ನವದೆಹಲಿ: 10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಆಕೆಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಇಂಡಿಗೋ ಪೈಲಟ್ ಮತ್ತು ಆಕೆಯ ಪತಿ, ಏರ್‌ಲೈನ್ ಸಿಬ್ಬಂದಿಗೆ ಗುಂಪೊಂದು ಥಳಿಸಿದ ಘಟನೆ ದೆಹಲಿಯ ದ್ವಾರಕಾ ನಗರದಲ್ಲಿ ನಡೆದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಪೈಲಟ್ ಅನ್ನು ವಿಮಾನಯಾನ ಸಂಸ್ಥೆಯು ಮಹಿಳೆಯನ್ನು ಸದ್ಯ ಹುದ್ದೆಯಿಂದ ತಾತ್ಕಾಲಿಕವಾಗಿ ತಡೆಹಿಡಿದಿದೆ. ಜೊತೆಗೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ಮಾಹಿತಿ ಪ್ರಕಾರ, ಪತಿ ಮತ್ತು ಪತ್ನಿ ಇಬ್ಬರೂ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಪೈಲಟ್ ಆಗಿದ್ದು, ಪತಿ ವಿಸ್ತಾರಾ ಏರ್ಲೈನ್ನಲ್ಲಿ ಸಿಬ್ಬಂದಿಯಾಗಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೈಲಟ್ ಸಮವಸ್ತ್ರದಲ್ಲಿರುವ ಮಹಿಳೆಗೆ ಜನರು ಪದೇ ಪದೇ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಆಕೆ ಸಹಾಯಕ್ಕಾಗಿ ಅಳುತ್ತಿದ್ದರೂ ಹಲವಾರು ಮಹಿಳೆಯರು ಹೊಡೆಯುತ್ತಲೇ ಇದ್ದಾರೆ.
ಆಕೆಯ ಪತಿಗೆ ಪುರುಷರ ಗುಂಪೊಂದು ಪ್ರತ್ಯೇಕವಾಗಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಗುಂಪು ಹಲ್ಲೆಯನ್ನು ತಡೆಯಲು ಕೆಲವರು ಮಧ್ಯಪ್ರವೇಶಿಸುತ್ತಿದ್ದಂತೆ ಆತ ತನ್ನ ಹೆಂಡತಿಯ ರಕ್ಷಣೆಗೆ ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ವರದಿಗಳ ಪ್ರಕಾರ, ದಂಪತಿ ಸುಮಾರು ಎರಡು ತಿಂಗಳ ಹಿಂದೆ 10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದರು. ಇಂದು ಬಾಲಕಿಯ ಸಂಬಂಧಿಯೊಬ್ಬರು ಆಕೆಯ ತೋಳುಗಳಲ್ಲಿ ಗಾಯದ ಗುರುತುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳ್ಳತನದ ಶಂಕೆಯಲ್ಲಿ ಬಾಲಕಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
-
#WATCH | A woman pilot and her husband, also an airline staff, were thrashed by a mob in Delhi's Dwarka for allegedly employing a 10-year-old girl as a domestic help and torturing her.
— ANI (@ANI) July 19, 2023 " class="align-text-top noRightClick twitterSection" data="
The girl has been medically examined. Case registered u/s 323,324,342 IPC and Child Labour… pic.twitter.com/qlpH0HuO0z
">#WATCH | A woman pilot and her husband, also an airline staff, were thrashed by a mob in Delhi's Dwarka for allegedly employing a 10-year-old girl as a domestic help and torturing her.
— ANI (@ANI) July 19, 2023
The girl has been medically examined. Case registered u/s 323,324,342 IPC and Child Labour… pic.twitter.com/qlpH0HuO0z#WATCH | A woman pilot and her husband, also an airline staff, were thrashed by a mob in Delhi's Dwarka for allegedly employing a 10-year-old girl as a domestic help and torturing her.
— ANI (@ANI) July 19, 2023
The girl has been medically examined. Case registered u/s 323,324,342 IPC and Child Labour… pic.twitter.com/qlpH0HuO0z
ಅದರ ಜೊತೆಗೆ ದಂಪತಿ ಬಾಲಕಿಗೆ ಚಿತ್ರಹಿಂಸೆ ನೀಡುತ್ತಾರೆ ಮತ್ತು ಥಳಿಸುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಕೂಡ ಆರೋಪ ಮಾಡಿದ್ದಾರೆ. ಬಾಲಕಿಯ ತೋಳುಗಳ ಮೇಲೆ ಮತ್ತು ಆಕೆಯ ಕಣ್ಣುಗಳ ಕೆಳಗೆ ಗಾಯದ ಗುರುತುಗಳನ್ನು ನೋಡುತ್ತಿದ್ದಂತೆ ಗುಂಪೊಂದು ಜಮಾಯಿಸಿ ದಂಪತಿಯ ಮೇಲೆ ಹಲ್ಲೆ ನಡೆಸಿದೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ದಂಪತಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಬಂಧಿತ ಆರೋಪಿಗಳನ್ನು 36 ವರ್ಷದ ಕೌಶಿಕ್ ಬಾಗ್ಚಿ ಮತ್ತು 33 ವರ್ಷದ ಪೂರ್ಣಿಮಾ ಬಾಗ್ಚಿ ಎಂದು ಗುರುತಿಸಲಾಗಿದೆ.
ದ್ವಾರಕಾದ ಹಿರಿಯ ಪೊಲೀಸ್ ಅಧಿಕಾರಿ ಎಂ ಹರ್ಷವರ್ಧನ್ ಅವರು ಮಾತನಾಡಿ, ಬಾಲಕಿಯ ತೋಳುಗಳಲ್ಲಿ ಸುಟ್ಟ ಗಾಯದ ಗುರುತುಗಳನ್ನು ಸಹ ಗುರುತಿಸಲಾಗಿದೆ. ಬಾಲಕಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಮತ್ತು ಬಾಲಕಿಗೆ ಆಪ್ತ ಸಮಾಲೋಚನೆಯನ್ನು ಸಹ ನಡೆಲಾಗಿದೆ. ಆಕೆಯ ಹೇಳಿಕೆಯನ್ನು ಆಧರಿಸಿ, ನಾವು ಭಾರತೀಯ ದಂಡ ಸಂಹಿತೆ, ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ ಮತ್ತು ಬಾಲಾಪರಾಧಿ ನ್ಯಾಯ, ಆರೈಕೆ ಮತ್ತು ಮಕ್ಕಳ ರಕ್ಷಣೆ ಕಾಯಿದೆ ಹಾಗೂ ಕಟ್ಟುನಿಟ್ಟಾದ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದೇವೆ. ಮಕ್ಕಳನ್ನು ಮನೆಗೆಲಸಕ್ಕೆ ನೇಮಿಸಿಕೊಳ್ಳುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಈ ನಿಯಮವನ್ನು ಅನೇಕರು ಪದೇ ಪದೇ ಉಲ್ಲಂಘಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಹಫ್ತಾ ವಸೂಲಿ ದಂಧೆ.. ಹೆಚ್ಚಿನ ಹಣ ಕೊಡಲಿಲ್ಲವೆಂದು ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