ETV Bharat / assembly-elections

ವಿರೋಧದ ಅಲೆಯಲ್ಲಿ "ಸಾಗರ" ಈಜಿ ದಾಟುವರೇ ಹಾಲಪ್ಪ, ಬೇಳೂರು?

ಶಿವಮೊಗ್ಗ ಜಿಲ್ಲೆಯ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರಗಳಲ್ಲಿ ಸಾಗರವೂ ಒಂದಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬುದು ಕುತೂಹಲದ ವಿಷಯವಾಗಿದೆ.

author img

By

Published : Apr 5, 2023, 11:13 AM IST

Updated : Apr 5, 2023, 5:48 PM IST

ಸಾಗರ ವಿಧಾನಸಭೆ ಕ್ಷೇತ್ರದ ಮಾಹಿತಿ
ಸಾಗರ ವಿಧಾನಸಭೆ ಕ್ಷೇತ್ರದ ಮಾಹಿತಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭೆ ಕ್ಷೇತ್ರ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕ್ಷೇತ್ರದಲ್ಲಿ ಬಹುಭಾಗ ಕಾಡು ಹಾಗೂ ಎರಡು ಅಣೆಕಟ್ಟೆಗಳನ್ನು ಹೊಂದಿದೆ. ಕ್ಷೇತ್ರವು ಸಮಾಜವಾದಿ ನೆಲೆ ಹಾಗೂ ಭೂ ಹೋರಾಟ ಕಾಗೋಡು ಚಳವಳಿಯಿಂದ ಹೆಸರುವಾಸಿಯಾಗಿದೆ. ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಇಲ್ಲಿ ಜೆಡಿಎಸ್ ಹೆಸರಿಗಷ್ಟೆ ಸ್ಪರ್ಧೆ. ಸಾಗರ ವಿಧಾನಸಭೆ ಕ್ಷೇತ್ರದ ಚುನಾವಣಾ ಕಾವು ದಿನೆ ದಿನೇ ಏರುತ್ತಿದೆ.

ಹಾಲಿ ಶಾಸಕ ಹರತಾಳು ಹಾಲಪ್ಪ ಅವರು ಸಾಗರದಲ್ಲಿ ಈಜಿ ಮತ್ತೆ ಗೆಲುವು ಸಾಧಿಸುತ್ತಾರಾ ಅಥವಾ ಕಾಂಗ್ರೆಸ್ ಟಿಕೆಟ್​ ಪಡೆದ ಗೋಪಾಲಕೃಷ್ಣ ಬೇಳೂರು ಗೆಲುವು ಸಾಧಿಸುತ್ತಾರಾ ಎಂಬುದು ಚುನಾವಣೆ ನಿರ್ಧರಿಸಲಿದೆ. ಸಾಗರ ವಿಧಾನಸಭಾ ಕ್ಷೇತ್ರ ಭೂ ಹೋರಾಟಕ್ಕೆ ಪ್ರಸಿದ್ದಿ ಪಡೆದಿದೆ. ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತರುವಲ್ಲಿ ಈ ಕ್ಷೇತ್ರದ ಕೊಡುಗೆ ಅಪಾರವಾಗಿದೆ.

ಕಾಗೋಡು ಹೋರಾಟದ ಜಾಡು: ಈ ಭಾಗದಲ್ಲಿ ಸಾಕಷ್ಟು ಸಣ್ಣ ಹಿಡುವಳಿದಾರರಿದ್ದಾರೆ. ಶ್ರೀಮಂತರ ಭೂಮಿಯನ್ನು ಕೆಲ ಬಡವರು ಉಳುಮೆ ಮಾಡಿ, ಬಂದ ಫಸಲಿನ್ನು ಭೂ ಮಾಲೀಕನಿಗೆ ನೀಡುತ್ತಿದ್ದರು. ಬಳಿಕ ಉಳಿದ ಫಸಲನ್ನು ತಾವು ಪಡೆಯುತ್ತಿದ್ದರು. ನಂತರ ಇಲ್ಲಿ ನಡೆದ ಕಾಗೋಡು ಹೋರಾಟದಲ್ಲಿ ಹೆಚ್. ಗಣಪತಿಯಪ್ಪ ಅವರ ಶ್ರಮದ ಪ್ರತಿಫಲ ಹಾಗೂ ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಜಾರಿಗೆ ತಂದ ಉಳುವವನೇ ಭೂಮಿ ಒಡೆಯ ಕಾನೂನಿನಿಂದ ಸಾಕಷ್ಟು ಜನರು ಭೂಮಿಯ ಒಡೆಯರಾದರು.

