ETV Bharat / bharat

ಏಷ್ಯಾದ ಅತಿದೊಡ್ಡ ಸಮ್ಮಕ್ಕ ಸಾರಕ್ಕ ಬುಡಕಟ್ಟು ಜಾತ್ರೆಗೆ ಭರದ ಸಿದ್ಧತೆ: 1.25 ಕೋಟಿ ಭಕ್ತರು ಬರುವ ನಿರೀಕ್ಷೆ - ಫೆಬ್ರವರಿ 16 ರಂದು ಸಮ್ಮಕ್ಕ ಸಾರಕ್ಕ ಬುಡಕಟ್ಟು ಜಾತ್ರೆ

ಫೆಬ್ರವರಿ 16 ರಂದು ನಡೆಯುವ ಈ ಮಹಾ ಜಾತ್ರೆಗೆ 1.25 ಕೋಟಿ ಜನರು ಬರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. ಈ ಜಾತ್ರೆಯಲ್ಲಿ ಪೌರಾಣಿಕ ಹೀರೋಗಳಾದ ಸಮ್ಮಕ್ಕ ಸಾರಕ್ಕರನ್ನು ಸ್ಮರಿಸಲಾಗುತ್ತದೆ.

ಏಷ್ಯಾದ ಅತಿದೊಡ್ಡ  ಸಮ್ಮಕ್ಕ ಸಾರಕ್ಕ ಬುಡಕಟ್ಟು ಜಾತ್ರೆಗೆ ಭರದ ಸಿದ್ಧತೆ

author img

By

Published : Feb 14, 2022, 5:39 PM IST

ಹೈದರಾಬಾದ್: ಏಷ್ಯಾದ ಅತಿದೊಡ್ಡ ಬುಡಕಟ್ಟು ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಮ್ಮಕ್ಕ- ಸಾರಕ್ಕ ಜಾತ್ರೆಗೆ ತೆಲಂಗಾಣದ ಮುಲುಗು ಜಿಲ್ಲೆಯ ಮೇಡಾರಂಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಫೆಬ್ರವರಿ 16 ರಂದು ಹೈದರಾಬಾದ್‌ನಿಂದ 240 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ನಾಲ್ಕು ದಿನಗಳ ದ್ವೈವಾರ್ಷಿಕ ಜಾತ್ರೆ ನಡೆಯಲಿದ್ದು, ವೇದಿಕೆ ಸಿದ್ಧವಾಗಿದೆ.

ಇಷ್ಟು ಭಕ್ತರು ಎಲ್ಲಿಂದ ಬರುತ್ತಾರೆ?: ತೆಲಂಗಾಣದ ಕುಂಭಮೇಳ ಎಂದು ಸಾಮಾನ್ಯವಾಗಿ ಕರೆಯಲಾಗುವ ಈ ಜಾತ್ರೆಗೆ 1.25 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಢ, ಮಧ್ಯಪ್ರದೇಶ, ಒಡಿಶಾ ಮತ್ತು ಇತರ ರಾಜ್ಯಗಳ ವಿವಿಧ ಭಾಗಗಳಿಂದ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗ ಸೆರಿದಂತೆ ಇತರರು ಜಾತ್ರೆಗೆ ಸೇರುತ್ತಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಸ್ಪರ್ಧೆ ದೈವದ ಆಟ, ಪಕ್ಷ ಬಿಡುವವರಿಗೆ ದೇವೇಗೌಡರು ಹೇಳಿದ್ದೇನು?

ಪ್ರಮುಖವಾಗಿ ಈ ಜಾತ್ರೆ ಬುಡಕಟ್ಟು ಸಂಪ್ರದಾಯಗಳ ಆಚರಣೆಯನ್ನು ಸೂಚಿಸುತ್ತದೆ. ಸಮ್ಮಕ್ಕ-ಸರಳಮ್ಮ ಜಾತ್ರೆ ಎಂದೂ ಸಹ ಕರೆಯಲ್ಪಡುವ ಇಲ್ಲಿಗೆ ಕಳೆದ ಕೆಲವು ದಿನಗಳಲ್ಲಿ ಅಂದಾಜು ನಾಲ್ಕು ಲಕ್ಷ ಭಕ್ತರು ಮೇಡಾರಂಗೆ ಆಗಮಿಸಿದ್ದಾರೆ.

