ETV Bharat / bharat

ಚಳಿಗಾಲದಲ್ಲಿ ಮಧುಮೇಹಿಗಳು ಮಾಡಲೇಬೇಕಾದ 10 ಪ್ರಕೃತಿ ಚಿಕಿತ್ಸೆ, ಯೋಗ ಸಲಹೆಗಳು

author img

By

Published : Jan 7, 2021, 11:48 PM IST

ಚಳಿಗಾಲದಲ್ಲಿ ಮಧುಮೇಹಿಗಳು ಮಾಡಲೇಬೇಕಾದ 10 ಪ್ರಕೃತಿ ಚಿಕಿತ್ಸೆಗಳು ಮತ್ತು ಯೋಗಗಳು ಇಲ್ಲಿವೆ ನೋಡಿ...

10-naturopathy-and-yoga-tips-for-diabetics-in-winters
ಚಳಿಗಾಲದಲ್ಲಿ ಮಧುಮೇಹಿಗಳು ಮಾಡಲೇಬೇಕಾದ 10 ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಲಹೆಗಳು

ಹೈದರಾಬಾದ್​: ಸಾಮಾನ್ಯವಾಗಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಸಾಕಷ್ಟು ಸವಾಲನ್ನು ಎದುರಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಶೀತ ಹವಾಮಾನವು ಕಡಿಮೆ ದೈಹಿಕ ಚಟುವಟಿಕೆಯೊಂದಿಗೆ ದೇಹದ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದರಿಂದಾಗಿ ದೇಹವು ಅದರ ವಿರುದ್ಧ ಹೋರಾಟ ಪ್ರಾರಂಭಿಸುತ್ತದೆ. ಇದು ನೈಸರ್ಗಿಕವಾಗಿ ಬದುಕುಳಿಯುವ ಹಾರ್ಮೋನುಗಳಾದ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತದೆ. ಪರಿಣಾಮವಾಗಿ, ಯಕೃತ್ತು ತನ್ನ ಶಕ್ತಿಗಾಗಿ ಹೆಚ್ಚಿನ ಗ್ಲೂಕೋಸ್ ಅನ್ನು ಬಿಡುಗಡೆ ಮಾಡುತ್ತದೆ. ಪರಿಣಾಮ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ದೇಶದಲ್ಲಿ 50 ದಶಲಕ್ಷಕ್ಕೂ ಹೆಚ್ಚು ಜನರಿಗೆ ಮಧುಮೇಹವಿದೆ. ಇದು 2025 ರ ವೇಳೆಗೆ 6 ಕೋಟಿಗೂ ಅಧಿಕವಾಗುವ ನಿರೀಕ್ಷೆಯಿದೆ. ಆದ್ದರಿಂದ, ಇದನ್ನು ನಿಭಾಯಿಸುವುದು ಸದ್ಯಕ್ಕೆ ದೇಶಕ್ಕೆ ಎದುರಾಗಿರುವ ದೊಡ್ಡ ಸವಾಲು ಎಂದು ಜಿಂದಾಲ್ ನೇಚರ್ ಕ್ಯೂರ್ ಇನ್ಸ್ಟಿಟ್ಯೂಟ್​ನ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಹೆಚ್.ಪಿ. ಭಾರತಿ ಅಭಿಪ್ರಾಯಪಟ್ಟಿದ್ದಾರೆ.

ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಚಳಿಗಾಲದಲ್ಲಿ ಸಹಾಯ ಮಾಡುವ 10 ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಲಹೆಗಳನ್ನು ಅವರು ಹಂಚಿಕೊಂಡಿದ್ದಾರೆ.

