ETV Bharat / bharat

ಒಂದೇ ಹುದ್ದೆಗೆ 22 ಸಾವಿರ ಅರ್ಜಿಗಳು.. 43 ಪರೀಕ್ಷಾ ಕೇಂದ್ರಗಳ ಸ್ಥಾಪನೆ.. ಯಾವುದು ಆ ಖಾಲಿ ಪೋಸ್ಟ್​​? - 43 ಪರೀಕ್ಷಾ ಕೇಂದ್ರಗಳ ಸ್ಥಾಪನೆ

ಹಿಮಾಚಲ ಪ್ರದೇಶ ಲೋಕಸೇವಾ ಆಯೋಗ (ಎಚ್‌ಪಿಎಸ್‌ಸಿ)ವು ತಾಂತ್ರಿಕ ವಿಶ್ವವಿದ್ಯಾಲಯ ಹಮೀರ್‌ಪುರದಲ್ಲಿ ಜೂನಿಯರ್ ಆಫೀಸ್ ಅಸಿಸ್ಟೆಂಟ್​ ಒಂದು ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಮುಂದಿನ ಭಾನುವಾರ ಅಂದರೆ ಅಕ್ಟೋಬರ್ 9ರಂದು ಇದರ ಪರೀಕ್ಷೆ ನಡೆಯಲಿದೆ. ಈ ಒಂದು ಹುದ್ದೆಗೆ ಇದುವರೆಗೆ ಸುಮಾರು 22,410 ಅರ್ಜಿಗಳು ಬಂದಿವೆ.

10-thousand-candidates-for-one-post-in-himachal-22-thousand-applications-for-one-post-in-hptu
ಒಂದೇ ಹುದ್ದೆಗೆ 22 ಸಾವಿರ ಅರ್ಜಿಗಳು.. 43 ಪರೀಕ್ಷಾ ಕೇಂದ್ರಗಳ ಸ್ಥಾಪನೆ... ಯಾವುದು ಆ ಖಾಲಿ ಪೋಸ್ಟ್​​?
author img

By

Published : Oct 1, 2022, 10:09 PM IST

ಹಮೀರ್‌ಪುರ (ಹಿಮಾಚಲ ಪ್ರದೇಶ): ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಒಂದೇ ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಿದರೆ ಎಷ್ಟು ಜನರ ಅರ್ಜಿ ಹಾಕಬಹುದು?. ಅಬ್ಬಬ್ಬಾ ಎಂದರೆ 100, 200, 300 ಹೋಗಲಿ 1000 ಜನ ಅರ್ಜಿ ಹಾಕಬಹುದು. ಅಚ್ಚರಿ ಎಂದರೆ ಇಲ್ಲೊಂದು ಹುದ್ದೆಗೆ ಬರೋಬ್ಬರಿ 22,410 ಅರ್ಜಿಗಳು ಸಲ್ಲಿಕೆ ಆಗಿವೆ.

ಇದು ಅಚ್ಚರಿ ಎನಿಸಿದರೂ ನಿಜ. ಒಂದು ಖಾಲಿ ಹುದ್ದೆಗೆ ಯಾರು ಅಷ್ಟಾಗಿ ತಲೆಯೇ ಕಡೆಸಿಕೊಳ್ಳಲು ಹೋಗಲ್ಲ. ಒಂದೇ ಹುದ್ದೆ ಅಲ್ಲ ಎಂದು ತಿಳಿದೇ ಸಾಕಷ್ಟು ಜನರು ಅರ್ಜಿ ಹಾಕಲು ಹಿಂದೇಟು ಹಾಕುತ್ತಾರೆ ಎಂಬ ವಾದಗಳಲ್ಲೇ ಇಲ್ಲ ಸುಳ್ಳಾಗಿವೆ. ಹಾಗಿದ್ದರೆ ಯಾವುದು ಆ ಹುದ್ದೆ ಅಂತೀರಾ?. ಇಲ್ಲಿದೆ ಪೂರ್ಣ ಮಾಹಿತಿ...

