ETV Bharat / bharat

ಮದುವೆ ಮುಗಿಸಿ ಬರುತ್ತಿದ್ದ ವಾಹನ ಕಮರಿಗೆ ಬಿದ್ದು 10 ಜನರ ದುರ್ಮರಣ - ಉತ್ತರಾಖಂಡದಲ್ಲಿ 10 ಜನರ ಸಾವು

ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್​ ಆಗುತ್ತಿದ್ದ ವಾಹನವೊಂದು ಆಳವಾದ ಕಮರಿಗೆ ಬಿದ್ದು 10ಕ್ಕೂ ಅಧಿಕ ಜನರು ದಾರುಣವಾಗಿ ಮೃತಪಟ್ಟ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

people-die
ದಾರುಣ ಸಾವು
author img

By

Published : Feb 22, 2022, 10:27 AM IST

ಖತಿಮಾ(ಉತ್ತರಾಖಂಡ): ಮದುವೆ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವಾಹನವೊಂದು ಆಳವಾದ ಕಮರಿಗೆ ಬಿದ್ದು 10ಕ್ಕೂ ಹೆಚ್ಚು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಉತ್ತರಾಖಂಡದಲ್ಲಿ ನಿನ್ನೆ ನಡೆದಿದೆ.

ಚಂಪಾವತ್ ಜಿಲ್ಲೆಯಲ್ಲಿ ಸುಖಿಧಾಂಗ್-ದಂಡಮಿನಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರು ಚಂಪಾವತ್​ ಜಿಲ್ಲೆಯ ತನಕ್​ಪುರದ ನಿವಾಸಿಗಳು ಎಂದು ಗುರುತಿಸಲಾಗಿದೆ.

ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ವಾಪಸ್ ಆಗುತ್ತಿದ್ದ ವೇಳೆ ಮ್ಯಾಕ್ಸ್​ ವಾಹನ ಆಯತಪ್ಪಿ ಕಂದಕಕ್ಕೆ ಉರುಳಿದೆ. ಮಾಹಿತಿ ತಿಳಿದ ಪೊಲೀಸರು, ರಕ್ಷಣಾ ಪಡೆಗಳು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: 'ನೀನು ಕುರೂಪಿ..' ಹೀಯಾಳಿಸುತ್ತಿದ್ದ ಪತಿ: ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಪತ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.