ETV Bharat / bharat

ಮಾತನಾಡುವ ರೋಬೋಟ್​ ತಯಾರಕ ಈ 14ರ ಪೋರ ಸಿಡಾನ್​..!

ಕೇರಳದ ಪತ್ತನಂತಿಟ್ಟದ 9ನೇ ತರಗತಿ ವಿದ್ಯಾರ್ಥಿ ಸಿಡಾನ್ ಹಲವು ವಿಫಲ ಪ್ರಯತ್ನಗಳ ನಂತರ ಅಂತಿಮವಾಗಿ 'ರಾಸ್ಪಿ' ಎಂಬ ಮಾತನಾಡಬಲ್ಲ ರೋಬೋಟ್​ ಅನ್ನು ತಾನೇ ಅಭಿವೃದ್ಧಿಪಡಿಸಿ ಊರಿನ ಶಾಲೆಯಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾನೆ. ಈತ ತಯಾರಿಸಿರುವ ರೋಬೋಟ್​ ಸಿಡಾನ್​ ನೀಡಿದ ಆಜ್ಞೆಗಳ ಪ್ರಕಾರ ಕೆಲಸ ಮಾಡುತ್ತಿದ್ದು, ಈ ಹುಡುಗನೇ ಅಭಿವೃದ್ಧಿ ಪಡಿಸಿರುವ ಸಂವಾದಾತ್ಮಕ ಸಾಫ್ಟ್​ವೇರ್​ ಸಿಡಾನ್​ ಧ್ವನಿ ಗುರುತಿಸಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

Sidan developed raspi-an-interactive-robot
ಮಾತನಾಡುವ ರೋಬೋಟ್​ ತಯಾರಿಸಿದ ಪತ್ತನಂತಿಟ್ಟಿನ ಸಿಡಾನ್​
author img

By

Published : Mar 15, 2022, 4:10 PM IST

Updated : Mar 15, 2022, 9:10 PM IST

ಪತ್ತನಂತಿಟ್ಟ(ಕೇರಳ): ರಾಜ್ಯದ ಪತ್ತನಂತಿಟ್ಟದ 9ನೇ ತರಗತಿ ವಿದ್ಯಾರ್ಥಿ ಸಿಡಾನ್ ಹಲವು ವಿಫಲ ಪ್ರಯತ್ನಗಳ ನಂತರ ಅಂತಿಮವಾಗಿ 'ರಾಸ್ಪಿ' ಎಂಬ ಮಾತನಾಡಬಲ್ಲ ರೋಬೋಟ್​ ಅನ್ನು ತಾನೇ ಅಭಿವೃದ್ಧಿಪಡಿಸಿ ದೇಶದ ಗಮನ ಸೆಳೆದಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಶಾಲೆಯಲ್ಲಿ ನಾಯಕನಾಗಿ ಹೊರಹೊಮ್ಮಿದ್ದಾನೆ.

ಈತ ತಯಾರಿಸಿರುವ ರೋಬೋಟ್​ ಸಿಡಾನ್​ ನೀಡಿದ ಆಜ್ಞೆಗಳ ಪ್ರಕಾರ ಕೆಲಸ ಮಾಡುತ್ತಿದ್ದು, ಈ ಹುಡುಗನೇ ಅಭಿವೃದ್ಧಿ ಪಡಿಸಿರುವ ಸಂವಾದಾತ್ಮಕ ಸಾಫ್ಟ್​ವೇರ್​ ರೋಬೋಟ್​ ಸಿಡಾನ್​ ಧ್ವನಿ ಗುರುತಿಸಿ, ಇಂಟರ್​ನೆಟ್​ನಲ್ಲಿ ಹುಡುಕಲು, ಅತ್ತಿತ್ತ ಚಲಿಸಲು, ಹೇಳಿದ ಕೆಲಸ ಮಾಡಲು ಸಹಾಯ ಮಾಡುತ್ತದೆ. ‘ಆಂಡ್ರಾಯ್ಡ್ ಕುಂಜಪ್ಪನ್’ ಎಂಬ ಸಿನಿಮಾ ಮಲಯಾಳಂನಲ್ಲಿ ಯಶಸ್ವಿಯಾಗಿತ್ತು. ಒಂಟಿ ಮುದುಕನಿಗೆ ಮನೆಕೆಲಸಗಳಲ್ಲಿ ಸಹಾಯ ಮಾಡಲೆಂದು ತರುವ ಮಾತನಾಡಬಲ್ಲ ರೋಬೋಟ್‌ನೊಂದಿಗೆ ಬಾಂಧವ್ಯ ಬೆಳೆಯುವ ಕುರಿತು ಆ ಸಿನಿಮಾ ಕಥೆಯಿದೆ. ಆದರೆ ಸಿಡಾನ್ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಇಂತಹ ರೋಬೋಟ್ ತಯಾರಿಸುವ ಕನಸು ಕಂಡಿದ್ದನು. ಅದಕ್ಕಾಗಿ ಹಲವಾರು ಬಾರಿ ಪ್ರಯತ್ನಪಟ್ಟು ಕೈಸುಟ್ಟುಕೊಂಡಿದ್ದನು. ಆದರೆ ಆ ಎಲ್ಲ ವಿಫಲ ಪ್ರಯತ್ನಗಳನ್ನು ದಾಟಿ ಅಂತಿಮವಾಗಿ ರಾಸ್ಪಿ ಎಂಬ ಸಂವಾದಾತ್ಮಕ ರೋಬೋಟ್ ಅನ್ನು ಸ್ವತಃ ತಾನೇ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಮಾತನಾಡುವ ರೋಬೋಟ್​ ತಯಾರಕ ಈ 14ರ ಪೋರ ಸಿಡಾನ್​..!

