ETV Bharat / bharat

2 ಕೆಜಿ ಪುಲಸಾ ಮೀನು ಹರಾಜು: ಭರ್ಜರಿ ಬೆಲೆಗೆ ಮಾರಾಟ

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾನಂ ಮಾರುಕಟ್ಟೆಯಲ್ಲಿ 2 ಕೆಜಿ ತೂಕದ ತಾಜಾ ಪುಲಸಾ ಮೀನು 19 ಸಾವಿರ ರೂಪಾಯಿಗೆ ಮಾರಾಟವಾಗಿದೆ.

author img

By

Published : Aug 24, 2022, 10:11 PM IST

2-kgs-pulasa-fish-costing-rs19000
2 ಕೆಜಿ ಪುಲಸಾ ಮೀನಿಗೆ ಹರಾಜು: ಭರ್ಜರಿ ಬೆಲೆಗೆ ಮಾರಾಟ

ಪೂರ್ವ ಗೋದಾವರಿ (ಆಂಧ್ರಪ್ರದೇಶ): ಗೋದಾವರಿ ನದಿಯಲ್ಲಿ ಕಂಡುಬರುವ ಅಪರೂಪದ ಪುಲಸಾ ಮೀನು ಭರ್ಜರಿ ಬೆಲೆಗೆ ಬಿಕರಿಯಾಗಿದೆ. ಕೇವಲ 2 ಕೆಜಿಯ ಮೀನು 19 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ.

ಬೇರೆ ಮೀನುಗಳಿಗಿಂತ ಭಿನ್ನ ರುಚಿಯನ್ನು ಪುಲಸಾ ಮೀನು ಹೊಂದಿದೆ. ಈ ಮೀನು ಸಿಕ್ಕರೆ ಮೀನುಗಾರರಿಗೆ ಸುಗ್ಗಿಯಂತೆ. ಅದರಲ್ಲೂ ಪೂರ್ವ ಗೋದಾವರಿ ಜಿಲ್ಲೆಯ ಯಾನಂ ಮಾರುಕಟ್ಟೆಯಲ್ಲಿ ಪುಲಸಾಗೆ ಭಾರಿ ಬೇಡಿಕೆ ಇದೆ.

ಇದೀಗ ನದಿ ಪ್ರವಾಹ ಇಳಿಮುಖವಾಗುತ್ತಿದ್ದಂತೆ ಯಾನಂ ಮಾರುಕಟ್ಟೆಗೆ ಈ ಪ್ರಭೇದದ ಮೀನು ಆಗಮನವಾಗಿದ್ದು, ಮಂಗಳವಾರ ಮೀನನ್ನು ಹರಾಜು ಮೂಲಕ ಮಾರಾಟ ಮಾಡಲಾಯಿತು. ನಾಟಿ ಪಾರ್ವತಿ ಎಂಬ ಮಹಿಳೆಯ ಬಳಿಯಿದ್ದ 2 ಕೆಜಿ ತೂಕದ ತಾಜಾ ಪುಸಲಾ ಮೀನನ್ನು ಭೈರವಪಾಳ್ಯದ ನಿವಾಸಿಯೊಬ್ಬರು 19 ಸಾವಿರ ರೂ. ಕೊಟ್ಟು ಖರೀದಿಸಿದರು.

ಈ ಸೀಸನ್‌ನಲ್ಲಿ ಪುಲಸಾ ಮೀನಿಗೆ ಸಿಕ್ಕಿರುವ ಗರಿಷ್ಠ ಬೆಲೆ ಇದಾಗಿದೆ. ಈ ಭಾಗದಲ್ಲಿ ಇತ್ತೀಚೆಗೆ ಮರಳು ದಂಧೆ ಹೆಚ್ಚಾಗಿದ್ದು ಮೀನು ಸಿಗುವುದು ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ಇದನ್ನೂ ಓದಿ: ಉಡುಪಿ : ಹವ್ಯಾಸಿ ಮೀನುಗಾರನ ಗಾಳಕ್ಕೆ ಬಿದ್ದ ಬೃಹತ್​ ಗಾತ್ರದ ಮುರು, ಕೊಕ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.