ETV Bharat / bharat

ಹಣ್ಣು ನೀಡುವ ನೆಪದಲ್ಲಿ ತೋಟಕ್ಕೆ ಕರೆದು ಸಾಮೂಹಿಕ ಅತ್ಯಾಚಾರ: ಉತ್ತರ ಪ್ರದೇಶದಲ್ಲಿ ಹೇಯಕೃತ್ಯ - 17 ವರ್ಷದ ಹುಡುಗಿ ಮೇಲೆ ರೇಪ್​

ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಿರುವ ಕಾಮುಕರು ಕೃತ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

UP Gang rape
UP Gang rape
author img

By

Published : Sep 20, 2021, 4:11 PM IST

Updated : Sep 20, 2021, 4:23 PM IST

ಮುಜಾಫರ್​​​ನಗರ(ಉತ್ತರ ಪ್ರದೇಶ): ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದಂತಹ ದುಷ್ಕೃತ್ಯಗಳು ನಿಲ್ಲುತ್ತಿಲ್ಲ. ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಮತ್ತೊಂದು ಹೇಯಕೃತ್ಯ ವರದಿಯಾಗಿದೆ.

ಇಲ್ಲಿ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಾಮುಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಭೋಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಭಾನುವಾರ ಘಟನೆ ನಡೆದಿದೆ. ಪೊಲೀಸರು ಆರೋಪಿಗಳಾದ ಶುಭಂ ಹಾಗೂ ಆಶಿಶ್​ ಎಂಬವರ ಮೇಲೆ ಎಫ್‌ಐಆರ್ ದಾಖಲಿಸಿದ್ದು ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್​ ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್‌ನ ಉನ್ನತಾಧಿಕಾರ ಹಿಡಿಯುವ CSS ಪರೀಕ್ಷೆ ಪಾಸ್‌ ಮಾಡಿದ ಹಿಂದೂ ಯುವತಿ: 73 ವರ್ಷಗಳ ನಂತರದ ಸಾಧನೆ

ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳು ಹಣ್ಣು ನೀಡುವ ನೆಪದಲ್ಲಿ ತೋಟಕ್ಕೆ ಬರುವಂತೆ ತಿಳಿಸಿದ್ದಾರೆ. ಆ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಂದು ತಿಳಿಸಿದ್ದಾರೆ.

ಮುಜಾಫರ್​ನಗರದಲ್ಲೇ ನಡೆದಿರುವ ಮತ್ತೊಂದು ಘಟನೆಯಲ್ಲಿ ವ್ಯಕ್ತಿಯೋರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾನೆ. ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮುಂಬೈನಲ್ಲಿ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ, ತದನಂತರ ಆಕೆಯ ಖಾಸಗಿ ಭಾಗದಲ್ಲಿ ರಾಡ್​ ತುರುಕಿ ವಿಕೃತಿ ಮೆರೆದಿದ್ದ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಪ್ರಾಣ ಕಳೆದುಕೊಂಡಿದ್ದಳು.

Last Updated : Sep 20, 2021, 4:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.