ETV Bharat / bharat

ಆಫ್ರಿಕಾದಿಂದ 12 ಚಿರತೆಗಳು ಭಾರತಕ್ಕೆ ಆಗಮನ: ಚೀತಾಗಳ ಕುರಿತು ಪ್ರಮುಖ ಅಂಶಗಳಿವು..

ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನವು ಇಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತಂದಿದೆ. ಚೀತಾಗಳು ಭಾರತಕ್ಕೆ ಮರು ಪರಿಚಯಿಸುವ ಅಂತರ್ ಸರ್ಕಾರಿ ಒಪ್ಪಂದದ ಭಾಗವಾಗಿ 12 ದಕ್ಷಿಣ ಆಫ್ರಿಕಾದ ಚಿರತೆಗಳು ಇಂದು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿವೆ.

Etv Bharat
ಆಫ್ರಿಕಾದಿಂದ 12 ಚಿರತೆಗಳು ಭಾರತಕ್ಕೆ ಆಗಮನ
author img

By

Published : Feb 18, 2023, 12:09 PM IST

Updated : Feb 18, 2023, 1:53 PM IST

ಗ್ವಾಲಿಯರ್​( ಮಧ್ಯಪ್ರದೇಶ): ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನ ಇಂದು (ಶನಿವಾರ) ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತಂದಿದೆ. ಚಿರತೆಗಳನ್ನು ಭಾರತಕ್ಕೆ ಮರು ಪರಿಚಯಿಸುವ 'ಅಂತರ್ ಸರ್ಕಾರಿ ಒಪ್ಪಂದ'ದ ಭಾಗವಾಗಿ 12 ದಕ್ಷಿಣ ಆಫ್ರಿಕಾದ ಚಿರತೆಗಳು ಇಂದು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿವೆ. ಇದನ್ನು ಅಲ್ಲಿನ ಆಡಳಿತ ಮಂಡಳಿ ಸ್ವಾಗತಿಸಿದೆ. ಇದೊಂದು ಮಹತ್ವ ಮತ್ತು ಭರವಸೆಯ ಕಾರ್ಯಚರಣೆಯಾಗಿದೆ ಎಂದು ಮಧ್ಯಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.

  • #WATCH | 12 Cheetahs loaded onto the Galaxy Globemaster C17 of Indian Air Force. The aircraft is expected to reach Madhya Pradesh's Gwalior at around 10 am today.

    (Video source: South African Department of Forestry, Fisheries and Environment's Twitter handle) pic.twitter.com/jGE4IoD3hi

    — ANI (@ANI) February 17, 2023 " class="align-text-top noRightClick twitterSection" data=" ">

ಈ 12 ಚೀತಾಗಳು ಕಳೆದ ವರ್ಷ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆಯಾದ ನೆರೆಯ ನಮೀಬಿಯಾದಿಂದ 8 ಇತರ ಚೀತಾಗಳನ್ನು ಸೇರಲಿವೆ. 12 ಚೀತಾಗಳು ಭಾರತಕ್ಕೆ ತಮ್ಮ ಪ್ರಯಾಣವನ್ನು ಆರಂಭಿಸಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಶುಕ್ರವಾರ ಟ್ವೀಟ್ ಮಾಡಿದ್ದರು. ಅಲ್ಲದೇ ಅವು ಶನಿವಾರ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದರು.

12 ಚೀತಾಗಳ ಕುರಿತು ಪ್ರಮುಖ ಅಂಶಗಳು: 12 ಚೀತಾಗಳನ್ನು ಕ್ರೇಟ್‌ಗಳಲ್ಲಿ ಇಡಲಾಗಿದೆ ಮತ್ತು ಜೋಹಾನ್ಸ್‌ಬರ್ಗ್‌ನ ಟ್ಯಾಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದವು. ಭಾರತೀಯ ವಾಯುಪಡೆಯ C-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಹೊತ್ತು ತಂದಿದೆ. ಈ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುವುದು.

  • The 12 cheetahs arriving from South Africa, under the visionary leadership of PM Shri @narendramodi ji to restore our ecological balance, have begun their journey to India.

    Indian Air Force's C-17 Globemaster aircraft will get them home tomorrow.

    Get ready to welcome them. pic.twitter.com/MRlDejQQlo

    — Bhupender Yadav (@byadavbjp) February 17, 2023 " class="align-text-top noRightClick twitterSection" data=" ">

7 ಗಂಡು ಮತ್ತು 5 ಹೆಣ್ಣು ಚೀತಾಗಳು ಮುಂದಿನ ದಶಕದಲ್ಲಿ ದಕ್ಷಿಣ ಆಫ್ರಿಕಾ ಭಾರತಕ್ಕೆ ಭರವಸೆ ನೀಡಿದಂತೆ ಮೊದಲನೇ ಹಂತದ ಯೋಜನೆಗೆ ಚಾಲನೆ ನೀಡಿದೆ. ಆಫ್ರಿಕನ್ ಚೀತಾವನ್ನು ಹೋಲುವ ಇತರ ಉಪಜಾತಿ ಚೀತಾಗಳು ಅತ್ಯಂತ ವೇಗವಾಗಿ ಓಡುವ ಪ್ರಾಣಿಯಾಗಿತ್ತು. ಆದರೆ 1952ರಲ್ಲಿ ಈ ಜಾತಿಯ ಚೀತಾ ನಾಶವಾಗಿದ್ದವು. ದಕ್ಷಿಣ ಆಫ್ರಿಕಾ ಮತ್ತು ಭಾರತ ಸರ್ಕಾರ ಭಾರತಕ್ಕೆ ಚೀತಾಗಳ ಮರು ಪರಿಚಯಕ್ಕೆ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದ್ದವು. ಫೆ.ಯಲ್ಲಿ 12 ಚೀತಾಗಳನ್ನು ಆಮದು ಮಾಡಿಕೊಂಡ ನಂತರ, ಮುಂದಿನ 8 ರಿಂದ 10 ವರ್ಷಗಳವರೆಗೆ ವಾರ್ಷಿಕವಾಗಿ ಇನ್ನೂ 12 ಚಿರತೆಗಳನ್ನು ಸ್ಥಳಾಂತರಿಸುವ ಯೋಜನೆ ಇದೆ. ಅಂತಹ ಸ್ಥಳಾಂತರಗಳನ್ನು ತಿಳಿಸಲು ನಿಯತಕಾಲಿಕವಾಗಿ ವೈಜ್ಞಾನಿಕ ಮೌಲ್ಯಮಾಪನ ಕೈಗೊಳ್ಳಲಾಗುತ್ತದೆ.

