ETV Bharat / assembly-elections

ಸ್ಪಷ್ಟ ಬಹುಮತದತ್ತ ಕಾಂಗ್ರೆಸ್​ ದಾಪುಗಾಲು; ಪಕ್ಷೇತರರ ಬೆಂಬಲಕ್ಕೂ 'ಕೈ' ಕಸರತ್ತು - ಕಾಂಗ್ರೆಸ್​ ಪಕ್ಷವೂ ಮ್ಯಾಜಿಕ್​ ನಂಬರ್

ಮುನ್ನಡೆಯ ಫಲಿತಾಂಶದಲ್ಲಿ ಕಾಂಗ್ರೆಸ್​ ಪಕ್ಷ 110ರಿಂದ 112 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಿದೆ.

Karnataka Election 2023 Congress nearing to Clear majority

author img

By

Published : May 13, 2023, 10:46 AM IST

Updated : May 13, 2023, 11:17 AM IST

ಬೆಂಗಳೂರು: ವಿಧಾನಸಭಾ ಚುನಾವಣೆ ಮತ ಏಣಿಕೆ ಫಲಿತಾಂಶಗಳು ಪ್ರಕಟವಾಗ ತೊಡಗಿದ್ದು, ಕಾಂಗ್ರೆಸ್​ ಪಕ್ಷವೂ ಮ್ಯಾಜಿಕ್​ ನಂಬರ್​ ಸಮೀಪಿಸುವ ಮುನ್ಸೂಚನೆ ಸುಳಿವು ಸ್ಪಷ್ಟವಾಗಿದೆ. ಇದುವರೆಗಿನ ಫಲಿತಾಂಶವೂ ಕಾಂಗ್ರೆಸ್​ ಪಕ್ಷ 110ರಿಂದ 115 ಕ್ಷೇತ್ರಗಳಲ್ಲಿ ಸತತವಾಗಿ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಿದೆ. ಪಕ್ಷೇತರರು ಐದರಿಂದ ಆರು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ. ಅತಂತ್ರ ವಿಧಾನಸಭೆ ರಚನೆಯಾದರೆ ಜೆಡಿಎಸ್​ ಬೆಂಬಲದೊಂದಿಗೆ ಸರ್ಕಾರ ರಚಿಸಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ರಾಜಕೀಯ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್​ ಪಕ್ಷ ಇದೀಗ ತನ್ನ ತಂತ್ರಗಾರಿಕೆಯನ್ನು ಬದಲಿಸಿದೆ.

ಜೆಡಿಎಸ್​ ಶಾಸಕರ ಬೆಂಬಲ ಪಡೆಯಲು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಓಲೈಸುವ ಕಸರತ್ತು ಕಾಂಗ್ರೆಸ್​​ ಕೈ ಬಿಟ್ಟಿದೆ. ಜೆಡಿಎಸ್​ ಬದಲಿಗೆ, ಪಕ್ಷೇತರ ಶಾಸಕರನ್ನು ಸೆಳೆಯಲು ಕಾಂಗ್ರೆಸ್​ ಪಕ್ಷ ಯತ್ನ ನಡೆಸಿದೆ.

ಪಕ್ಷೇತರರ ಬೆಂಬಲ: ಅತಂತ್ರ ವಿಧಾನಸಭೆ ಚಿತ್ರಣ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್​ ಪಕ್ಷದ ಮುಖಂಡರು, ಪಕ್ಷೇತರರ ಅಭ್ಯರ್ಥಿಗಳ ಸಂಪರ್ಕವನ್ನು ಸಾಧಿಸಿ ತಮ್ಮತ್ತ ಸೆಳೆಯುವಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್​ ಪಕ್ಷದ ಬಂಡಾಯ ಅಭ್ಯರ್ಥಿಯಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಎಂಪಿ ಪ್ರಕಾಶ್​ ಅವರ ಪುತ್ರಿ ಲತಾ ಮಲ್ಲಿಕಾರ್ಜುನ್​​, ಕಾಂಗ್ರೆಸ್​ ಪಕ್ಷವೂ ಚುನಾವಣೆಯಲ್ಲಿ ಬೆಂಬಲವನ್ನು ಘೋಷಣೆ ಮಾಡಿದ್ದ ದರ್ಶನ್​ ಪುಟ್ಟಣ್ಣಯ್ಯ ಅವರನ್ನು ಈಗಾಗಲೇ ತಮ್ಮ ನೆಟ್​ವರ್ಕ್​ ಮೂಲಕ ಸಂಪರ್ಕಿಸಿ, ಪಕ್ಷಕ್ಕೆ ಸೇರಿಸಿಕೊಳ್ಳಲು ಬಲೆ ಬೀಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ದರ್ಶನ ಪುಟ್ಟಣ್ಣಯ್ಯ ಈಗಾಗಲೇ ಕಾಂಗ್ರೆಸ್​ ಪಕ್ಷ ಬಹಿರಂಗವಾಗಿ ಬೆಂಬಲ ಘೋಷಣೆ ಮಾಡಿದ್ದರಿಂದ, ದರ್ಶನ್​ ಅವರನ್ನು ಕೈ ಪಡೆಗೆ ಸೇರಿಸುವುದ ಕಷ್ಟವಾಗುವುದಿಲ್ಲ. ಮುನ್ನಡೆಯ ಫಲಿತಾಂಶದಂತೆ ಅಂತಿಮವಾಗಿ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್​ ಗೆದ್ದರೆ, ಕಾಂಗ್ರೆಸ್​ ಜೊತೆಗೆ ಮಾಜಿ ಉಪ ಮುಖ್ಯಮಂತ್ರಿ ಎಂಪಿ ಪ್ರಕಾಶ್​​ ಹೊಂದಿದ್ದ ರಾಜಕೀಯ ನಂಟಿನ ಮೂಲಕ ಲತಾ ಮಲ್ಲಿಕಾರ್ಜುನ್​ ಅವರನ್ನು ಸೆಳೆಯಲು ಕಾಂಗ್ರೆಸ್​​ಗೆ ಸುಲಭವಾಗಿದೆ.

ಬಿಜೆಪಿ ಬಗ್ಗೆ ಅಸಮಾಧಾನಗೊಂಡಿರುವ ಮಾಡಳು ವಿರೂಪಕ್ಷನವರ ಪುತ್ರ ಮಾಡಳು ಮಲ್ಲಿಕಾರ್ಜುನ್​ ಗೆಲ್ಲುವ ಸಾಧ್ಯತೆ ಹೆಚ್ಚಿದ್ದರಿಂದ ಅವರಿಗೂ ಕಾಂಗ್ರೆಸ್​ ಗಾಳ ಹಾಕುತ್ತಿದೆ.

ಇದನ್ನೂ ಓದಿ: ನಿಚ್ಚಳ ಬಹುಮತದತ್ತ ಕಾಂಗ್ರೆಸ್​ ದಾಪುಗಾಲು: ರಾಜ್ಯದ ಮತದಾರನ ಮಹಾತೀರ್ಪು!

Last Updated : May 13, 2023, 11:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.