ರತ್ಲಾಮ್(ಮಧ್ಯಪ್ರದೇಶ): ಮಧ್ಯಪ್ರದೇಶದ ಅಂಬಾ ಗ್ರಾಮದಲ್ಲಿ ವಾಸವಾಗಿದ್ದ 18 ಮಂದಿ ಮುಸ್ಲಿಂ ಧರ್ಮ ತ್ಯಜಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಯಾವುದೇ ರೀತಿಯ ಒತ್ತಡವಿಲ್ಲದೇ ತಾವು ಧರ್ಮ ಬದಲಾವಣೆ ಮಾಡಿರುವುದಾಗಿ ಅವರು ತಿಳಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಹ ಬರೆದಿದ್ದಾರೆ.
ಕುಟುಂಬದ ಮುಖ್ಯಸ್ಥ ಮೊಹಮ್ಮದ್ ಶಾ ಇದೀಗ ರಾಮ್ ಸಿಂಗ್ ಆಗಿದ್ದು, ಕಳೆದ ಗುರುವಾರ ಭೀಮನಾಥ್ ದೇಗುಲದಲ್ಲಿ ಸ್ವಾಮಿ ಆನಂದಗಿರಿ ಮಹಾರಾಜರ ಸನ್ನಿಧಿಯಲ್ಲಿ ಎಲ್ಲರೂ ಗೋಮೂತ್ರ ಸ್ನಾನ ಮಾಡಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಇದನ್ನೂ ಓದಿ: ಸ್ನೇಹಿತನ ಮಾತು ಕೇಳಿ ಫಸ್ಟ್ನೈಟ್ ವೇಳೆ ವಯಾಗ್ರ ತೆಗೆದುಕೊಂಡ ನವ ವಿವಾಹಿತ.. ಮುಂದೆ ಆಗಿದ್ದೇ ಬೇರೆ!
ಈ ಎಲ್ಲ ಸದಸ್ಯರು ಅಲೆಮಾರಿಗಳಾಗಿದ್ದು, ಗಿಡಮೂಲಿಕೆ, ತಾಯತ ಕಟ್ಟುವ ಕಾಯಕ ಮಾಡ್ತಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಕ್ಕೂ ಮುಂಚಿತವಾಗಿ ಸ್ವಾಮಿ ಆನಂದಗಿರಿ ಮಹಾರಾಜರನ್ನ ಭೇಟಿಯಾಗಿ ಮಾತುಕತೆ ಸಹ ನಡೆಸಿದ್ದರು. ಇದರ ಬೆನ್ನಲ್ಲೇ ಕುಟುಂಬದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಮತಾಂತರವಾಗಿದ್ದಾರೆ.
ಮುಸ್ಲಿಂ ಕುಟುಂಬ ಕಳೆದ ಅನೇಕ ವರ್ಷಗಳಿಂದ ಅಂಬಾ ಗ್ರಾಮದ ಹೊರ ವಲಯದಲ್ಲಿ ವಾಸವಾಗಿದ್ದು, ಮಸೀದಿಗೆ ಮಾತ್ರ ಹೋಗಿಲ್ಲ. ಕೆಲವೊಮ್ಮೆ ದರ್ಗಾಕ್ಕೆ ಮಾತ್ರ ಹೋಗಿ ಬರುತ್ತಿದ್ದರು.