ರಾಮ್ ಮನೋಹರ್ ಲೋಹಿಯಾ ಅವರು ತಮ್ಮ ಚಳವಳಿ ಕಟ್ಟುವ ಸಲುವಾಗಿ ಸಾಗರಕ್ಕೆ ಒಮ್ಮೆ ಭೇಟಿ ನೀಡಿದ್ದರು. ಜಗತ್ ಪ್ರಸಿದ್ದ ಜೋಗ ಜಲಪಾತ ಇರುವುದು ಸಾಗರ ತಾಲೂಕಿನಲ್ಲಿ. ಅಲ್ಲದೇ ನಾಡಿಗೆ ವಿದ್ಯುತ್ ನೀಡಲು ಶರಾವತಿ ನದಿಗೆ ಲಿಂಗನಮಕ್ಕಿ ಬಳಿ ಅಣೆಕಟ್ಟೆಯನ್ನು ನಿರ್ಮಿಸಿ ವಿದ್ಯುತ್ ಉತ್ಪಾದನೆ ನಡೆಸಿದ ಪ್ರದೇಶ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯ ಕ್ಷೇತ್ರ ವಿಂಗಡಣೆಯಲ್ಲಿ ಹೊಸನಗರ ತಾಲೂಕನ್ನು ಸಾಗರ ಮತ್ತು ತೀರ್ಥಹಳ್ಳಿಗೆ ಹಂಚಿಕೆ ಮಾಡಲಾಗಿದೆ. ಈ ಬಾರಿ ಹಿರಿಯ ಸಮಾಜವಾದಿ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಹಾಲಪ್ಪ ಹರತಾಳು ಅವರು ಸ್ಪರ್ಧಾಕಾಕ್ಷಿಯಾಗಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಗೋಪಾಕೃಷ್ಣ ಬೇಳೂರು ಕಣದಲ್ಲಿದ್ದಾರೆ. ಸಾಗರ ಕ್ಷೇತ್ರದಲ್ಲಿ ಜೆಡಿಎಸ್​ಗೆ ಯಾವುದೇ ನೆಲೆ‌ ಇಲ್ಲದ ಕಾರಣ ಸ್ಪರ್ಧೆ ನೆಪ ಮಾತ್ರಕ್ಕೆ ಎನ್ನಬಹುದು.

ಮತದಾರರ ಪ್ರಮಾಣ: ಜಿಲ್ಲಾ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್​ ಅವರು ರೈತ ಹೋರಾಟ ಸಮಿತಿಯಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 2,07,500 ಮತದಾರರು ಇದ್ದಾರೆ. ಇದರಲ್ಲಿ 1 ಲಕ್ಷ 317 ಮಂದಿ ಪುರುಷ ಮತದಾರರಿದ್ದರೆ, 1,02,432 ಲಕ್ಷ ಮಹಿಳಾ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಸಾಗರದಲ್ಲಿ ಈಡಿಗ ಸಮುದಾಯ ಪ್ರಾಬಲ್ಯ ಹೆಚ್ಚಿದೆ. ಬಳಿಕ ಬ್ರಾಹ್ಮಣ, ಪರಿಶಿಷ್ಟ ಜಾತಿ, ಮುಸ್ಲಿಮರು, ಲಿಂಗಾಯತರು, ಕ್ರಿಶ್ಚಿಯನ್ನರು, ಒಕ್ಕಲಿಗರೂ ಇದ್ದಾರೆ.

ಕಳೆದ ಚುನಾವಣೆಗಳನ್ನು ಗಮನಿಸಿದರೆ, ಕಾಂಗ್ರೆಸ್ 8 ಬಾರಿ, ಬಿಜೆಪಿ 3, ಸೋಷಿಯಲಿಸ್ಟ್​ ಪಾರ್ಟಿ, ಜೆಎಸ್​ಪಿ ತಲಾ 2 ಸಲ ಗೆದ್ದಿವೆ. 2004 ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪರ ವಿರುದ್ಧ ಗೋಪಾಲಕೃಷ್ಣ ಬೇಳೂರು ಗೆಲುವು ಸಾಧಿಸಿದ್ದರು. 2008 ರಲ್ಲಿ ಗೋಪಾಲಕೃಷ್ಣ ಬೇಳೂರು ಅವರು ಮರು ಆಯ್ಕೆಯಾಗಿದ್ದರು. 2013 ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಪ್ರತಿಸ್ಪರ್ಧಿ ಕೆಜೆಪಿಯ ಜಯಂತ್ ಅವರ ವಿರುದ್ಧ ಜಯಭೇರಿ ಬಾರಿಸಿದ್ದರು. 2018 ರ ಚುನಾವಣೆಯಲ್ಲಿ ಸೊರಬದ ಶಾಸಕರಾಗಿದ್ದ ಹಾಲಪ್ಪ ಹರತಾಳು ಅವರು ಸಾಗರದಿಂದ ಸ್ಪರ್ಧೆ ಮಾಡಿ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿದ್ದರು.

ಬಿಜೆಪಿ- ಕಾಂಗ್ರೆಸ್​ನಲ್ಲಿ ವಿರೋಧದ ಅಲೆ: ಕ್ಷೇತ್ರದಿಂದ ಸದ್ಯ ಕಾಂಗ್ರೆಸ್​ ಅಭ್ಯರ್ಥಿಯಾಗಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ. ಇದು ಮೂಲ ಕಾಂಗ್ರೆಸ್ಸಿಗರಿಗೆ ಬೇಸರ ತರಿಸಿದೆ. ಹಲವು ಮುಖಂಡರು ಅಸಮಾಧಾನ ಹೊರ ಹಾಕಿದ್ದು, ಈ ಮಧ್ಯೆಯೇ ಗೋಪಾಲಕೃಷ್ಣ ಬೇಳೂರು ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇತ್ತ ಬಿಜೆಪಿಯಲ್ಲಿಯೂ ಸಹ ಪಕ್ಷದ ಹಿರಿಯ ಮುಖಂಡರು ಶಾಸಕ ಹರತಾಲು ಹಾಲಪ್ಪ ವಿರುದ್ದ ಸಿಡಿದೆದಿದ್ದಾರೆ. ಇದು ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದು ಕುತೂಹಲದ ವಿಷಯವಾಗಿದೆ.

ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಶಿಗ್ಗಾಂವಿ ಅಲ್ಲ.. ಕುಂದಗೋಳ ಕ್ಷೇತ್ರದ ಮೇಲೆ ಸಿಎಂ ಬೊಮ್ಮಾಯಿ ಕಣ್ಣು

Last Updated : Apr 5, 2023, 5:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.