ಗೋದಾವರಿ ನದಿಯ ಉದ್ದಕ್ಕೂ ಹಲವಾರು ರಾಜ್ಯಗಳಲ್ಲಿ ಅರಣ್ಯದ ಅಂಚಿನಲ್ಲಿ ವಾಸಿಸುವ ಆದಿವಾಸಿಗಳು ಪೌರಾಣಿಕ ವ್ಯಕ್ತಿಗಳಾದ ಸಮ್ಮಕ್ಕ ಮತ್ತು ಸಾರಕ್ಕ ಅವರ ಶೌರ್ಯವನ್ನು ಸ್ಮರಿಸಲು ಎರಡು ವರ್ಷಗಳಿಗೊಮ್ಮೆ ಇಲ್ಲಿಗೆ ಸೇರುತ್ತಾರೆ.

ಏಷ್ಯಾದ ಅತಿದೊಡ್ಡ  ಸಮ್ಮಕ್ಕ ಸಾರಕ್ಕ ಬುಡಕಟ್ಟು ಜಾತ್ರೆಗೆ ಭರದ ಸಿದ್ಧತೆ
ಏಷ್ಯಾದ ಅತಿದೊಡ್ಡ ಸಮ್ಮಕ್ಕ ಸಾರಕ್ಕ ಬುಡಕಟ್ಟು ಜಾತ್ರೆಗೆ ಭರದ ಸಿದ್ಧತೆ

ಯಾರು ಈ ಸಮ್ಮಕ್ಕ ಮತ್ತು ಸಾರಕ್ಕ?: ಆದಿವಾಸಿಗಳು ಅವರನ್ನು ದೇವತೆಗಳಂತೆ ಪರಿಗಣಿಸುತ್ತಾರೆ ಮತ್ತು ಆದಿವಾಸಿಗಳನ್ನು ರಕ್ಷಿಸಲು ಪ್ರಯತ್ನಿಸಿದ ಅವರ ಶೌರ್ಯವನ್ನು ಈ ವೇಳೆ ಶ್ಲಾಘಿಸುತ್ತಾರೆ. ಕೋಯಾ ಬುಡಕಟ್ಟಿಗೆ ಸೇರಿದ ಈ ತಾಯಿ-ಮಗಳು ಎಂಟು ಶತಮಾನಗಳ ಹಿಂದೆ ಕಾಕತೀಯ ಸಾಮ್ರಾಜ್ಯದ ವಿರುದ್ಧ ಹೋರಾಡುತ್ತಿರುವಾಗ ಮರಣಹೊಂದಿದ್ದರಂತೆ.

12ನೇ ಶತಮಾನದಲ್ಲಿ ಆಗಿನ ಕಾಕತೀಯ ಅರಸರು ಬರಗಾಲದ ಸಂದರ್ಭದಲ್ಲಿ ಆದಿವಾಸಿಗಳ ಮೇಲೆ ತೆರಿಗೆ ವಿಧಿಸುವುದರ ವಿರುದ್ಧ ಸಮ್ಮಕ್ಕ ಮತ್ತು ಅವರ ಮಗಳು ಸರಳಮ್ಮ ಹೋರಾಡಿದ್ದರು ಎಂಬುದು ಪ್ರತೀತಿ.

ಆ ವೇಳೆ ಬುಡಕಟ್ಟು ರಾಜ ಮೇದರಾಜು ಗೋದಾವರಿ ನದಿಯ ದಡದಲ್ಲಿರುವ ಬುಡಕಟ್ಟು ವಾಸಸ್ಥಾನಗಳನ್ನು ಆಳುತ್ತಿದ್ದನು ಮತ್ತು ಕಾಕತೀಯ ರಾಜರಿಗೆ ರಾಯಧನವನ್ನು ಈತ ನೀಡಬೇಕಾಗಿತ್ತು. ಆದರೆ, ದೀರ್ಘಕಾಲದ ಬರದಿಂದಾಗಿ ಮೇದರಾಜು ರಾಯಧನವನ್ನು ಪಾವತಿಸಲು ವಿಫಲರಾದರು. ಇದನ್ನು ಪ್ರತಿಭಟನೆ ಎಂದು ಪರಿಗಣಿಸಿ, ಕಾಕತೀಯ ರಾಜರು ಈ ಪ್ರದೇಶವನ್ನು ಆಕ್ರಮಿಸಿದರು.

