ಮುಂಬೈ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಅಧಿಕವಾಗುತ್ತಲೇ ಇವೆ. ಇಂದು ಹೊಸದಾಗಿ 17,864 ಪ್ರಕರಣಗಳು ವರದಿಯಾಗಿವೆ. 87 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಸದ್ಯ, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,47,328 ಏರಿಕೆ ಆಗಿದೆ. ಮೃತಪಟ್ಟವರ ಸಂಖ್ಯೆ 52,996 ತಲುಪಿದೆ. ಇಂದು 9,510 ಜನ ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇದುವರೆಗೆ ಗುಣಮುಖರಾದವರ ಸಂಖ್ಯೆ 21,54,253 ಆಗಿದೆ. ಒಟ್ಟು 1,38,813 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: Karnataka Covid Update: ಇಂದು ಸಾವಿರ ದಾಟಿದ ಸೋಂಕಿತರ ಸಂಖ್ಯೆ; 6 ಮಂದಿ ಬಲಿ
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಾಜ್ಯದಲ್ಲಿ ಹಲವು ಬಾರಿ 17 ಸಾವಿರಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಮಂಗಳವಾರ, ಪುಣೆ ನಗರದಲ್ಲಿ ಅತಿ ಹೆಚ್ಚು 1,954 ಪ್ರಕರಣಗಳು ವರದಿಯಾಗಿವೆ. ನಾಗ್ಪುರದಲ್ಲಿ 1,951 ಮತ್ತು ಮುಂಬೈ ನಗರದಲ್ಲಿ 1,922 ಪ್ರಕರಣಗಳು ದಾಖಲಾಗಿವೆ.