ETV Bharat / bharat

ಸ್ವಚ್ಛಗೊಳಿಸುವಾಗ ಗ್ಯಾಸ್ ಟ್ಯಾಂಕ್​ಗೆ ಬಿದ್ದು ಇಬ್ಬರು ಕಾರ್ಮಿಕರ ದುರ್ಮರಣ - ಗ್ಯಾಸ್ ಟ್ಯಾಂಕ್ ದುರಂತ

ಗ್ಯಾಸ್ ಬಾಟ್ಲಿಂಗ್ ಪ್ಲಾಂಟ್‌ನಲ್ಲಿನ ಗ್ಯಾಸ್ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ.

2 labourers fall into gas tank in MP's Ujjain, dead
ಸ್ವಚ್ಛಗೊಳಿಸುವಾಗ ಗ್ಯಾಸ್ ಟ್ಯಾಂಕ್​ಗೆ ಬಿದ್ದು ಇಬ್ಬರು ಕಾರ್ಮಿಕರ ದುರ್ಮರಣ
author img

By

Published : Oct 15, 2021, 5:07 AM IST

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಗ್ಯಾಸ್ ಬಾಟ್ಲಿಂಗ್ ಪ್ಲಾಂಟ್‌ನಲ್ಲಿನ ಗ್ಯಾಸ್ ಟ್ಯಾಂಕ್‌ಗೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಉಜ್ಜಯಿನಿ ಜಿಲ್ಲೆಯ ಘಟ್ಟಿಯಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಈ ಘಟನೆ ಸಂಭವಿಸಿದೆ.

ಮೃತರನ್ನು ರಾಜೇಂದ್ರ ಸಿಂಗ್ (30) ಮತ್ತು ಲಖನ್ ಸಿಂಗ್ (27) ಎಂದು ಗುರುತಿಸಲಾಗಿದ್ದು, ಪೊಲೀಸ್ ಉಪ ವಿಭಾಗಾಧಿಕಾರಿ (ಎಸ್‌ಡಿಒಪಿ) ಆರ್‌.ಕೆ. ರಾಯ್ ಘಟನೆ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

  • Madhya Pradesh: Two labourers died after falling into a tank while cleaning it at a gas bottling plant in Ghatiya area of Ujjain on Thursday.

    "The process involved in retrieving the bodies is complicated & we are working towards that," said ADM Santosh Tagore pic.twitter.com/FEnRk1LpJf

    — ANI (@ANI) October 14, 2021 " class="align-text-top noRightClick twitterSection" data=" ">

ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಇಬ್ಬರು ಸ್ವಚ್ಛತಾ ಕಾರ್ಮಿಕರು ಗ್ಯಾಸ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುವಾಗ, ಆಕಸ್ಮಿಕವಾಗಿ ಟ್ಯಾಂಕ್​ನೊಳಗೆ ಬಿದ್ದಿದ್ದಾರೆ. ಘಟನೆಯ ಮಾಹಿತಿ ತಿಳಿದು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಗ್ಯಾಸ್ ಟ್ಯಾಂಕ್ ಖಾಲಿ ಮಾಡಿ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಮತ್ತು ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: UNHRC: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.