ಆ ವೇಳೇ ಕಾಕತೀಯರ ಸೈನ್ಯದೊಂದಿಗೆ ಹೋರಾಡಿ, ಮೇದರಾಜು ಮತ್ತು ಎಲ್ಲಾ ಸಂಬಂಧಿಕರು ಸತ್ತರು. ಅವನ ಮಗಳು ಸಮ್ಮಕ್ಕ ಮತ್ತು ಅವಳ ಮಗಳು ಸಾರಕ್ಕ ಅಥವಾ ಸರಳಮ್ಮ ಸಹ ಈ ಹೋರಾಟದಲ್ಲಿ ವೀರ ಮರಣನ್ನಪ್ಪಿದ್ದರು.

ಇದನ್ನೂ ಓದಿ: ಮನೆಯಲ್ಲಿಯೇ ತಯಾರಾಗುತ್ತಿವೆ ಬೈಕ್, ಇತರ ವಾಹನಗಳು: ಖಾಸಗಿ ಕೆಲಸ ಬಿಟ್ಟು ಸೈ ಎನಿಸಿಕೊಂಡ ಯುವಕ

ಸ್ಥಳೀಯ ಐತಿಹ್ಯದ ಪ್ರಕಾರ, ದಣಿದಿದ್ದ ಸಮ್ಮಕ್ಕ ಚಿಲುಕಲಗುಟ್ಟದ ಬೆಟ್ಟದ ಮೇಲೆ ಹೋಗಿ ಕಣ್ಮರೆಯಾದರಂತೆ. ಆಕೆ ಹುಡುಕಿಕೊಂಡು ಹೋದ ಆದಿವಾಸಿಗಳಿಗೆ ಬಿದಿರಿನ ಮರದ ಕೆಳಗೆ ಸಿಂಧೂರದ ಪೆಟ್ಟಿಗೆ ಮಾತ್ರ ಸಿಕ್ಕಿತು ಎಂದೂ ಸಹ ಹೇಳಲಾಗುತ್ತದೆ.

ಸಂಭ್ರಮ ಹೇಗೆ?: ಪ್ರತಿ ಎರಡು ವರ್ಷಗಳಿಗೊಮ್ಮೆ ಬುಡಕಟ್ಟು ಪುರೋಹಿತರು ಬಿದಿರಿನ ತೋಪಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಅವರು ತಮ್ಮ ದೇವತೆ ಎಂದು ಪರಿಗಣಿಸುವ ಸಮ್ಮಕ್ಕನನ್ನು ಸಂಕೇತಿಸುವ ಕೆಂಪು ಬಟ್ಟೆಯಲ್ಲಿ ಸುತ್ತುತ್ತಾರೆ.

ಜಾತ್ರೆಗೆ ಒಂದು ದಿನ ಮೊದಲು ಅರ್ಚಕರು ಮೇಡಾರಂನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕನ್ನೆಪಲ್ಲಿ ಗ್ರಾಮದಲ್ಲಿ ಇದೇ ರೀತಿಯ ಆಚರಣೆಯನ್ನು ಮಾಡುತ್ತಾರೆ ಮತ್ತು ಸಾರಕ್ಕ ದೇವತೆಯನ್ನು ಅಲ್ಲಿಂದ ಕರೆತರುತ್ತಾರೆ. ಎರಡನ್ನೂ ಮೇಡಾರಂ ಗ್ರಾಮದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ಜಾತ್ರೆ ಪ್ರಾರಂಭವಾಗುತ್ತದೆ.

