ETV Bharat / bharat

ಶಿಮ್ಲಾ: ಕಂದಕಕ್ಕೆ ಬಿದ್ದ ಸರ್ಕಾರಿ ಬಸ್​.. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಶಿಮ್ಲಾದ ಹೀರಾ ನಗರದಲ್ಲಿ ಬುಧವಾರ ಹೆಚ್​ಆರ್​ಟಿಸಿ ಸರ್ಕಾರಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 2 ಜನ ಬಸ್​ನಡಿ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

ಕಂದಕಕ್ಕೆ ಬಿದ್ದ ಸರ್ಕಾರಿ ಬಸ್
ಕಂದಕಕ್ಕೆ ಬಿದ್ದ ಸರ್ಕಾರಿ ಬಸ್
author img

By

Published : Jul 27, 2022, 4:35 PM IST

ಶಿಮ್ಲಾ: ಇಲ್ಲಿನ ಹೀರಾ ನಗರದಲ್ಲಿ ಬುಧವಾರ ಹೆಚ್‌ಆರ್‌ಟಿಸಿ ಸರ್ಕಾರಿ ಬಸ್ ಕಮರಿಗೆ ಬಿದ್ದ ಪರಿಣಾಮ 20 ಜನರು ಗಾಯಗೊಂಡಿದ್ದು, ಇಬ್ಬರು ಸಿಲುಕಿ ಕೊಂಡಿದ್ದಾರೆ. ಬಸ್ ಕಂಗ್ರಾದ ನಗ್ರೋಟಾದಿಂದ ಶಿಮ್ಲಾಕ್ಕೆ ಬರುತ್ತಿರುವಾಗ ಈ ಅವಘಡ ಸಂಭವಿಸಿದೆ. ಈ ವೇಳೆ, ಬಸ್​ನಲ್ಲಿ 25 ಪ್ರಯಾಣಿಕರು ಸಂಚರಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.

ಹೆಚ್​ಆರ್​ಟಿಸಿ ಸರ್ಕಾರಿ ಬಸ್ ಕಂದಕಕ್ಕೆ ಬಿದ್ದಿರುವುದು

ಮಾಹಿತಿ ತಿಳಿದು ರಾಜ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಎಲ್ಲಾ ಗಾಯಾಳುಗಳನ್ನು ಶಿಮ್ಲಾದ ಐಜಿಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಕಾರಣ ತಿಳಿದು ಬರಬೇಕಿದ್ದು,ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಸ್ಟೇಟ್​ ಎಮರ್ಜೆನ್ಸಿ ಆಪರೇಷನ್ ಸೆಂಟರ್ ಅಪಘಾತದ ಬಗ್ಗೆ ಮಾಹಿತಿ ನೀಡಿರುವುದು

ಓದಿ: ಟೋಲ್ ಬೂತ್​ನಲ್ಲಿ ಮಹಿಳೆಗೆ ಡಿಕ್ಕಿ ಹೊಡೆದ ಬೈಕ್​​.. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.