ಡಯಟ್

ಚಳಿಗಾಲದ ಹೊರತಾಗಿಯೂ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಮತೋಲಿತ ಆಹಾರವು ನಿರ್ಣಾಯಕವಾಗಿದೆ. ಸಾಕಷ್ಟು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಮಸೂರ, ಬೀನ್ಸ್ ಮತ್ತು ಓಟ್ ಮೀಲ್ ಅನ್ನು ಸೇರಿಸಲು ಶಿಫಾರಸು ಮಾಡಿದ್ದಾರೆ. ಸಿಹಿತಿಂಡಿಗಳು ಮತ್ತು ಕೊಬ್ಬಿನ ಆಹಾರವನ್ನು ತಪ್ಪಿಸಬೇಕು. ಅಲ್ಲದೆ, ಮಧುಮೇಹಿಗಳು ಒಣ ಹಣ್ಣುಗಳನ್ನು ಸೇವಿಸುವುದರಿಂದ ದೂರವಿರಬೇಕು. ಏಕೆಂದರೆ, ಅವುಗಳಲ್ಲಿರುವ ಫ್ರಕ್ಟೋಸ್ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದ್ದಾರೆ.

2. ನೀರು

ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಮೂತ್ರದ ಮೂಲಕ ಹೆಚ್ಚುವರಿ ಗ್ಲೂಕೋಸ್ ಅನ್ನು ಹೊರಗಡೆ ಹಾಕಬಹುದು. ಇದು ದೇಹವನ್ನು ಎಲ್ಲ ಸಮಯದಲ್ಲೂ ಸ್ವಾಸ್ಥ್ಯದಲ್ಲಿರುವಂತೆ ನೋಡಿಕೊಳ್ಳುತ್ತದೆ.

3.ಯೋಗ

ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಯೋಗಭ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ, ದೇಹದ ಮೇಲೆ ಅದು ಅದ್ಭುತ ಪರಿಣಾಮವನ್ನು ಬೀರುತ್ತದೆ. ಮಧುಮೇಹ ಇರುವವರಿಗೆ ರೋಗವನ್ನು ನಿಯಂತ್ರಣದಲ್ಲಿಡಲು ಮತ್ತು ಸಾಮಾನ್ಯ, ಸಂತೋಷದ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಆಂತರಿಕ ಸ್ನಾಯುಗಳು ಮತ್ತು ಅಂಗಗಳ ತಿರುಚುವಿಕೆ ಮತ್ತು ವಿಸ್ತರಣೆಯನ್ನು ಒಳಗೊಂಡಿರುವ ನಿರ್ದಿಷ್ಟ ಯೋಗವು ಮೇದೋಜ್ಜೀರಕ ಗ್ರಂಥಿ ಮತ್ತು ರಕ್ತದ ಚಲನೆಯನ್ನು ಉತ್ತೇಜಿಸುತ್ತದೆ ಎಂದು ವಿಜ್ಞಾನವು ತೋರಿಸಿದೆ. ಇದು ಇನ್ಸುಲಿನ್ ಸ್ರವಿಸುವಿಕೆಯನ್ನು ಸುಗಮಗೊಳಿಸುತ್ತದೆ ಎಂದಿದ್ದಾರೆ.

4. ಪರ್ಯಾಯ ಚಿಕಿತ್ಸೆಗಳು

ಅಕ್ಯುಪಂಕ್ಚರ್, ಫಿಸಿಯೋಥೆರಪಿ, ಹೈಡ್ರೊಥೆರಪಿ, ಮುಂತಾದ ಪರ್ಯಾಯ ಚಿಕಿತ್ಸಾ ವಿಧಾನಗಳು ದೇಹಕ್ಕೆ ಸಾಮರಸ್ಯವನ್ನು ಹಲವಾರು ರೀತಿಯಲ್ಲಿ ಪುನಃಸ್ಥಾಪಿಸುತ್ತದೆ. ಅಕ್ಯುಪಂಕ್ಚರ್​ ಅನ್ನು ನಿಯಮಿತವಾಗಿ ಮಾಡುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಭೌತಚಿಕಿತ್ಸೆಯ ಮತ್ತು ಜಲಚಿಕಿತ್ಸೆಯು ತೂಕ ನಷ್ಟಕ್ಕೆ ಸಹಾಯ ಮಾಡುವ, ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವ ನರವೈಜ್ಞಾನಿಕ ಮತ್ತು ಮಸ್ಕ್ಯುಲೋಸ್ಕೆಲಿಟಲ್ ಕಾರ್ಯಗಳನ್ನು ಉತ್ತೇಜಿಸುತ್ತದೆ.

