ETV Bharat / bharat

ಪರೀಕ್ಷೆ ರದ್ದು ಕೋರಿ ಸುಪ್ರೀಂಕೋರ್ಟ್​​​ಗೆ ಅರ್ಜಿ ಸಲ್ಲಿಸಿದ 1,153 ರಿಪೀಟರ್ಸ್​ ವಿದ್ಯಾರ್ಥಿಗಳು

author img

By

Published : Jun 19, 2021, 3:48 PM IST

ಜೂನ್ 17ರಂದು ಸಿಬಿಎಸ್​ಸಿಯು ಸುಪ್ರೀಂಕೋರ್ಟ್​ಗೆ 30:30:40ರ ಮೌಲ್ಯಮಾಪನ ಸೂತ್ರ ಪರಿಗಣಿಸಿ ಜುಲೈ 37ರ ಒಳಗೆ ಫಲಿತಾಂಶ ಹೊರಡಿಸುವುದಾಗಿ ತಿಳಿಸಿತ್ತು. ಯುನಿಟ್ ಟೆಸ್ಟ್, ಮಿಡ್​ ಟರ್ಮ್​, ಪ್ರಿ ಬೋರ್ಡ್​ ಪರೀಕ್ಷೆಯ ಆಧಾರದ ಮೇಲೆ ಶೇ.40 ರಷ್ಟು ಅಂಕ ನೀಡಲಾಗುವುದು ಎಂದು ಮಾಹಿತಿ ನೀಡಿತ್ತು.

http://10.10.50.80:6060//finalout3/odisha-nle/thumbnail/19-June-2021/12188097_707_12188097_1624088310389.png
ಬೋರ್ಡ್​ ಪರೀಕ್ಷೆ ರದ್ದು ಕೋರಿ ಸುಪ್ರೀಂಕೋರ್ಟ್​​​ಗೆ

ನವದೆಹಲಿ: ಬೋರ್ಡ್​​ ಪರೀಕ್ಷೆ ರದ್ದು ಮಾಡುವಂತೆ ಕೋರಿ 10 ಮತ್ತು 12ನೇ ತರಗತಿಯ ಖಾಸಗಿ ಅಥವಾ ಪುನರಾವರ್ತಿತ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಬಿಎಸ್​​ಸಿ ಬೋರ್ಡ್​ ಪರೀಕ್ಷೆ ರದ್ದು ಕೋರಿ ಸುಮಾರು 1,152 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತೆ ಅಪೆಕ್ಸ್ ಕೋರ್ಟ್​ ಈ ಹಿಂದೆ ತೀರ್ಪು ನೀಡಿತ್ತು.

ಈ ಹಿನ್ನೆಲೆ ವಿದ್ಯಾರ್ಥಿಗಳು ಸುಪ್ರೀಂ ಮೊರೆ ಹೋಗಿದ್ದಾರೆ. ಇದಲ್ಲದೆ ಸಿಬಿಎಸ್​ಸಿ ತಿಳಿಸಿರುವ ಮೌಲ್ಯಮಾಪನ ವಿಧಾನವನ್ನೂ ಪ್ರಶ್ನಿಸಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಒಂದೆ ಸಮನಾದ ಅಂಕ ನೀಡುವ ನೀತಿ ರೂಪಿಸಬೇಕು. ಜೊತೆಗೆ ಫಲಿತಾಂಶವನ್ನು ಸರಿ ಸಮಯಕ್ಕೆ ಅನುಗುಣವಾಗಿ ಪ್ರಕಟಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಖಾಸಗಿ ಅಥವಾ 2ನೇ ಬಾರಿ ಪರೀಕ್ಷೆ ಬರೆಯುವ ವಿಭಾಗದ ಅಭ್ಯರ್ಥಿಗಳಿಗೆ ದೈಹಿಕವಾಗಿ ಪರೀಕ್ಷೆಯನ್ನು ನಡೆಸುವುದು ಸೂಕ್ತವಲ್ಲ, ಇದು ವಿದ್ಯಾರ್ಥಿಗಳಿಗೆ ಕಷ್ಟವಾಗಬಹುದು. ಅಲ್ಲದೆ ಖಾಸಗಿ ವಿಭಾಗದ ಅಥವಾ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ತೃಪ್ತಿ ಇಲ್ಲದಿದ್ದರೆ ನಿಗದಿತ ಅವಧಿಯೊಳಗೆ ತಮ್ಮ ಆಕ್ಷೇಪಣೆ ಸಲ್ಲಿಸಲು ಅವಕಾಶಕ್ಕಾಗಿ ಸಿಬಿಎಸ್​​​ಸಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.

ಜೂನ್ 17ರಂದು ಸಿಬಿಎಸ್​ಸಿಯು ಸುಪ್ರೀಂಕೋರ್ಟ್​ಗೆ 30:30:40ರ ಮೌಲ್ಯಮಾಪನ ಸೂತ್ರ ಪರಿಗಣಿಸಿ ಜುಲೈ 37ರ ಒಳಗೆ ಫಲಿತಾಂಶ ಹೊರಡಿಸುವುದಾಗಿ ತಿಳಿಸಿತ್ತು. ಯುನಿಟ್ ಟೆಸ್ಟ್, ಮಿಡ್​ ಟರ್ಮ್​, ಪ್ರಿ ಬೋರ್ಡ್​ ಪರೀಕ್ಷೆಯ ಆಧಾರದ ಮೇಲೆ ಶೇ.40 ರಷ್ಟು ಅಂಕ ನೀಡಲಾಗುವುದು ಎಂದು ಮಾಹಿತಿ ನೀಡಿತ್ತು. ಮೌಲ್ಯಮಾಪನ ಮಾನದಂಡಗಳನ್ನು ಶೀಘ್ರದಲ್ಲೇ ಲಭ್ಯವಾಗಲಿದೆ ಮತ್ತು ಅಂತಿಮ ಮಾನದಂಡಗಳನ್ನು ನಿರ್ಧರಿಸುವ ಆಧಾರದ ಮೇಲೆ ಮೌಲ್ಯಮಾಪನ ಮಾನದಂಡಗಳನ್ನು ತರಲು 13 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದ್ದಾರೆ.

ಓದಿ: 3ನೇ ಅಲೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ, 6ರಿಂದ 8 ವಾರಗಳಲ್ಲಿ ಲಗ್ಗೆ: ಏಮ್ಸ್​ ಮುಖ್ಯಸ್ಥ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.