ಚೆನ್ನೈ (ತಮಿಳುನಾಡು) : ಚೆನ್ನೈನ ಜ್ಞಾನ ವೆಂಕಟರಮಣ ಎಂಬ 108 ವರ್ಷದ ವೃದ್ಧೆ ಎಂಜಿಎಂ ಹೆಲ್ತ್‌ಕೇರ್‌ನಲ್ಲಿ ಲಸಿಕೆ ಹಾಕಿಸಿಕೊಂಡಿದ್ದು, ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಜ್ಞಾನ ವೆಂಕಟರಮಣ ಅವರು ತಮ್ಮ 83 ವರ್ಷದ ಮಗ ವೆಂಕಟರಮಣ ಹರಿ ಹಾಗೂ ಮೊಮ್ಮಗಳು ಮೀರಾ ಹರಿ ಜೊತೆಗೆ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡ ತಮಿಳುನಾಡಿನ ಅತ್ಯಂತ ಹಿರಿಯ ವ್ಯಕ್ತಿ ಇವರಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೊನಾ: ಚಿತ್ರಮಂದಿರ, ಕಚೇರಿಗಳಲ್ಲಿ ಶೇ.50ರಷ್ಟು ಜನರಿಗೆ ಅವಕಾಶ
ದೇಶಾದ್ಯಂತ 2ನೇ ಹಂತಹ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರ ಬಳಿಕ ಇದೀಗ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ.
ಜನವರಿ 16ರಿಂದ ಈವರೆಗೆ ಒಟ್ಟು 3,93,39,817 ಮಂದಿಗೆ ಲಸಿಕೆ ನೀಡಲಾಗಿದೆ. ತಮಿಳುನಾಡಿನಲ್ಲಿ ಈವರೆಗೆ 8,63,363 ಕೊರೊನಾ ಕೇಸ್ಗಳು ಹಾಗೂ 12,573 ಸಾವು ವರದಿಯಾಗಿವೆ.