ಮೂರು ದಿನಗಳ ನಂತರ, ಅವರು ದೇವತೆಗಳನ್ನು ಮರಳಿ ತೆಗೆದುಕೊಂಡು ಹೋಗಿ ಮುಂದಿನ ಜಾತ್ರೆಯವರೆಗೆ ಕಾಡಿನಲ್ಲಿ ಇರಿಸುತ್ತಾರೆ. ಬಡ ಆದಿವಾಸಿಗಳು ತಮ್ಮ ತೂಕದ ಬೆಲ್ಲವನ್ನು ಚಿನ್ನವೆಂದು ಪರಿಗಣಿಸಿ ಅರ್ಪಿಸುತ್ತಾರೆ. ಅವರು ಕೆಂಪು ಕುಪ್ಪಸದ ತುಂಡುಗಳು, ಸಿಂಧೂರ ಮತ್ತು ಅರಿಶಿನವನ್ನು ದೊಡ್ಡ ಪ್ರಮಾಣದಲ್ಲಿ ದೇವತೆಗಳಿಗೆ ಅರ್ಪಿಸುತ್ತಾರೆ. ನೈವೇದ್ಯದಿಂದ ಸಿಗುವ ಪ್ರಸಾದವನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಇತರರಿಗೆ ಹಂಚುತ್ತಾರೆ.

ಜಂಪಣ್ಣನಿಗೂ ಗೌರವ: ಭಕ್ತಾದಿಗಳು ಗೋದಾವರಿ ನದಿಯ ಉಪನದಿಯಾದ ಜಂಪಣ್ಣ ವಾಗುವಿನಲ್ಲೂ ಪವಿತ್ರ ಸ್ನಾನ ಮಾಡುತ್ತಾರೆ. ಕಾರಣ ಜಂಪಣ್ಣ ಬುಡಕಟ್ಟು ಯೋಧ ಮತ್ತು ಕಾಕತೀಯ ಸೈನ್ಯದೊಂದಿಗಿನ ಯುದ್ಧದಲ್ಲಿ ಕೊಲ್ಲಲ್ಪಟ್ಟ ಬುಡಕಟ್ಟು ದೇವತೆ ಸಮ್ಮಕ್ಕನ ಮಗ ಕೂಡ. ಈ ನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳು ತೊಲಗುತ್ತದೆ ಎಂದು ಬುಡಕಟ್ಟು ಜನಾಂಗದವರು ನಂಬುತ್ತಾರೆ.

ಜಾತ್ರೆಗೆ 1.25 ಕೋಟಿ ಜನರು ಬರುವ ನಿರೀಕ್ಷೆ
ಜಾತ್ರೆಗೆ 1.25 ಕೋಟಿ ಜನರು ಬರುವ ನಿರೀಕ್ಷೆ

ಪೊಲೀಸರಿಂದ ಬಿಗಿ ಭದ್ರತೆ: ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮತ್ತು ಪೊಲೀಸ್ ಮಹಾನಿರ್ದೇಶಕ ಮಹೇಂದರ್ ರೆಡ್ಡಿ ಈಗಾಗಲೇ ಮೇಡಾರಂಗೆ ಭೇಟಿ ನೀಡಿ ಜಾತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಸೋಮೇಶ್ ಕುಮಾರ್ ಅವರು, ದರ್ಶನ ಮತ್ತಿತರ ಧಾರ್ಮಿಕ ವಿಧಿವಿಧಾನಗಳನ್ನು ಸುಗಮವಾಗಿ ನಡೆಸಲು ಎಲ್ಲಾ ಸರ್ಕಾರಿ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚಿಸಿದ್ದಾರೆ.

ಜಾತ್ರೆಯ ಭಾರಿ ಭದ್ರತೆ ನಿಮಿತ್ತ ಸುಮಾರು 10,000 ಪೊಲೀಸರನ್ನು ನಿಯೋಜಿಸಲಾಗುತ್ತದೆ. ಹಾಗೆ 382 ಸಿಸಿಟಿವಿ ಕ್ಯಾಮೆರಾಗಳು ಮತ್ತು ಎರಡು ಡ್ರೋನ್ ಕ್ಯಾಮೆರಾಗಳನ್ನು ಈ ವೇಳೆ ಬಳಕೆ ಮಾಡಲಾಗುತ್ತದೆ.

