ETV Bharat / bharat

ನಿರ್ಭಯಾ ಪ್ರಕರಣಕ್ಕೆ 10 ವರ್ಷ: ಇನ್ನೂ ನಿಂತಿಲ್ಲ ಪೈಶಾಚಿಕ ಕೃತ್ಯಗಳ ಸರಮಾಲೆ!

author img

By

Published : Dec 16, 2022, 2:03 PM IST

ನಿರ್ಭಯಾ ಪ್ರಕರಣಕ್ಕೆ ಹತ್ತು ವರ್ಷ ಆಗಿರುವ ಕುರಿತು ಮಾತನಾಡಿರುವ ನಿರ್ಭಯಾ ತಾಯಿ, ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು 8 ವರ್ಷ ಹೋರಾಡಿದ್ದು, ಮಗಳಿಗೆ ನ್ಯಾಯ ಸಿಕ್ಕಿದೆ ಎಂದರು. ಆದರೆ, ಇಂದು ಕೂಡ ಇಂತಹ ಅತ್ಯಾಚಾರ ಪ್ರಕರಣಗಳಿಂದ ನ್ಯಾಯ ಪಡೆಯಲು ಅನೇಕ ತಾಯಂದಿರು, ಕುಟುಂಬಸ್ಥರು ಅಲೆದಾಡುತ್ತಿದ್ದಾರೆ ಎಂದಿದ್ದಾರೆ.

10-years-for-nirbhaya-case-the-number-of-such-cases-has-not-stopped
ನಿರ್ಭಯಾ ಪ್ರಕರಣಕ್ಕೆ 10 ವರ್ಷ: ಇನ್ನೂ ನಿಂತಿಲ್ಲ ಪೈಶಾಚಿಕ ಕೃತ್ಯಗಳ ಸರಮಾಲೆ!

ನವದೆಹಲಿ: ದೇಶವನ್ನೇ ನಡುಗಿಸಿದ ಘಟನೆಯಲ್ಲಿ ಒಂದು ನಿರ್ಭಯಾ ಪ್ರಕರಣ. ಈ ಘಟನೆ ನಡೆದು ಇಂದಿಗೆ 10 ವರ್ಷ ಕಳೆದಿದೆ. ಬಸ್​ನಲ್ಲಿ ಹೋಗುತ್ತಿದ್ದ ನಿರ್ಭಯಾ ಮೇಲೆ ನಡೆದ ಪೈಶಾಚಿಕ ಕೃತ್ಯ ದೇಶವನ್ನು ತಲ್ಲಣಗೊಳಿಸಿತು. ಈ ಪ್ರಕರಣದಲ್ಲಿ ಫೋರೆನ್ಸಿಕ್​ ಸಾಕ್ಷ್ಯವನ್ನು ಬಳಕೆ ಮಾಡುವ ಮೂಲಕ ಪೊಲೀಸರ ತನಿಖೆ ವಿಧಾನವನ್ನು ಬದಲಾಯಿಸಿತು. ಪ್ರಪಂಚದಲ್ಲೇ ಮೊದಲ ಬಾರಿಗೆ 164 ಸಾಕ್ಷ್ಯಗಳ ಮಾತಿನ ದಾಖಲೆ ಬದಲಾಗಿ ಸನ್ಹೆಯನ್ನು ಬಳಕೆ ಮಾಡಲಾಗಿದೆ. ಇಡೀ ಪ್ರಕರಣವನ್ನೇ ಅದರ ಮೇಲೆ ಹೋರಾಟ ನಡೆಸಲಾಗಿದ್ದು, ಆರೋಪಿಗಳಿಗೆ ಮರಣದಂಡನೆಗೆ ಗುರಿಪಡಿಸಲಾಯಿತು. ಇದೆಲ್ಲದರ ಹೊರತಾಗಿ ಪರಿಸ್ಥಿತಿ ಇಂದು ಬದಲಾಗಿದೆಯಾ ಎಂಬುದನ್ನು ನೋಡಬೇಕಿದೆ.

ರಾಷ್ಟ್ರೀಯ ಅಪರಾಧ ದಾಖಲಾತಿ ದಳ (ಎನ್​ಸಿಆರ್​ಬಿ) ಪ್ರಕಾರ, ಕಳೆದ ವರ್ಷದ ದೆಹಲಿಯಲ್ಲಿ ದಿನಕ್ಕೆ ಎರಡು ಅಪ್ರಾಪ್ತರು ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದು, ದೇಶದಲ್ಲಿ ಮಹಿಳೆಯರಿಗೆ ಅಸುರಕ್ಷಿತ ಪ್ರದೇಶ ದೆಹಲಿಯಾಗಿದೆ. 2021ರಲ್ಲಿ ಮಹಿಳೆಯರ ವಿರುದ್ಧ 13, 893 ಪ್ರಕರಣಗಳು ದಾಖಲಾದರೆ, 2020ರಲ್ಲಿ 9,783 ಪ್ರಕರಣಗಳು ದಾಖಲಾಗಿವೆ.