  • #WATCH | Madhya Pradesh CM Shivraj Singh Chouhan releases the second batch of 12 Cheetah brought from South Africa, to their new home Kuno National Park in Madhya Pradesh. pic.twitter.com/uQuWQRcqdh

    — ANI (@ANI) February 18, 2023 " class="align-text-top noRightClick twitterSection" data=" ">

8 ನಮೀಬಿಯಾದ ಚಿರತೆಗಳು ಈಗಾಗಲೇ ಭಾರತದಲ್ಲಿ ವಾಸವಾಗಿವೆ. 6 ಚದರ ಕಿಮೀ ಪ್ರದೇಶದಲ್ಲಿ ಅವು ಪರಸ್ಪರ ಸಂವಹನ ನಡೆಸುತ್ತವೆ. ಅದನ್ನು ಕಾಡಿಗೆ ಬಿಡುವ ಮೊದಲು ಅದು ಮೂರು ನಾಲ್ಕು ದಿನಗಳಿಗೊಮ್ಮೆ ಬೇಟೆಯಾಡುತ್ತವೆ. ಈ ಚೀತಾಗಳು ಉತ್ತಮ ಆರೋಗ್ಯ ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 12 ಚೀತಾಗಳು ಕಾಡಿನಲ್ಲಿ ಜನಿಸಿರುವುದು ಮತ್ತು ಸಿಂಹಗಳು, ಚಿರತೆಗಳು, ಹೈನಾಗಳು ಮತ್ತು ಕಾಡು ನಾಯಿಗಳು ಸೇರಿದಂತೆ ಎಲ್ಲ ಪ್ರಾಣಿಗಳ ಜತೆಗೆ ಬೆಳೆದಿದೆ ಮತ್ತು ಬೇಟೆಯಾಡುತ್ತವೆ.

ಇದನ್ನೂ ಓದಿ: 70 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಹೆಜ್ಜೆ ಇಟ್ಟ ಆಫ್ರಿಕನ್​​​ ಚೀತಾ.. ಏನಿದರ ವಿಶೇಷತೆ?

ಚಿರತೆಗಳನ್ನು ಫಿಂಡಾ ಗೇಮ್ ರಿಸರ್ವ್ (3), ತ್ಸ್ವಾಲು ಕಲಹರಿ ರಿಸರ್ವ್ (3), ವಾಟರ್‌ಬರ್ಗ್ ಬಯೋಸ್ಫಿಯರ್ (3), ಕ್ವಾಂಡ್ವೆ ಗೇಮ್ ರಿಸರ್ವ್ (2) ಮಾಪೆಸು ಗೇಮ್ ರಿಸರ್ವ್ (1) ಮೂಲಕ ಲಭ್ಯವಾಗಿದೆ. ಅಂತರರಾಷ್ಟ್ರೀಯ ಪಶು ವೈದ್ಯಕೀಯ ಮಾನದಂಡಗಳು ಮತ್ತು ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಇವುಗಳನ್ನು ಭಾರತಕ್ಕೆ ತರಲಾಗಿದೆ. ವಿಶ್ವಾದ್ಯಂತ, ಚೀತಾಗಳ ಸಂಖ್ಯೆ 1975ರಲ್ಲಿ ಅಂದಾಜು 15,000 ದಿಂದ 7,000 ಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದೆ ಎಂದು ವರದಿಯಾಗಿದೆ.

ಕುನೋ ಅಭಯಾರಣ್ಯದಲ್ಲಿ ಉಪಸ್ಥಿತರಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ಈ 12 ಚಿರತೆಗಳನ್ನು ದೊಡ್ಡ ಅಭಯಾರಣ್ಯದಲ್ಲಿ ಬಿಡುತ್ತಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಅರಣ್ಯ ಸಚಿವ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಧ್ಯಪ್ರದೇಶದ ಅರಣ್ಯ ಸಚಿವರು ಭಾಗವಹಿಸಲಿದ್ದಾರೆ.

ಪಿಎಂ ಮೋದಿ ಜನ್ಮದಿನದಂದು ಬಂದಿದ್ದ 8 ಆಫ್ರಿಕನ್ ಚಿರತೆಗಳು: ಕಳೆದ ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ನಮೀಬಿಯಾದಿಂದ 8 ಚಿರತೆಗಳನ್ನು ತರಲಾಗಿತ್ತು. ಕುನೋದಲ್ಲಿ ಪ್ರಧಾನಿ ಮೋದಿ ಅವರೇ ಅಭಯಾರಣ್ಯಕ್ಕೆ ಬಿಟ್ಟಿದ್ದರು.

ಇದನ್ನೂ ಓದಿ: ಆಫ್ರಿಕನ್​ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ

Last Updated : Feb 18, 2023, 1:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.