಿ: ಲಸಿಕೆಯ ಎರಡೂ ಪ್ರಮಾಣಗಳನ್ನು ತೆಗೆದುಕೊಂಡರೂ ಅನೇಕರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್​ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​ನ ಹೆಚ್ಚುವರಿ ಆಯುಕ್ತ ಸುರೇಶ್ ಕಕಾನಿ ಹೇಳಿದ್ದಾರೆ.

ಲಸಿಕೆಯ ನಂತರ ಕೊರೊನಾ ಸೋಂಕು:

  • 18 ರಿಂದ 44 ವರ್ಷದೊಳಗಿನವರು:

ಮೊದಲ ಡೋಸ್ ಪಡೆದ ನಂತರ ಕೊರೊನಾ ಸೋಂಕು - 4,420

ಎರಡನೇ ಡೋಸ್ ಪಡೆದ ನಂತರ ಕೊರೊನಾ ಸೋಂಕು - 1,835

  • 45 ರಿಂದ 59 ವರ್ಷಗೊಳಗಿನವರು

ಮೊದಲ ಡೋಸ್ ಪಡೆದ ನಂತರ ಕೊರೊನಾ ಸೋಂಕು - 4,815

ಎರಡನೇ ಡೋಸ್ ಪಡೆದ ನಂತರ ಕೊರೊನಾ ಸೋಂಕು- 2,687

  • 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು

ಮೊದಲ ಡೋಸ್ ಪಡೆದ ನಂತರ ಕೊರೊನಾ ಸೋಂಕು - 5,004

ಎರಡನೇ ಡೋಸ್ ಪಡೆದ ನಂತರ ಕೊರೊನಾ ಸೋಂಕು - 4,489

ETV Bharat Logo

Copyright © 2024 Ushodaya Enterprises Pvt. Ltd., All Rights Reserved.