ತಂಜಾವೂರು(ತಮಿಳುನಾಡು): 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ 12 ವರ್ಷದ ಬಾಲಕನೋರ್ವನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಯಿಂದ ತಂಜಾವೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ.
ಶಾಲೆ ಬಿಟ್ಟಿರುವ 17 ವರ್ಷದ ಬಾಲಕಿಯೋರ್ವಳು ಕಳೆದ ಕೆಲ ದಿನಗಳಿಂದ ಅಸ್ವಸ್ಥಳಾಗಿದ್ದಳು. ಆದರೆ, ಈ ವಿಷಯ ಪೋಷಕರಿಂದ ಮುಚ್ಚಿಟ್ಟಿದ್ದಳು. ಆದರೆ, ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಏಪ್ರಿಲ್ 17ರಂದು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿದೆ. ಜೊತೆಗೆ ಹೆಣ್ಣು ಮಗುವಿಗೆ ಬಾಲಕಿ ಜನ್ಮ ಸಹ ನೀಡಿದ್ದಾಳೆ. ಬಾಲಕಿ ಮಗುವಿಗೆ ಜನ್ಮ ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆ ತಂಜಾವೂರಿನ ಮಹಿಳಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ತೆರಳಿ ಬಾಲಕಿ ವಿಚಾರಣೆಗೊಳಪಡಿಸಲಾಗಿದ್ದು, ಈ ವೇಳೆ ಪಕ್ಕದ ಮನೆಯಲ್ಲಿ ವಾಸವಾಗಿದ್ದ 12 ವರ್ಷದ ಬಾಲಕ ದುಷ್ಕೃತ್ಯವೆಸಗಿರುವುದು ಬಹಿರಂಗಪಡಿಸಿದ್ದಾಳೆ.
ಇದನ್ನೂ ಓದಿ: ಸಿಗ್ನಲ್ಗೆ ಬಟ್ಟೆ ಕಟ್ಟಿ, ಸಿಂಕದರಾಬಾದ್-ಮುಂಬೈ ಎಕ್ಸ್ಪ್ರೆಸ್ ರೈಲು ನಿಲ್ಲಿಸಿ ಕಳ್ಳರ ದರೋಡೆ
ಇದಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರನ್ನು ವಿಚಾರಣೆಗೊಳಪಡಿಸಿದಾಗ ತಮಗೆ ಇದರ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಬಾಲಕಿ ನೀಡಿರುವ ಮಾಹಿತಿ ಆಧಾರದ ಮೇಲೆ 12 ವರ್ಷದ ಬಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಅಪ್ರಾಪ್ತೆಗೆ ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಇನ್ನು ಬಾಲಕಿ ಗರ್ಭಿಣಿಯಾಗಲು 12 ವರ್ಷದ ಬಾಲಕನೇ ಕಾರಣವೇ ಅಥವಾ ಬೇರೆಯವರ ಕೈವಾಡವಿದೆಯೇ ಎಂಬುದರ ಬಗ್ಗೆ ಪೊಲೀಸರು ಗಂಭೀರವಾದ ತನಿಖೆ ನಡೆಸುತ್ತಿದ್ದಾರೆ.