ಸಂವಹನ ಸಾಪ್ಟ್​ವೇರ್​ ಅಭಿವೃದ್ಧಿ: ಮಕ್ಕಳು ಯೂಟ್ಯೂಬ್​ ಉಪಯೋಗಿಸಿ ಹಾಳಾಗುತ್ತಾರೆ ಎಂಬ ಮಾತಿಗೆ ಅಪವಾದವೆನ್ನುವಂತೆ ಸಿಡಾನ್​ ಯೂಟ್ಯೂಬ್‌ನಿಂದಲೇ ನಿಟ್ಟಿ-ಗ್ರಿಟ್ಟಿಯನ್ನು ಕಲಿತು ಮಾನವನಂತೆಯೇ ಇರುವ ಈ ರೋಬೋಟ್ ಅನ್ನು ತಯಾರಿಸಿದ್ದಾನೆ. ತನ್ನ ಭಾಷೆಯನ್ನು ರೋಬೋಟ್​ಗೆ ಪರಿಚಯಿಸಲು ಅಗತ್ಯವಿದ್ದ ಸಂವಹನ ಸಾಫ್ಟ್​ವೇರ್​ ತಯಾರಿಕೆಗಾಗಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆ ಪೈಥಾನ್ ಅನ್ನು ಸಹ ಕಲಿತು ಯಶಸ್ವಿಯಾಗಿದ್ದಾನೆ. ರಾಸ್ಪಿ ರೋಬೋಟ್​ ಸಂಪೂರ್ಣವಾಗಿ ತಯಾರಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಸಿಡಾನ್​ ತನ್ನ ನೆರೆಹೊರೆಯಲ್ಲಿ ಮತ್ತು ಶಾಲೆಯಲ್ಲಿ ಒಬ್ಬ ಹೀರೋ ಆಗಿ ಕಾಣಿಸಿಕೊಂಡಿದ್ದಾನೆ.

Sidan developed raspi-an-interactive-robot
ಮಾತನಾಡುವ ರೋಬೋಟ್​ ತಯಾರಿಸಿದ ಪತ್ತನಂತಿಟ್ಟಿನ ಸಿಡಾನ್​

ಬಾಲ್ಯದಲ್ಲೇ ಎಲೆಕ್ಟ್ರಾನಿಕ್ಸ್​ ಮೇಲೆ ಆಸಕ್ತಿ: ಸಿಡಾನ್​ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಅವನ ಅಮ್ಮ ತಂದು ಕೊಟ್ಟ ಎಲೆಕ್ಟ್ರಾನಿಕ್​ ಆಟಿಕೆಯಿಂದ ಆತನಲ್ಲಿ ಈ ಯಾಂತ್ರಿಕ ವಸ್ತುಗಳ ತಯಾರಿಕೆಯ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು. ಆ ಆಸಕ್ತಿಯಿಂದಲೇ ರೋಬೋಟ್​ ತಯಾರಿಸುವ ಮೊದಲೇ ರಿಮೋಟ್​ ಸಹಾಯದಿಂದ ಮನೆ ಸ್ವಚ್ಛಗೊಳಿಸುವಂತಹ ಸ್ವಯಂಚಾಲಿತ ಬ್ರಷ್​ ಒಂದನ್ನು ತಯಾರಿಸಿದ್ದನು. ಆನಂತರದಲ್ಲಿ ತನಗಾಗಿ ನಾಲ್ಕು ಚಕ್ರದ ವಾಹನವೊಂದನ್ನು ಮತ್ತು ಅಂಧರಿಗೆ ಸಹಾಯವಾಗುವಂತೆ ಮುಂದೆ ಬರುವ ಅಡೆತಡೆಗಳ ಬಗ್ಗೆ ಎಚ್ಚರಿಕೆ ನೀಡಬಲ್ಲ ವಾಕಿಂಗ್ ಸ್ಟಿಕ್ ಅನ್ನು ತಯಾರಿಸಿ ಶಹಭಾಸ್​ಗಿರಿ ಗಿಟ್ಟಿಸಿಕೊಂಡಿದ್ದ ಈ 14ರ ಪೋರ.

ಸಿಡಾನ್​ಗೆ ಹುಮನಾಯ್ಡ್ ರೋಬೋಟ್​ ಮಾಡುವ ಕನಸಿದ್ದು, ಅದಕ್ಕಾಗಿ ರೋಬೋಟಿಕ್​ ಇಂಜಿನಿಯರಿಂಗ್​ ಮಾಡುವ ಆಸೆಯಿದೆ.

Last Updated : Mar 15, 2022, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.