ಅನಂತಪುರ(ಆಂಧ್ರಪ್ರದೇಶ): ಇಬ್ಬರೂ ಅಪ್ರಾಪ್ತರು ಅನಂತಪುರ ಜಿಲ್ಲೆಯ ರಾಯದುರ್ಗ ಪಟ್ಟಣದ ಮೂಲದವರು. ಇಬ್ಬರೂ ಒಂದೇ ಕಾಲೋನಿಯಲ್ಲಿ ವಾಸಿವಿದ್ದರು. ಇಬ್ಬರೂ ಒಟ್ಟಿಗೆ ನೃತ್ಯ ತರಗತಿಗಳಿಗೆ ಹೋಗುತ್ತಿದ್ದರು. ಈ ಪೈಕಿ ರಾಜಶೇಖರ್ ಎಂಬ ಬಾಲಕ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ, ತಂದೆ-ತಾಯಿಯನ್ನು ಪೋಷಿಸಲು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ರಾಜಶೇಖರ್ ಕುಟುಂಬ ಸದಸ್ಯರೊಂದಿಗೆ ಯುಗಾದಿ ಹಬ್ಬ ಆಚರಿಸಲು ಮನೆಗೆ ಬಂದಿದ್ದರು. ಆದರೆ, ಬೆಂಗಳೂರಿನಿಂದ ಬಂದಿದ್ದ ರಾಜಶೇಖರ್, ತನ್ನ ಮನೆಯ ಸಮೀಪ ವಾಸವಿದ್ದ 8ನೇ ತರಗತಿಯ (13 ವರ್ಷ) ಬಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದರಿಂದ 8ನೇ ತರಗತಿ ವಿದ್ಯಾರ್ಥಿಗೆ ಕೋಪ ತಂದಿತ್ತು. ಈ ವಿಚಾರವಾಗಿ ಇಬ್ಬರಿಗೂ ಜಗಳವಾಗಿತ್ತು. ಈ ಜಗಳ ಕೊಂಚ ದೊಡ್ಡದಾಗಿದೆ. ಕೋಲಿನಿಂದ ಹೊಡೆಯುವ ಹಂತ ತಲುಪಿತು.
ಮಾರ್ಗ ಮಧ್ಯ ಮೃತಪಟ್ಟ ಬಾಲಕ: ಇಬ್ಬರೂ ಕಲ್ಲು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಘರ್ಷಣೆಯಲ್ಲಿ ರಾಜಶೇಖರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ರಾಜಶೇಖರ್ನನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳುತ್ತಾರೆ ಸ್ಥಳೀಯರು. ಆದರೆ, ಸ್ಥಳೀಯ ಸಮುದಾಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಉತ್ತಮ ಚಿಕಿತ್ಸೆಗಾಗಿ ಅನಂತಪುರಕ್ಕೆ ಸಾಗಿಸುವಷ್ಟರಲ್ಲಿ ರಾಜಶೇಖರ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ಗೇಟ್ ಬಿದ್ದು ಬಾಲಕ ಸಾವು
ರಾಜಶೇಖರ್ ತಲೆಗೆ ದೊಣ್ಣೆಯಿಂದ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಅನಂತಪುರಕ್ಕೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೋಷಕರು ರಾಜಶೇಖರ್ ನೆನೆದು ಕಣ್ಣೀರು ಇಡುತ್ತಿದ್ದಾರೆ.
ಪೊಲೀಸರು ಹೇಳಿದ್ದೇನು?: ''17 ವರ್ಷದ ಅಪ್ರಾಪ್ತ ರಾಜಶೇಖರ್, ಮತ್ತೋರ್ವ 13 ವರ್ಷದ ಬಾಲಕನೊಂದಿಗೆ ಜಗಳವಾಡಿದ್ದಾನೆ. ನಿನ್ನೆಯೂ ಇಬ್ಬರ ನಡುವೆ ಜಗಳವಾಗಿತ್ತು. ಇಬ್ಬರ ನಡುವೆ ಚಿಕ್ಕ ವಿಚಾರಕ್ಕೆ ಜಗಳವಾಗಿದೆ. 8ನೇ ತರಗತಿ ಓದುತ್ತಿದ್ದ ಬಾಲಕ, ರಾಜಶೇಖರ್ನಿಗೆ ದೊಣ್ಣೆಯಿಂದ ಹೊಡೆದ್ದಾನೆ. ತೀವ್ರವಾಗಿ ಗಾಯಗೊಂಡ ರಾಜಶೇಖರ್ನನ್ನು ಹೆಚ್ಚಿನ ಚಿಕಿತ್ಸೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲೇ ಮೃತಪಟ್ಟಿದ್ದಾನೆ ಎಂದು ಸಿಐ ಯುಗಂಧರ್ ತಿಳಿಸಿದರು.
ಇದನ್ನೂ ಓದಿ: ಕೇರಳದ ಆದಿವಾಸಿ ಜನಾಂಗದ ಮಧು ಹತ್ಯೆ ಪ್ರಕರಣ: 14 ಮಂದಿ ದೋಷಿ ಎಂದು ಪ್ರಕಟಿಸಿದ ಕೋರ್ಟ್
ಮನೆಯೊಂದರ ಗೇಟ್ ಬಿದ್ದು ಬಾಲಕ ಸಾವು: ನಿರ್ಮಾಣ ಹಂತದ ಮನೆಯೊಂದರ ಗೇಟ್ ಬಿದ್ದು 7 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಟೂರ ರಸ್ತೆಯ ಗಣೇಶ್ ಕಾಲೋನಿಯ ಮನೆಯೊಂದರ ಸಮೀಪ ಬಾಲಕ ಆಟವಾಡುತ್ತಿದ್ದಾಗ ಘಟನೆ ನಡೆದಿದೆ. ಗಾಯಾಳು ಬಾಲಕನನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಆತ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಹೆತ್ತ ಶಿಶುವನ್ನು ಬಕೆಟ್ನಲ್ಲಿ ಬಿಟ್ಟು ಆಸ್ಪತ್ರೆಗೆ ತೆರಳಿದ ತಾಯಿ: ಪೊಲೀಸರು ಮಗುವನ್ನು ರಕ್ಷಿಸಿದ್ದು ಹೀಗೆ..