ಓಬಳಾಪುರ(ಬಳ್ಳಾರಿ ಗಡಿ): ದೇಶದ ಆರ್ಥಿಕತೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ವಾಕ್ಸಮರ ಮುಂದುವರಿದಿದೆ. ಪರೋಟಾ ಮೇಲೆ ಶೇ 18 ರಷ್ಟು ಜಿಎಸ್‌ಟಿ ಹಾಕಲಾಗಿದೆ. ತಿನ್ನುವ ಪದಾರ್ಥದ ಮೇಲೆ ಇಷ್ಟು ತೆರಿಗೆ ಹಾಕಬೇಕೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದೇ ಆಹಾರ ಪದಾರ್ಥದ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸಿತ್ತು. ರಾಹುಲ್ ಒಬ್ಬ "ಸುಳ್ಳಿನ ಸರದಾರ" ಎಂಬುದನ್ನು ಮತ್ತೆ ತೋರಿಸಿದ್ದಾರೆ ಎಂದು ಟೀಕಿಸಿದೆ.
-
- Price rise
— Bharat Jodo (@bharatjodo) October 14, 2022 " class="align-text-top noRightClick twitterSection" data="
- Unemployment
- Flawed GST
The Modi govt has much to answer for and through the #BharatJodoYatra, every Indian is asking questions. #JawabDoModipic.twitter.com/VyrEh3b072
">- Price rise
— Bharat Jodo (@bharatjodo) October 14, 2022
- Unemployment
- Flawed GST
The Modi govt has much to answer for and through the #BharatJodoYatra, every Indian is asking questions. #JawabDoModipic.twitter.com/VyrEh3b072- Price rise
— Bharat Jodo (@bharatjodo) October 14, 2022
- Unemployment
- Flawed GST
The Modi govt has much to answer for and through the #BharatJodoYatra, every Indian is asking questions. #JawabDoModipic.twitter.com/VyrEh3b072
ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಹಣದುಬ್ಬರವು 35 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ನಿರುದ್ಯೋಗ 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಪರೋಟಾಗಳಿಗೆ ಶೇ 18ರಷ್ಟು ಜಿಎಸ್‌ಟಿ ಏಕೆ ವಿಧಿಸಲಾಗುತ್ತಿದೆ?. ಕೃಷಿ ಕೆಲಸಕ್ಕಾಗಿ ಬಳಸುವ ಟ್ರ್ಯಾಕ್ಟರ್‌ಗಳ ಮೇಲೆ ಶೇ 12ರಷ್ಟು ತೆರಿಗೆ ಇದೆ. ತಿನ್ನುವ ಪದಾರ್ಥದ ಮೇಳೆ ಸಿಟ್ಟೇಕೆ ಎಂಬುದರ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ರಾಹುಲ್ ಗಾಂಧಿ ಕೋರಿದ್ದರು.
-
.@RahulGandhi's vision for employment generation and empowering the youth of India!#BharatJodoYatra pic.twitter.com/y5QsONHq23
— Bharat Jodo (@bharatjodo) October 14, 2022 " class="align-text-top noRightClick twitterSection" data="
">.@RahulGandhi's vision for employment generation and empowering the youth of India!#BharatJodoYatra pic.twitter.com/y5QsONHq23
— Bharat Jodo (@bharatjodo) October 14, 2022.@RahulGandhi's vision for employment generation and empowering the youth of India!#BharatJodoYatra pic.twitter.com/y5QsONHq23
— Bharat Jodo (@bharatjodo) October 14, 2022
ಇದಕ್ಕೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ಸುಳ್ಳು ಕತೆಗಳನ್ನು ಮುಂದುವರಿಸಿದ್ದಾರೆ. ಅವರೊಬ್ಬ "ಬದಲಿಸಲಾಗದ ಸುಳ್ಳುಗಾರ" ಎಂದು ಟೀಕಿಸಿದ್ದು, ಕಾಂಗ್ರೆಸ್ ಅವಧಿಯ ಸರ್ಕಾರದಲ್ಲಿ ಪರೋಟಾಕ್ಕೆ ಶೇ 28ರಷ್ಟು ತೆರಿಗೆ ಇತ್ತು. ಅದನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದ ಬಳಿಕ ಶೇ18ಕ್ಕೆ ಇಳಿದಿದೆ. ಇದು ರಾಹುಲ್ ಅವರಿಗೆ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದೆ.
