ETV Bharat / assembly-elections

ತೆಲಂಗಾಣ ಚುನಾವಣೆ: ಅಧಿಕಾರದತ್ತ ಕಾಂಗ್ರೆಸ್​​​​.. ಎರಡು ಅವಧಿಯ ಕೆಸಿಆರ್​ ಆಡಳಿತಕ್ಕೆ ತೆರೆ!

Telangana assembly election result 2023 live: ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮ್ಯಾಜಿಕ್​ ನಂಬರ್​ 60. ಸಿಎಂ ಕೆಸಿಆರ್ ವಿರುದ್ಧ ಕಾಂಗ್ರೆಸ್​ ಅಧ್ಯಕ್ಷ ರೇವಂತ್ ರೆಡ್ಡಿ ಮುನ್ನಡೆ ಪಡೆದುಕೊಂಡಿದ್ದಾರೆ.​

ತೆಲಂಗಾಣ ವಿಧಾನಸಭೆ ಚುನಾವಣೆ
ತೆಲಂಗಾಣ ವಿಧಾನಸಭೆ ಚುನಾವಣೆ
author img

By ETV Bharat Karnataka Team

Published : Dec 3, 2023, 9:23 AM IST

Updated : Dec 3, 2023, 2:53 PM IST

ಹೈದರಾಬಾದ್​: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದತ್ತ ಮುನ್ನುಗ್ಗುತ್ತಿದೆ. ಅಶ್ವರೋಪೇಟ ಕ್ಷೇತ್ರದ ಅಭ್ಯರ್ಥಿ ಆದಿನಾರಾಯಣ ರಾವ್ ಅವರು ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್​ ಶುಭಾರಂಭ ಮಾಡಿತ್ತು. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಒಟ್ಟಾರೆ ಕಾಂಗ್ರೆಸ್​​​​​​​​ ಇದುವರೆಗೂ 33 ಸ್ಥಾನಗಳನ್ನು ಗೆದ್ದುಕೊಂಡಿದ್ದು, 30 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಇನ್ನು ಬಿಆರ್​ಎಸ್​​ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 28 ರಲ್ಲಿ ಮುನ್ನಡೆಯಲ್ಲಿದೆ. ಇನ್ನು ಬಿಜೆಪಿ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 3 ರಲ್ಲಿ ಮುನ್ನಡೆ ಸಾಧಿಸಿದೆ. ಎಂಐಎಂ ಎರಡರಲ್ಲಿ ಗೆಲುವು ಸಾಧಿಸಿದ್ದು, ಐದು ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.​​​

TELANGANA119/119

PARTY

BRS

undefined

INC

undefined

BJP

undefined

MIM

undefined

OTH

undefined
LEAD2830351
WON1233520
CHANGE-48+44+7--3

ಅಶ್ವರೋಪೇಟದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಆದಿನಾರಾಯಣ ಜರೆ ಜಯ ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್​ ಅಧಿಕೃತವಾಗಿ ಗೆಲುವಿನ ನಗೆ ಬೀರಿದೆ.

49 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ನವೆಂಬರ್​ 30 ರಂದು ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 35,655 ಮತಗಟ್ಟೆಗಳ ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ. ಚಾರ್ಮಿನಾರ್, ಭದ್ರಾಚಲಂ ಮತ್ತು ಆಶ್ವರಪೇಟ ಕ್ಷೇತ್ರಗಳ ಮತ ಎಣಿಕೆ ಅಂತಿಮ ಸುತ್ತುಗಳು ತಲುಪುತ್ತಿದ್ದು, ಈ ಕ್ಷೇತ್ರಗಳ ಫಲಿತಾಂಶ ಶೀಘ್ರವೇ ಹೊರಬೀಳುವ ನಿರೀಕ್ಷೆಯಿದೆ. ಚಾರ್​ಮಿನಾರ್​ ಕ್ಷೇತ್ರದ ಮತ ಎಣಿಕೆ ಅತ್ಯಂತ ಕಡಿಮೆ ಇದ್ದು, ಮೊದಲು ಫಲಿತಾಂಶ ಸಿಗಲಿದೆ. ಮ್ಯಾಜಿಲ್​ ನಂಬರ್​ 60.

ಪ್ರಮುಖ ನಾಯಕರ ಮಾಹಿತಿ: ಕಾಂಗ್ರೆಸ್​ ಸಿಎಂ ಅಭ್ಯರ್ಥಿಯಾಗಿರುವ ರೇವಂತ್​ರೆಡ್ಡಿ ಕಾಮಾರೆಡ್ಡಿ ಮತ್ತು ಕೋಡಂಗಲ್​ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಮಾರೆಡ್ಡಿಯಲ್ಲಿ ಮುನ್ನುಗ್ಗವ ಮೂಲಕ ಸಿಎಂ ಚಂದ್ರಶೇಖರ್​​ರಾವ್​ ಅವರಿಗೆ ವಿರುದ್ಧ ಸವಾಲು ಒಡ್ಡಿದ್ದಾರೆ. ಸಿಎಂ ಕೆಸಿಆರ್​ ಸ್ಪರ್ಧಿಸಿರುವ ಎರಡು ಕ್ಷೇತ್ರಗಳ ಪೈಕಿ ಕಾಮಾರೆಡ್ಡಿ ಕ್ಷೇತ್ರ ಕೂಡ ಒಂದು. ಅಲ್ಲಿ ಸದ್ಯ ಅವರು ಹಿನ್ನಡೆಯಲ್ಲಿದ್ದಾರೆ. ಗಜ್ವಲ್​ ಕ್ಷೇತ್ರದಲ್ಲಿ ಮುನ್ನಡೆಯಲಿದ್ದಾರೆ.

ಬಿಜೆಪಿಯ ಮಾಜಿ ಅಧ್ಯಕ್ಷ, ಸಂಸದ ಬಂಡಿ ಸಂಜಯ್​​ಕುಮಾರ್​ ಅವರು ಕರೀಂನಗರ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಬಿಆರ್​ಎಸ್​​ನ ಗಂಗುಲು ಕಮಲಾಕರ್​ ಅವರು ಮುನ್ನಡೆ ಕಾಪಾಡಿಕೊಂಡಿದ್ದಾರೆ. ಸಿಎಂ ಕೆಸಿಆರ್​ ಪುತ್ರ, ಸಚಿವ ಕೆಟಿ ರಾಮರಾವ್​ ಸಿರ್ಚಿಲ್ಲಾ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದ್ದಾರೆ. ಕ್ರಿಕೆಟಿಗ, ಮಾಜಿ ಸಂಸದ ಮಹಮದ್​ ಅಜರುದ್ದೀನ್​ ಜ್ಯುಬ್ಲಿಹಿಲ್ಸ್​ನಲ್ಲಿ ಹಿನ್ನಡೆಯಲ್ಲಿದ್ದರೆ, ಬಿಆರ್​​ಎಸ್​ ಮಗಂಟಿ ಗೋಪಿನಾಥ್​​ ಮುನ್ನಡೆಯಲ್ಲಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ತೆಲಂಗಾಣ ಚುನಾವಣಾ ಫಲಿತಾಂಶ: ಮತ ಎಣಿಕೆ ಆರಂಭ

Last Updated : Dec 3, 2023, 2:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.