ನಿರ್ಭಯಾ ಪ್ರಕರಣಕ್ಕೆ ಹತ್ತು ವರ್ಷ ಆಗಿರುವ ಕುರಿತು ಮಾತನಾಡಿರುವ ನಿರ್ಭಯಾ ತಾಯಿ, ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು 8 ವರ್ಷ ಹೋರಾಡಿದ್ದು, ಮಗಳಿಗೆ ನ್ಯಾಯ ಸಿಕ್ಕಿದೆ ಎಂದರು. ಆದರೆ, ಇಂದು ಕೂಡ ಇಂತಹ ಅತ್ಯಾಚಾರ ಪ್ರಕರಣಗಳಿಂದ ನ್ಯಾಯ ಪಡೆಯಲು ಅನೇಕ ತಾಯಂದಿರು, ಕುಟುಂಬಸ್ಥರು ಅಲೆದಾಡುತ್ತಿದ್ದಾರೆ ಎಂದಿದ್ದಾರೆ.

ಚಾವ್ಲಾ ಪ್ರಕರಣದಲ್ಲಿ ಸರಿಯಾದ ಸಾಕ್ಷ್ಯಧಾರ ಇಲ್ಲದ ಕಾರಣ ಆರೋಪಿಗಳನ್ನು ಸುಪ್ರೀಂ ಕೋರ್ಟ್​ ಖುಲಾಸೆ ಮಾಡಿತು. ಈ ನಡುವೆ ಲೆ. ಗವರ್ನರ್​ ಪುನರ್​ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿರುವುದರಿಂದ ಸಣ್ಣ ಆಶಯ ವ್ಯಕ್ತವಾಗಿದೆ. ಆದರೂ ಸಂತ್ರಸ್ತ ಕುಟುಂಬ ಸುದೀರ್ಘದ ಹೋರಾಟ ನಡೆಸಬೇಕಿದೆ

ಯುವತಿಯರ ಜೀವನ ನಾಶ ಮಾಡಿದ ಎಷ್ಟು ಜನರು ನಿರ್ಭೀತಿಯಿಂದ ಹೊರಗೆ ಸುತ್ತುತ್ತಿದ್ದಾರೆ ಎಂಬುದು ತಿಳಿದಿಲ್ಲ. ಇವರೆಲ್ಲ ಸಮಾಜಕ್ಕೆ ಅಪಾಯ . ಆದರೆ, ಇಂತಹವರಿಂದ ಸಂತ್ರಸ್ತ ಕುಟುಂಬಗಳು ನೋವು ಎದುರಿಸುವಂತೆ ಆಗಿದೆ. ನಿರ್ಭಯಾ ಪ್ರಕರಣದಲ್ಲೂ ಅನೇಕ ಬಾರಿ ಗಲ್ಲು ಶಿಕ್ಷೆ ಮುಂದಾಗಿತ್ತು. ಇದಕ್ಕಾಗಿ ನಾವು ಅನೇಕ ಸಾಕ್ಷ್ಯಗಳನ್ನು ನೀಡಿದೆವು. ಪೊಲೀಸ್​ ವ್ಯವಸ್ಥೆ ಇನ್ನಷ್ಟು ಶಿಸ್ತುಬದ್ದವಾಗಬೇಕಿದೆ. ನ್ಯಾಯಾಲಯದ ವ್ಯವಸ್ಥೆ ಕೂಡ ತ್ವರಿತವಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ನಿರ್ಭಯಾ ಪ್ರಕರಣದ ಟೈಮ್​ಲೈನ್​