ಹಿಮಾಚಲ ಪ್ರದೇಶ ಲೋಕಸೇವಾ ಆಯೋಗ (ಎಚ್‌ಪಿಎಸ್‌ಸಿ)ವು ತಾಂತ್ರಿಕ ವಿಶ್ವವಿದ್ಯಾಲಯ ಹಮೀರ್‌ಪುರದಲ್ಲಿ ಜೂನಿಯರ್ ಆಫೀಸ್ ಅಸಿಸ್ಟೆಂಟ್​ ಒಂದು ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಮುಂದಿನ ಭಾನುವಾರ ಅಂದರೆ ಅಕ್ಟೋಬರ್ 9ರಂದು ಇದರ ಪರೀಕ್ಷೆ ನಡೆಯಲಿದೆ.

ಈ ಒಂದು ಹುದ್ದೆಗೆ ಇದುವರೆಗೆ ಸುಮಾರು 22,410 ಅರ್ಜಿಗಳು ಬಂದಿವೆ. ವಿಶೇಷವೆಂದರೆ ಈ ಒಂದು ಹುದ್ದೆಗೆ 10,386 ಅಭ್ಯರ್ಥಿಗಳು ಶುಲ್ಕವನ್ನೂ ಪಾವತಿಸಿದ್ದು, ರೋಲ್ ನಂಬರ್ ಕೂಡ ಕಳುಹಿಸಲಾಗಿದೆ. ಆದರೆ, ಸುಮಾರು 12 ಸಾವಿರ ಅರ್ಜಿದಾರರು ಇನ್ನೂ ಶುಲ್ಕವನ್ನು ಜಮೆ ಮಾಡಿಲ್ಲ. ಅರ್ಜಿದಾರರಿಗೆ ಶುಲ್ಕ ಪಾವತಿಸಲು ಅಕ್ಟೋಬರ್ 3ರವರೆಗೆ ಕೊನೆಯ ಅವಕಾಶವಿದೆ. ಒಂದು ವೇಳೆ ಆ ಅಭ್ಯರ್ಥಿಗಳು ಶುಲ್ಕ ಪಾವತಿಸಿದರೆ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು!.

1 ಪೋಸ್ಟ್, 43 ಪರೀಕ್ಷಾ ಕೇಂದ್ರಗಳು: ಜೂನಿಯರ್ ಆಫೀಸ್ ಅಸಿಸ್ಟೆಂಟ್​ ಒಂದು ಹುದ್ದೆಗೆ ಈಗಾಗಲೇ 10,386 ಅಭ್ಯರ್ಥಿಗಳು ಶುಲ್ಕವನ್ನೂ ಪಾವತಿಸಿರುವುದರಿಂದ ನೇಮಕಾತಿ ಆಯೋಗವು ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇಷ್ಟೊಂದು ಸಂಖ್ಯೆಯ ಅಭ್ಯರ್ಥಿಗಳು ಇರುವುದರಿಂದ 12,000 ಅಭ್ಯರ್ಥಿಗಳ ಲೆಕ್ಕಾಚಾರದಲ್ಲಿ ರಾಜ್ಯಾದ್ಯಂತ 43 ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಈ ಅಭ್ಯರ್ಥಿಗಳು ಕೇವಲ ಒಂದು ಹುದ್ದೆಯ ಪರೀಕ್ಷೆಗೆ ಹಾಜರಾಗುತ್ತಾರೆ.

