ETV Bharat / bharat

ಸ್ನೇಹಿತರಿಂದಲೇ ದುಷ್ಕೃತ್ಯ: 20ರ ಯುವತಿ ಮೇಲೆ ಅತ್ಯಾಚಾರವೆಸಗಿದ ಕಾಮುಕರು - Girl gangraped in Bijnor UTTARPRADESH

ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಇಬ್ಬರು ಕಾಮುಕರು, ಆಕೆಯ ನಗ್ನ ವಿಡಿಯೋ ಸೆರೆ ಹಿಡಿದು ಹಣಕ್ಕಾಗಿ ಬೇಡಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್​​ನಲ್ಲಿ ನಡೆದಿದೆ.

20-year-old gangraped in Bijnor
20-year-old gangraped in Bijnor
author img

By

Published : Dec 24, 2021, 4:21 PM IST

Updated : Dec 24, 2021, 4:40 PM IST

ಬಿಜ್ನೋರ್​(ಉತ್ತರ ಪ್ರದೇಶ): 20 ವರ್ಷದ ಯುವತಿಯೋರ್ವಳ ಮೇಲೆ ಅವಳ ಇಬ್ಬರು ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್​​ನಲ್ಲಿ ನಡೆದಿದೆ. ಯುವತಿಯ ಇಬ್ಬರು ಸ್ನೇಹಿತರು ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಮಿಶ್ರಣ ಮಾಡಿ, ಆಕೆಯ ಮೇಲೆ ದುಷ್ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನ ಉಮರ್​ ಹಾಗೂ ಅಬ್ದುಲ್​ ಎಂದು ಗುರುತಿಸಲಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್​ 19ರ ತಡರಾತ್ರಿ 12 ಗಂಟೆಗೆ ಈ ಘಟನೆ ನಡೆದಿದೆ. ಹಾಸ್ಟೇಲ್​ನಲ್ಲಿ ವಾಸವಾಗಿದ್ದ ಯುವತಿಗೆ ಫೋನ್ ಮಾಡಿರುವ ಉಮರ್​​, ಸಹೋದರಿ ಹುಟ್ಟುಹಬ್ಬ ಆಚರಣೆ ಮಾಡಲು ಬರುವಂತೆ ಮನವಿ ಮಾಡಿದ್ದಾನೆ. ಆತನ ಮಾತು ಕೇಳಿದ ಸಂತ್ರಸ್ತೆ ಕಾರಿನಲ್ಲಿ ಹತ್ತಿಕೊಂಡಿದ್ದಾಳೆ.

ಇದರ ಬೆನ್ನಲ್ಲೇ ಅಬ್ದುಲ್​ ಕೂಡ ಕಾರಿನಲ್ಲಿ ಹತ್ತಿಕೊಂಡಿದ್ದು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆ ಬಗ್ಗೆ ಪೊಲೀಸರು ಹಾಗೂ ಕುಟುಂಬಸ್ಥರ ಮುಂದೆ ಹೇಳದಂತೆ ಬೆದರಿಕೆ ಹಾಕಿದ್ದು, ಹಾಸ್ಟೇಲ್​ ಪಕ್ಕ ಬಿಟ್ಟು ತೆರಳಿದ್ದಾರೆ.

ಇದನ್ನೂ ಓದಿರಿ: ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಸ್ಪಿನ್​ ಮಾಂತ್ರಿಕ ಹರ್ಭಜನ್​ ಸಿಂಗ್​​

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಸಂತ್ರಸ್ತೆ, ಅತ್ಯಾಚಾರವೆಸಗಿದ ನಂತರ ನಗ್ನ ವಿಡಿಯೋ ಮಾಡಿಕೊಂಡಿದ್ದು, ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದು, 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸ್ನೇಹಿತರ ಸಹಾಯದಿಂದ 8 ಸಾವಿರ ರೂ. ಅವರಿಗೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್​ 366, 328, 376(D), 323,506 ಅಡಿ ದೂರು ದಾಖಲಾಗಿದೆ.

Last Updated : Dec 24, 2021, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.