ETV Bharat / bharat

ಈ ಒಂದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಸಾವಿರ ರೈತರ ನಿರ್ಧಾರ! - ತಮಿಳುನಾಡು ಫೈಟ್​ 2021

ರಾಜಕೀಯ ನಾಯಕರ ಸುಳ್ಳು ಭರವಸೆಗಳಿಂದ ಬೇಸತ್ತಿರುವ ಅನ್ನದಾತರು ತಮಿಳುನಾಡು ಚುನಾವಣೆಯಲ್ಲಿ ಖುದ್ದಾಗಿ ಕಣಕ್ಕಿಳಿಯುವ ನಿರ್ಧಾರ ಕೈಗೊಂಡಿದ್ದಾರೆ.

farmers to file nominations
farmers to file nominations
author img

By

Published : Mar 17, 2021, 9:38 PM IST

ಚೆನ್ನೈ: ತಮಿಳುನಾಡಿನ 234 ವಿಧಾನಸಭೆ ಕ್ಷೇತ್ರಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಎಲ್ಲ ಸ್ಥಾನಗಳಿಗೂ ಒಂದೇ ಹಂತದಲ್ಲಿ ಏಪ್ರಿಲ್​​ 6ರಂದು ಮತದಾನ ನಡೆಯಲಿದೆ. ಇದರ ಮಧ್ಯೆ ತಿರುಪುರದ ಕಂಗೇಯಂ ಕ್ಷೇತ್ರದಿಂದ ಒಂದು ಸಾವಿರ ರೈತರು ನಾಮಪತ್ರ ಸಲ್ಲಿಕೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.

ಪರಂಬಿಕುಲಂ-ಅಲಿಯಾರ್​​ ಯೋಜನೆಯಿಂದ ನೀರು ಬಿಡುಗಡೆ ಮಾಡುವ ಬೇಡಿಕೆ ಈಡೇರಿಕೆಯಾಗದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ರೈತರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಇದೇ ವಿಚಾರವಾಗಿ ಐದು ದಿನಗಳ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಪಳನಿಸ್ವಾಮಿ ಸಂಧಾನ ಸಭೆ ನಡೆಸಿ ನೀರು ಬಿಡುವ ಭರವಸೆ ನೀಡಿದ್ದರು. ಆದರೆ ಸಭೆಯಲ್ಲಿ ನೀಡಿದ ಭರವಸೆ ಜಾರಿಗೊಳ್ಳದ ಕಾರಣ ಈ ಸಲ ರೈತರು ನಾಮಪತ್ರ ಸಲ್ಲಿಕೆ ಮಾಡಲು ಮುಂದಾಗಿದ್ದಾರೆ.

ಈಗಾಗಲೇ 10ಕ್ಕೂ ಹೆಚ್ಚು ನಾಮಪತ್ರ ಸಲ್ಲಿಕೆ ಮಾಡಿರುವ ರೈತರು ಉಳಿದಂತೆ ಗುರುವಾರ ಹಾಗೂ ಶುಕ್ರವಾರ ಹೆಚ್ಚಿನ ರೈತರಲು ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ. 1996ರಲ್ಲಿ 1016 ರೈತರಲು ಮೊಡಕುರಿಚಿ ಅಸೆಂಬ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.