5. ಸರಿಯಾದ ನಿದ್ರೆ

ದೈನಂದಿನ ಜೀವನದಲ್ಲಿ ಎದುರಾಗುವ ಒತ್ತಡ, ಆಯಾಸ, ಮುಂತಾದವುಗಳಿಗೆ ದೇಹವು ತನ್ನನ್ನು ತಾನು ಒಡ್ಡಿಕೊಳ್ಳುವುದರಿಂದ ನಿದ್ರೆ ಬಹಳ ಮುಖ್ಯ. ಮಧುಮೇಹಿಗಳ ದೇಹವು ಹಾನಿಯಿಂದ ಚೇತರಿಸಿಕೊಳ್ಳಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಕನಿಷ್ಠ 6-7 ಗಂಟೆಗಳ ನಿರಂತರ ನಿದ್ರೆಯನ್ನು ಮಾಡುವುದು ಅನಿವಾರ್ಯ ಎಂದಿದ್ದಾರೆ.

6.ಮಾನಸಿಕ ಆರೋಗ್ಯ

ಮಧುಮೇಹದಿಂದ ಬಳಲುತ್ತಿರುವವರು ಸಾಕಷ್ಟು ಒತ್ತಡದಿಂದ ಬದುಕುತ್ತಿರುತ್ತಾರೆ. ಇದು ಆತಂಕ, ಮನಸ್ಥಿತಿ ಬದಲಾವಣೆ, ಗೊಂದಲ ಮತ್ತು ಖಿನ್ನತೆಗೆ ಕಾರಣವಾಗಬಹುದು. ಚಳಿಗಾಲದಲ್ಲಿ ಕಾಲೋಚಿತ ಪರಿಣಾಮಕಾರಿ ಅಸ್ವಸ್ಥತೆ (ಎಸ್‌ಎಡಿ) ಸಂಭವಿಸಬಹುದು ಎಂದು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಹೇಳುತ್ತದೆ; ಆದಾಗ್ಯೂ, ಇದನ್ನು ಗುಣಪಡಿಸಬಹುದಾಗಿದೆ. ಪ್ರೀತಿಪಾತ್ರರೊಡನೆ ಸಮಯ ಕಳೆಯುವುದು, ಹವ್ಯಾಸಗಳಲ್ಲಿ ತೊಡಗುವುದು ಅಥವಾ ವೃತ್ತಿಪರರ ಸಹಾಯ ಪಡೆಯುವುದು ಮಧುಮೇಹಿಗಳು ಪರಿಹಾರವನ್ನು ಪಡೆಯುವ ಕೆಲವು ವಿಧಾನಗಳಿವೆ ಎಂದು ಸೂಚಿಸಿದ್ದಾರೆ.

7.ವೈಯಕ್ತಿಕ ನೈರ್ಮಲ್ಯ

ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಧುಮೇಹ ಇರುವವರು ನೈಸರ್ಗಿಕ ಸೋಪಿನಿಂದ ಆಗಾಗ ಸಂಪೂರ್ಣವಾಗಿ ಕೈ ತೊಳೆಯಬೇಕು ಎಂದು ತಿಳಿಸಿದ್ದಾರೆ.

