ETV Bharat / bharat

ನಾಸಾದ 'ಕ್ಯೂಬ್ ಇನ್ ಸ್ಪೇಸ್’ ಕಾರ್ಯಕ್ರಮಕ್ಕೆ ಆಯ್ಕೆಯಾದ ಪುಣೆಯ 11ರ ಪೋರ

author img

By

Published : Jul 15, 2023, 11:52 AM IST

ನಾಸಾದ ಕ್ಯೂಬ್ ಇನ್ ಸ್ಪೇಸ್ ಕಾರ್ಯಕ್ರಮಕ್ಕೆ ಪೂಣೆಯ 11 ವರ್ಷದ ಬಾಲಕ ಆಯ್ಕೆಯಾಗಿದ್ದಾನೆ.

ರೋಹನ್ ಬನ್ಸಾಲಿ
ರೋಹನ್ ಬನ್ಸಾಲಿ

ಪುಣೆ (ಮಹರಾಷ್ಟ್ರ): ಪುಣೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 11 ವರ್ಷದ ರೋಹನ್ ಬನ್ಸಾಲಿ ಎಂಬ ವಿದ್ಯಾರ್ಥಿ ನಾಸಾದ ‘ಕ್ಯೂಬ್ ಇನ್ ಸ್ಪೇಸ್’ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾನೆ. ಮಕ್ಕಳಿಗೆ ಬಾಹ್ಯಾಕಾಶ ಕಾರ್ಯಾಚರಣೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದದಿಂದ 11 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ನಾಸಾ ಈ ಕಾರ್ಯಕ್ರಮವನ್ನು ನಡೆಸುತ್ತದೆ.

ಕಾರ್ಯಕ್ರಮದಲ್ಲಿ ಒಂದು ಸಣ್ಣ ಕ್ಯೂಬ್ (ಉಪಗ್ರಹ)ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಇದು ನೈಜ-ಜಗತ್ತು ಅಥವಾ ಭೂಮಿ-ಸಂಬಂಧಿತ ಸಮಸ್ಯೆಗಳ ಮೇಲೆ ಸಣ್ಣ-ಪ್ರಮಾಣದ ಪ್ರಯೋಗಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 11 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಅಂಗೈಗೆ ಹೊಂದುವ ಉಪಗ್ರಹವನ್ನು ರಚಿಸಲು ಸೂಚಿಸಲಾಗುತ್ತದೆ.

ಬಾಹ್ಯಾಕಾಶ ಪರಿಸರದಲ್ಲಿ ಮಾನವ ದೇಹದ ಮೇಲೆ ಕಾಸ್ಮಿಕ್ ಕಿರಣಗಳ ಪರಿಣಾಮಗಳ ಕುರಿತು ಸಂಶೋಧನೆ ನಡೆಸಲಾಗುವುದು. ಬಾಹ್ಯಾಕಾಶದಲ್ಲಿರುವಾಗ ಗಗನಯಾತ್ರಿಗಳನ್ನು ರಕ್ಷಿಸುವ ತಂತ್ರಜ್ಞಾನದ ಕುರಿತು ಸಂಶೋಧನೆ ನಡೆಸಲು ಚಿಕ್ಕ ಉಪಗ್ರಹ ಸಹಾಯ ಮಾಡುತ್ತದೆ. ನೇರಳಾತೀತ ವಿಕಿರಣದಿಂದ (UV, C, B, A) ರಕ್ಷಿಸಲು ಮತ್ತು ವಿವಿಧ ಕೈಗಾರಿಕಾ ವಸ್ತುಗಳ ಕುರಿತು ಅಧ್ಯಯನವನ್ನು ಈ ಉಪಗ್ರಹದ ಮೂಲಕ ಮಾಡಲಾಗುತ್ತದೆ.

