ETV Bharat / bharat

ಏಲೂರು ದುರಂತ​: ವಿಚಿತ್ರ ಕಾಯಿಲೆಗೆ ಮತ್ತಿಬ್ಬರು ಬಲಿ, ಅಸ್ವಸ್ಥರ ಸಂಖ್ಯೆ 585ಕ್ಕೆ ಏರಿಕೆ - ವಿಜಯವಾಡದ ಆಸ್ಪತ್ರೆ

ಆಂಧ್ರಪ್ರದೇಶದ ಏಲೂರು ದುರಂತದಲ್ಲಿ ಬಲಿಯಾದವರ ಸಂಖ್ಯೆ 3ಕ್ಕೆ ಹಾಗೂ ಅಸ್ವಸ್ಥರ ಸಂಖ್ಯೆ 585ಕ್ಕೆ ಏರಿದೆ.

Eluru tragedy
ಏಲೂರು ದುರಂತ
author img

By

Published : Dec 10, 2020, 10:55 AM IST

ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ಡಿಸೆಂಬರ್ 5 ರಿಂದ ​ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆ ಸಂಬಂಧ ಇದೀಗ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಇತ್ತ ಅಸ್ವಸ್ಥರ ಸಂಖ್ಯೆ 585ಕ್ಕೆ ಏರಿಕೆಯಾಗಿದೆ.

ಮೃತರನ್ನು ಸುಬ್ಬರವಮ್ಮ (56), ಚಂದ್ರ ರಾವ್ (50) ಎಂದು ಗುರುತಿಸಲಾಗಿದೆ. ವಿಜಯವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಸುಬ್ಬರವಮ್ಮಗೆ ಕೋವಿಡ್​ ಸೋಂಕು ಕೂಡ ತಗುಲಿತ್ತು ಹಾಗೂ ಚಂದ್ರ ರಾವ್​ಗೆ ಶ್ವಾಸಕೋಶದ ಸಮಸ್ಯೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ಡಿ.6 ರಂದು ಶ್ರೀಧರ್ (45) ಎಂಬ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದರು. ಇದೀಗ ಈ ಕಾಯಿಲೆಗೆ ಒಟ್ಟು ಮೂವರು ಬಲಿಯಾದಂತಾಗಿದೆ.

ಇದನ್ನೂ ಓದಿ: ಆಂಧ್ರದಲ್ಲಿ 561 ಮಂದಿಯನ್ನು ಅಸ್ವಸ್ಥಗೊಳಿಸಿ ಓರ್ವನ ಬಲಿತೆಗೆದುಕೊಂಡ ನಿಗೂಢ ಕಾಯಿಲೆ ರಹಸ್ಯ ಬಹಿರಂಗ

ಡಿ. 5ರಿಂದ ಏಕಾಏಕಿ ಏಲೂರು ಪಟ್ಟಣದ ಜನರು ಮೂರ್ಛೆ ತಪ್ಪಿ, ಬಾಯಲ್ಲಿ ನೊರೆ ಬಂದು ಅಸ್ವಸ್ಥರಾಗುತ್ತಿದ್ದಾರೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿವಿಧ ಆರೋಗ್ಯ ಸಂಸ್ಥೆಗಳು ನೀರು, ಆಹಾರ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷಿಸುತ್ತಿವೆ.

ರಕ್ತದ ಮಾದರಿಗಳ ಪ್ರಾಥಮಿಕ ಪರೀಕ್ಷೆ ನಡೆಸಿದ ದೆಹಲಿಯ ಏಮ್ಸ್ ತಜ್ಞರು, ಸೀಸ ಮತ್ತು ನಿಕ್ಕಲ್ ಕಣಗಳು ನಿಗೂಢ ಕಾಯಿಲೆಯ ಮೂಲ ಕಾರಣವಾಗಿರಬಹುದು ಎಂದು ಹೇಳಿದ್ದಾರೆ. ಕುಡಿಯುವ ನೀರಿನಲ್ಲಿ ಕೀಟನಾಶಕ ಇರುವುದು ಸಹ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.