-
Looks like bunch of jokers ... after hug , jog , push ups now this drama ....!!! https://t.co/k4MZcZVNLY
— B L Santhosh (@blsanthosh) October 13, 2022 " class="align-text-top noRightClick twitterSection" data="
">Looks like bunch of jokers ... after hug , jog , push ups now this drama ....!!! https://t.co/k4MZcZVNLY
— B L Santhosh (@blsanthosh) October 13, 2022Looks like bunch of jokers ... after hug , jog , push ups now this drama ....!!! https://t.co/k4MZcZVNLY
— B L Santhosh (@blsanthosh) October 13, 2022
'ಭಾರತ್ ಜೋಡೋ ಯಾತ್ರೆಯು ಸತ್ಯಗಳನ್ನೇ ಸುಳ್ಳು ಮಾಡುತ್ತಾ ಮತ್ತು ನಾಚಿಕೆಯಿಲ್ಲದ ತಿರುಚುವಿಕೆಗೆ ವೇದಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಳೆ ಹಣದುಬ್ಬರ ಕಡಿಮೆಯಾಗಿದೆ. ಆರ್ಥಿಕತೆ ಬೆಳೆದಿದೆ. ನಿರುದ್ಯೋಗವೂ ಕುಸಿದಿದೆ. ರಾಹುಲ್ ಗಾಂಧಿಗೆ 2019 ರ ಹಳೆಯ ಮಾಹಿತಿಯೇ ಮೂಲಾಧಾರವಾಗಿದೆ. ಅವರ ಎಲ್ಲ ಆರೋಪಗಳು ಸುಳ್ಳು ಎಂಬುದನ್ನು ತಜ್ಞರೇ ತಳ್ಳಿಹಾಕಿದ್ದಾರೆ. ಆದಾಗ್ಯೂ ರಾಹುಲ್ ಸುಳ್ಳನ್ನು ಮುಂದುವರಿಸಿದ್ದಾರೆ ಎಂದು ಸರಣಿ ಟ್ವೀಟ್ ಮಾಡಿದೆ.
ಬ್ರಿಟಿಷ್ ಕಾಲಕ್ಕಿಂತಲೂ ದುಬಾರಿ: ಅರವಿಂದ್ ಕೇಜ್ರಿವಾಲ್- ಇತ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಪರೋಟಾಕ್ಕೆ ಶೇ18 ಜಿಎಸ್‌ಟಿ ವಿಧಿಸಿದ್ದರ ವಿರುದ್ಧ ಕಿಡಿಕಾರಿದ್ದಾರೆ. ಬ್ರಿಟಿಷ್ ಕಾಲದಲ್ಲೂ ಕೂಡ ಇಷ್ಟು ಪ್ರಮಾಣದ ತೆರಿಗೆ ಇರಲಿಲ್ಲ ಎಂದು ಲೇವಡಿ ಮಾಡಿದ್ದಾರೆ.
ದೇಶದ ತಲೆದೋರುತ್ತಿರುವ ಹಣದುಬ್ಬರಕ್ಕೆ ದೊಡ್ಡ ಕಾರಣವೆಂದರೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಹೆಚ್ಚಿನ ಜಿಎಸ್ಟಿಯಾಗಿದೆ. ಅದನ್ನು ಮೊದಲು ಕಡಿಮೆ ಮಾಡಿದರೆ, ಜನರಿಗೆ ಇದರಿಂದ ಮುಕ್ತಿ ಸಿಗಲಿದೆ ಎಂದು ಹೇಳಿದ್ದಾರೆ.
ಓದಿ: ಪರೀಕ್ಷೆಯಲ್ಲಿ ನಕಲು ಶಂಕೆ: ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸಿದ ಶಿಕ್ಷಕರು... ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