ಇದಕ್ಕಾಗಿ ನಾಸಾ ತಂಡ ವಿವಿಧ ಹಂತಗಳಲ್ಲಿ ಅತ್ಯಂತ ಕಠಿಣ ಪರೀಕ್ಷೆಗಳನ್ನು ನಡೆಸಿತ್ತು. ಇದರಲ್ಲಿ ವಿದ್ಯಾವ್ಯಾಲಿ ಶಾಲೆಯ ರೋಹನ್​ ಆಯ್ಕೆಯಾಗಿದ್ದಾರೆ. ಈ ಬಗ್ಗೆ ರೋಹನ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ. ವಿಜ್ಞಾನದಲ್ಲಿ ಹೊಸ ಪರಿಕಲ್ಪನೆಗಳನ್ನು ಕಲಿಯಲು ಬಯಸುತ್ತೇನೆ. ನನ್ನ ಗುರುಗಳಾದ ಜಯ ಅವರಿಂದ ವಿಜ್ಞಾನದ ಬಗ್ಗೆ ತಿಳಿದುಕೊಂಡೆ ಎಂದು ಮಾಹಿತಿ ನೀಡಿದ.

ಸೌರವ್ಯೂಹದ ತ್ರಿಜ್ಯವು ಬಗ್ಗೆ ಸಂಶೋಧನೆ ನಡೆಸುತ್ತಿರುವಾಗ ಒಂದಿಷ್ಟು ಆಶ್ಚರ್ಯಕರ ಸಂಗತಿಗಳನ್ನು ನಾನು ಕಂಡುಕೊಂಡೆ. ಹಾಗೇ ನಾಸಾ ಬಾಹ್ಯಾಕಾಶ ಯಾತ್ರೆಯ ಸಮಯದಲ್ಲಿ ವಿಕಿರಣದಿಂದ ಮಾನವ ದೇಹಕ್ಕೆ ಉಂಟಾಗುವ ಅಪಾಯಗಳ ಬಗ್ಗೆ ಸಂಶೋಧನೆ ನಡೆಸಿದೆ. ಆದ್ದರಿಂದ, ನೇರಳಾತೀತ ಕಿರಣಗಳ ವಿರುದ್ಧ ರಕ್ಷಣೆ ಮತ್ತು ಗಗನಯಾತ್ರಿಗಳನ್ನು ರಕ್ಷಿಸಲು ಈ ಕಿರು ಉಪಗ್ರಹವನ್ನು ತಯಾರಿಸಿದೆ. ವಿಜ್ಞಾನದ ಮೇಲಿನ ಉತ್ಸಾಹದಿಂದಾಗಿ ನಾನು ಕ್ಯೂಬ್​ ಇನ್​ ಸ್ಪೇಸ್​ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾದೆ. ಇದು ಶಾಲೆ ಶಿಕ್ಷಕರು, ತಾಯಿ, ಚಿಕ್ಕಪ್ಪರ ಬೆಂಬಲ ಫಲವಾಗಿದೆ. ಅಲ್ಲದೇ ನಾನು ಈ ಕ್ಷೇತ್ರದಲ್ಲಿ ಅಪಾರ ಜ್ಞಾನ ಪಡೆದು ಮುಂದಿನ ದಿನಗಳಲ್ಲಿ ಚಂದ್ರಯಾನ 4 ನೌಕೆ ತಯಾರಿಕೆಯ ಭಾಗವಾಗಲು ಬಯಸುತ್ತೇನೆ ಎಂದು ರೋಹನ್ ತಮ್ಮ ಮುಂದಿನ ಗುರಿಯನ್ನು ತಿಳಿಸಿದರು.

ರೋಹನ್ ರಚಿಸಿದ ಕಿರು ಉಪಗ್ರಹ 4 UV ಸಂವೇದಕಗಳು, 3 ಆಯ್ದ ವಸ್ತುಗಳು (ರೇಷ್ಮೆ, ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್) ಮೈಕ್ರೊಪ್ರೊಸೆಸರ್ ಅನ್ನು ಒಳಗೊಂಡಿದೆ. ವಾಯುಮಂಡಲದ ಮೂಲಕ ತನ್ನ 12 ಗಂಟೆಗಳ ಪ್ರಯಾಣದಲ್ಲಿ ಪ್ರತಿ 5 ನಿಮಿಷಕ್ಕೆ ಡೇಟಾವನ್ನು ಸಂಗ್ರಹಿಸುತ್ತದೆ.

ಇದನ್ನೂ ಓದಿ: Chanrdarayan-3 Mission: ಚಂದ್ರನ ಅನ್ವೇಷಣೆಯಲ್ಲಿ ಭಾರತ ಸಕ್ರಿಯ ಆಟಗಾರನಾಗಿರಬೇಕು: ಇಸ್ರೋ ಮಾಜಿ ವಿಜ್ಞಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.