ಒಂದೇ ಹುದ್ದೆಗೆ ಏಕೆ ನೇಮಕಾತಿ ನಡೆದಿದೆ?: ವಾಸ್ತವವಾಗಿ ಎಚ್‌ಪಿಎಸ್‌ಸಿ ರಾಜ್ಯದ ವಿವಿಧ ಇಲಾಖೆಗಳಿಗೆ ಆಗಸ್ಟ್‌ನಲ್ಲಿ ಜೂನಿಯರ್ ಆಫೀಸ್ ಅಸಿಸ್ಟೆಂಟ್ (ಐಟಿ) 198 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದಕ್ಕಾಗಿ ಶೈಕ್ಷಣಿಕ ಅರ್ಹತೆಯನ್ನು 12ನೇ ತರಗತಿ ಮತ್ತು ಕಂಪ್ಯೂಟರ್ ಡಿಪ್ಲೋಮಾ ನಿಗದಿ ಮಾಡಲಾಗಿದೆ. ಹಮೀರ್‌ಪುರದಲ್ಲಿರುವ ತಾಂತ್ರಿಕ ವಿಶ್ವವಿದ್ಯಾಲಯದ ಜೂನಿಯರ್ ಆಫೀಸ್ ಅಸಿಸ್ಟೆಂಟ್ ನೇಮಕಾತಿಗಾಗಿ ಜಾಹೀರಾತನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಆದ್ದರಿಂದ ಈ ಒಂದು ಹುದ್ದೆಗೆ ಪ್ರತ್ಯೇಕ ನೇಮಕಾತಿ ನಡೆಯಲಿದೆ.

ಪರೀಕ್ಷಾ ಶುಲ್ಕ ಎಷ್ಟು ?: ಈ ಒಂದು ಹುದ್ದೆಯ ನೇಮಕಾತಿ ಪರೀಕ್ಷೆಗೆ ಸಾಮಾನ್ಯ ವರ್ಗಕ್ಕೆ 360 ರೂ. ಮತ್ತು ಮೀಸಲು ವರ್ಗಕ್ಕೆ 120 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಈ ಪರೀಕ್ಷೆಯ ನಿರ್ವಹಣೆಯಿಂದ ಆಯೋಗವು ಲಕ್ಷಾಂತರ ರೂಪಾಯಿ ಗಳಿಸಿದೆ. ಆದರೆ, ಒಂದು ಹುದ್ದೆಗೆ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ 43 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪರೀಕ್ಷೆಯನ್ನು ಪಡೆಯುವ ವೆಚ್ಚವೂ ಅಧಿಕವಾಗಿರುತ್ತದೆ.

ಎಚ್‌ಪಿಎಸ್‌ಸಿ ಕಾರ್ಯದರ್ಶಿ ಜಿತೇಂದ್ರ ಕನ್ವರ್ ಪ್ರಕಾರ, 5 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸುವ ಹುದ್ದೆಗೆ ನೇಮಕಾತಿ ಪರೀಕ್ಷೆ ನಡೆಸಬೇಕು. ಒಂದು ಹುದ್ದೆಯನ್ನು ಭರ್ತಿ ಮಾಡಲು ಲಿಖಿತ ಪರೀಕ್ಷೆಗಾಗಿ ರಾಜ್ಯಾದ್ಯಂತ 43 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಈ ಬಗ್ಗೆ ಎಲ್ಲ ಜಿಲ್ಲೆಗಳ ಡಿಸಿ, ಎಸ್ಪಿ ಮತ್ತು ಎಸ್‌ಡಿಎಂಗೆ ಮಾಹಿತಿ ನೀಡಲಾಗಿದೆ. ಹಿಮಾಚಲದ ಎಲ್ಲ 12 ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಶಿಮ್ಲಾ ಜಿಲ್ಲೆಯಿಂದ ಗರಿಷ್ಠ 2230 ಅಭ್ಯರ್ಥಿಗಳಿಗೆ ರೋಲ್ ಸಂಖ್ಯೆಯನ್ನು ನೀಡಲಾಗಿದೆ, ಆದ್ದರಿಂದ ಗರಿಷ್ಠ 9 ಪರೀಕ್ಷಾ ಕೇಂದ್ರಗಳು ಶಿಮ್ಲಾ ಜಿಲ್ಲೆಯಲ್ಲಿವೆ.

ಇದನ್ನೂ ಓದಿ: ನಕ್ಸಲ್​ ಪೀಡಿತ ಗ್ರಾಮದ Inspiring story.. ನಕ್ಸಲ್​ 'ಮಾವ' ಸ್ಫೋಟಿಸಿದ ಶಾಲೆಯಲ್ಲಿ ಸೊಸೆ ಶಿಕ್ಷಕಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.