ಮೇಡಾರಂನಲ್ಲಿರುವ ಕಮಾಂಡ್ ಕಂಟ್ರೋಲ್ ರೂಂನಲ್ಲಿರುವ 20 ಡಿಸ್ಪ್ಲೇ ಸ್ಕ್ರೀನ್‌ಗಳಲ್ಲಿ ಹಿರಿಯ ಅಧಿಕಾರಿಗಳು ದಿನದ 24 ಗಂಟೆಯೂ ಬೃಹತ್ ಸಮಾವೇಶದ ಮೇಲ್ವಿಚಾರಣೆ ನಡೆಸಲಿದ್ದಾರೆ.

ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) 3.5 ಲಕ್ಷ ಖಾಸಗಿ ವಾಹನಗಳು ಮತ್ತು 4,000 ಬಸ್‌ಗಳು ಇಲ್ಲಿಗೆ ಸಂಚರಿಸುತ್ತವೆ ಎಂದು ಸಂಚಾರ ಪೊಲೀಸರು ಅಂದಾಜಿಸಿದ್ದಾರೆ. ವಾಹನ ದಟ್ಟಣೆ ಮತ್ತು ಪಾರ್ಕಿಂಗ್ ನಿಯಂತ್ರಿಸಲು ಇದು ಪೊಲೀಸರಿಗೆ ದೊಡ್ಡ ಸವಾಲಾಗಲಿದೆ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ವಾಹನಗಳನ್ನು ನಿಯಂತ್ರಿಸಲು 33 ಪಾರ್ಕಿಂಗ್ ಸ್ಥಳಗಳು ಮತ್ತು 37 ವಾಹನ ಹೋಲ್ಡಿಂಗ್ ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ನಾಲ್ಕು ಕಿಲೋಮೀಟರ್‌ಗೆ ಒಂದು ಪೊಲೀಸ್ ಔಟ್‌ಪೋಸ್ಟ್ ಸ್ಥಾಪಿಸಲಾಗಿದೆ.

ಏಷ್ಯಾದ ಅತಿದೊಡ್ಡ ಬುಡಕಟ್ಟು ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಮ್ಮಕ್ಕ ಸಾರಕ್ಕ ಜಾತ್ರೆ

ಈ ಸಮಾರಂಭವನ್ನು ಅನ್ನು ಕೋವಿಡ್ -19 ಪ್ರೋಟೋಕಾಲ್​​​​​​​ನೊಂದಿಗೆ ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆಯು ಕರ್ತವ್ಯದಲ್ಲಿರುವ ಎಲ್ಲ ಪೊಲೀಸರಿಗೆ ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಿಟ್‌ಗಳನ್ನು ವಿತರಿಸಲಿದೆ. ಭಕ್ತರಿಗೆ ಮಾರ್ಗದರ್ಶನ ನೀಡಲು ಪೊಲೀಸರು 50 ಸಾರ್ವಜನಿಕ ಮಾಹಿತಿ ಕೇಂದ್ರಗಳನ್ನು ಸಹ ಸ್ಥಾಪಿಸಿದ್ದಾರೆ.

ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ವಿವಿಧ ಇಲಾಖೆಗಳು ವಿವಿಧ ಕಾಮಗಾರಿಗಳನ್ನು ಕೈಗೊಂಡಿವೆ. ಜಂಪಣ್ಣ ವಾಗು ಉದ್ದಕ್ಕೂ ಸ್ನಾನದ ಘಾಟ್‌ಗಳನ್ನು ಅಲಂಕರಿಸುವುದು ಇವುಗಳಲ್ಲಿ ಪ್ರಮುಖವಾದುದಾಗಿದೆ.

ತೆಲಂಗಾಣ ಮತ್ತು ನೆರೆಯ ಮಹಾರಾಷ್ಟ್ರದಾದ್ಯಂತ 51 ಕೇಂದ್ರಗಳಿಂದ ಬಸ್‌ ಸೇವೆ ಇದ್ದು, 23 ಲಕ್ಷ ಪ್ರಯಾಣಿಕರನ್ನು ಸಾಗಿಸುವ ನಿರೀಕ್ಷೆಯಿದೆ. ಈ ಕಾರ್ಯಾಚರಣೆಗಳಿಂದ TSRTC ಗೆ 32 ಕೋಟಿ ಆದಾಯ ಬರುವ ನಿರೀಕ್ಷೆ ಇದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.