ಹೈದರಾಬಾದ್: ಪ್ರೀತಿ, ಪ್ರೇಮ ಅಂತಾ ಮನಸ್ಸು ಕೆಡಿಸಿಕೊಂಡ 16 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ನಾರಾಯಣಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಕಿಂಗ್ಕೋಟಿಯ ವರ್ದಾಗೇಟ್ ನಿವಾಸಿಯಾದ ಬಾಲಕ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಆದ್ರೆ ಈ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂದು ಸುತ್ತಾಡುತ್ತಿದ್ದ. ಈ ಸಂಗತಿ ಮನೆಯಲ್ಲಿ ತಿಳಿದಿದೆ. ಪೋಷಕರು ಅನೇಕ ಬಾರಿ ಮಗನಿಗೆ ಬುದ್ಧಿಮಾತು ಹೇಳಿದ್ದಾರೆ. ಆದರೂ ಪ್ರೇಮ ವ್ಯವಹಾರ ಮುಂದುವರಿಸಿದ್ದಾನೆ.
ಸೋಮವಾರ ಮತ್ತೆ ಪೋಷಕರು ಇದೇ ವಿಷಯದ ಬಗ್ಗೆ ಬುದ್ಧಿಮಾತು ಹೇಳಿದ್ದಾರೆ. ಇದರಿಂದಾಗಿ ತೀವ್ರ ಮನನೊಂದ ಬಾಲಕ ಅದೇ ದಿನ ಮಧ್ಯರಾತ್ರಿ ಕೊಠಡಿಗೆ ತೆರಳಿ ಬಾಗಿಲು ಮುಚ್ಚಿಕೊಂಡಿದ್ದಾನೆ. ಬಹಳ ಸಮಯವಾದ್ರೂ ಮಗ ಹೊರಗೆ ಬರಲಿಲ್ಲ ಎಂದು ಕಿಟಕಿ ಮೂಲಕ ಪೋಷಕರು ತೆರಳಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ಕುರಿತು ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.