8. ತೂಕ ಇಳಿಸುವುದು

ಟೈಪ್ 2 ಬೊಜ್ಜು ಮಧುಮೇಹವನ್ನು 80-85 ಪ್ರತಿಶತದಷ್ಟು ಹೆಚ್ಚಿಸುವ ಅಪಾಯವನ್ನು ಹೊಂದಿದೆ. ಬೊಜ್ಜು ಇರುವವರಿಗೆ, ಮೇದೋಜ್ಜೀರಕ ಗ್ರಂಥಿಯು ದೇಹದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ, ತೂಕವನ್ನು ಕಳೆದುಕೊಳ್ಳುವುದು ಆರೋಗ್ಯಕರವಾಗಿ ಮತ್ತು ಸದೃಢವಾಗಿರಲು ಏಕೈಕ ಆಯ್ಕೆಯಾಗಿದೆ. ಹೆಚ್ಚುವರಿ ತೂಕವನ್ನು ತೊಡೆದುಹಾಕಲು ನಿಯಮಿತ ವ್ಯಾಯಾಮ, ಚುರುಕಾದ ನಡಿಗೆ ಇತ್ಯಾದಿಗಳನ್ನು ದೈನಂದಿನ ಜೀವನದಲ್ಲಿ ಸೇರಿಸಿವುದು ಅನಿವಾರ್ಯವಾಗಿದೆ.

9.ಕೊಬ್ಬಿನ ಆಹಾರ ನಿಗ್ರಹ

ಮಧುಮೇಹಿಗಳು ಹೆಚ್ಚಿನ ಕೊಬ್ಬಿನ ಆಹಾರ, ಆಲ್ಕೋಹಾಲ್, ಕೆಫೀನ್ ಮತ್ತು ಬಿಳಿ ಸಕ್ಕರೆಯಿಂದ ದೂರವಿರಬೇಕು. ಇದು ದೇಹದ ರೋಗನಿರೋಧಕ ವ್ಯವಸ್ಥೆಯ ಶಕ್ತಿಯನ್ನು ಕುಂದಿಸುತ್ತದೆ. ಹೆಚ್ಚು ಕೊಬ್ಬಿನಂಶವುಳ್ಳ ಆಹಾರಗಳು ದುಗ್ಧರಸ ವ್ಯವಸ್ಥೆಯನ್ನು ನಿರ್ಬಂಧಿಸಬಹುದು. ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯಕ್ಕೆ ಇದು ಅಡ್ಡಿಯಾಗುತ್ತದೆ.

10. ಹೊರಾಂಗಣದಲ್ಲಿ ಸಮಯ ಕಳೆಯಿರಿ

ಹೊರಾಂಗಣದಲ್ಲಿ ಅಥವಾ ಪ್ರಕೃತಿಯಲ್ಲಿ ಸಮಯ ಕಳೆಯುವುದು ಮನಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೇ, ದೇಹದಲ್ಲಿ ವಿಟಮಿನ್ 'ಡಿ' ಮಟ್ಟವನ್ನು ಹೆಚ್ಚಿಸುತ್ತದೆ. ವಿಟಮಿನ್ 'ಡಿ' ಅತ್ಯಗತ್ಯ ಅಂಶವಾಗಿದ್ದು, ಇದು ರೋಗಕಾರಕಗಳನ್ನು ಗುರುತಿಸುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ವಿರುದ್ಧ ಸೂಕ್ತ ಹೋರಾಟ ಮಾಡುತ್ತದೆ.

ಆರೋಗ್ಯಕರ ಆಹಾರ ಮತ್ತು ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಮಧುಮೇಹವನ್ನು ತಡೆಗಟ್ಟಲು, ನಿರ್ವಹಿಸಲು ಮತ್ತು ಹಿಮ್ಮುಖಗೊಳಿಸುವ ನಿರ್ಣಾಯಕ ಅಂಶಗಳಾಗಿವೆ. ಚಳಿಗಾಲದ ಅವಧಿಯಲ್ಲಿ ಮಧುಮೇಹಿಗಳಿಗೆ ತಮ್ಮ ಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಲು ಪ್ರಕೃತಿಚಿಕಿತ್ಸೆಯು ಉತ್ತಮವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.