  1. ಡಿ. 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್​ನಲ್ಲಿ ಪ್ಯಾರಾ ಮೆಡಿಕಲ್​ ವಿದ್ಯಾರ್ಥಿ ಮೇಲೆ ಆರು ಜನ ದುಷ್ಕರ್ಮಿಗಳು ಪೈಶಾಚಿಕವಾಗಿ ವರ್ತಿಸಿದ್ದರು. ಈ ಘಟನೆ ದೆಹಲಿಗೆ ಮಾತ್ರವಲ್ಲ ಜಗತ್ತನ್ನೇ ತಲ್ಲಣಗೊಳಿಸಿತ್ತು. ಇಂದಿಗೆ ಈ ಪ್ರಕರಣ ನಡೆದು 10 ವರ್ಷ ಕಳೆದಿದೆ.
  2. 16 ಡಿಸೆಂಬರ್​ 2012- ಚಲಿಸುತ್ತಿದ್ದ ಬಸ್​ನಲ್ಲಿ ಅಪ್ರಾಪ್ತ ಸೇರಿದಂತೆ ಆರು ಜನರು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
  3. 18 ಡಿಸೆಂಬರ್​ 2012: ರಾಮ್​ಸಿಂಗ್​, ಮುಕೇಶ್​, ವಿನಯ್​ ಶರ್ಮಾ ಮತ್ತು ಪವನ್​ ಗುಪ್ತಾ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದರು.
  4. 21 ಡಿಸೆಂಂಬರ್​ 2012: ಆನಂದ್​ ವಿಹಾರ್​ ಬಸ್​ ನಿಲ್ದಾಣದಲ್ಲಿ ಅಪ್ರಾಪ್ತ ಆರೋಪಿ ಸೆರೆ ಸಿಕ್ಕ
  5. 22 ಡಿಸೆಂಬರ್​ 2012: ಆರನೇ ಆರೋಪಿ ಅಕ್ಷಯ್​ ಠಾಕೂರ್​ನನ್ನು ಬಿಹಾರದಲ್ಲಿ ವಶಕ್ಕೆ ಪಡೆಯಲಾಯಿತು.
  6. 29 ಡಿಸೆಂಬರ್​ 2012: ಸಿಂಗಾಪೂರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರ್ಭಯಾ ಸಾವನ್ನಪ್ಪಿದಳು.
  7. 2 ಜನವರಿ 2013 : ಐವರು ಆರೋಪಿಗಳ ವಿರುದ್ದ ಕೊಲೆ, ಸಾಮೂಹಿಕ ಅತ್ಯಾಚಾರ, ಅಪಹರಣ, ಕಳ್ಳತನ ಆರೋಪದ ಮೇಲೆ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದರು.
  8. 17 ಜನವರಿ 2013: ಐವರು ಆರೋಪಿಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ
  9. 11 ಮಾರ್ಚ್​ 2013: ತಿಹಾರ್​ ಜೈಲಿನಲ್ಲೇ ಆರೋಪಿ ರಾಮ್​ ಸಿಂಗ್​ ಆತ್ಮಹತ್ಯೆ
  10. 31 ಅಕ್ಟೋಬರ್​ 2013: ಅಪ್ತಾಪ್ತನನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ದೋಷಿಯಾಗಿ ಜುವೆನೈಲ್​ ಬೋರ್ಡ್​ ಮಾಡಿತು.
  11. 10 ಸೆಪ್ಟೆಂಬರ್​ 2013: ಮುಕೇಶ್​, ವಿನಯ್​, ಪವನ್​ ಮತ್ತು ಅಕ್ಷಯ್​ನನ್ನು ಅಪರಾಧಿಯಾಗಿ ತ್ವರಿತ ನ್ಯಾಯಾಲಯ ಘೋಷಿಸಿತು
  12. 12 ಸೆಪ್ಟೆಂಬರ್​ 2013: ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿತು.
  13. 13 ಮಾರ್ಚ್​ 2014: ದೆಹಲಿ ಹೈ ಕೋರ್ಟ್​ ಕೂಡ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿಯಿತು
  14. 15 ಮಾರ್ಚ್​ 2014: ಸುಪ್ರೀಂ ಕೋರ್ಟ್​ ಈ ತೀರ್ಪಿಗೆ ತಡೆ ನೀಡಿತು.
  15. 20 ಡಿಸೆಂಬರ್​ 2015: ಅಪ್ರಾಪ್ತ ಅಪರಾಧಿ ಜುವೆನೈಲ್​ನಿಂದ ಬಿಡುಗಡೆಗೊಂಡ
  16. 27 ಮಾರ್ಚ್​ 2016: ಅಪರಾಧಿಗಳು ಸಲ್ಲಿಸಿದ ಅರ್ಜಿ ಮೇಲೆ ಸುಪ್ರೀಂ ಕೋರ್ಟ್​ ತೀರ್ಪನ್ನು ತಡೆಹಿಡಿಯಿತು
  17. 5 ಮೇ 2017: ಸುಪ್ರೀಂ ಕೋರ್ಟ್​​ ನಾಲ್ವರು ಅಪರಾಧಿಗಳ ಶಿಕ್ಷೆಯನ್ನು ಎತ್ತಿಹಿಡಿಯಿತು
  18. 9 ಜುಲೈ 2018: ಗಲ್ಲು ಶಿಕ್ಷೆಯನ್ನು ಪರಿಶೀಲಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿತ್ತು.
  19. 7 ಜನವರಿ 2020: ನಾಲ್ವರು ಅಪರಾಧಿಗಳಿಗೆ ಡೆತ್​ ವಾರೆಂಟ್​ ಜಾರಿ ಮಾಡಲಾಯಿತು.
  20. 20 ಮಾರ್ಚ್​ 2020: ನಾಲ್ವರು ಅಪರಾಧಿಗಳನ್ನು ತಿಹಾರ್​ ಜೈಲಿನಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಕೊಲೆ: ಪ್ರಿಯಕರನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.