ETV Bharat / assembly-elections

ಗೋಕಾಕ್ ಅಧಿಪತಿ ಯಾರಾಗ್ತಾರೆ?.. ಯಶ ಕಾಣುತ್ತಾ ರಮೇಶ ಜಾರಕಿಹೊಳಿ ವಿರುದ್ಧದ ಕಾಂಗ್ರೆಸ್​ ರಣತಂತ್ರ? - ಗೋಕಾಕ್ ಕಾಂಗ್ರೆಸ್​ ಅಭ್ಯರ್ಥಿ

ಬೆಳಗಾವಿ ಜಿಲ್ಲೆಯ ಗೋಕಾಕ್ ವಿಧಾನಸಭೆ ಕ್ಷೇತ್ರ ರಮೇಶ ಜಾರಕಿಹೊಳಿಯ ಭದ್ರಕೋಟೆ ಎಂದೇ ಬಿಂಬಿತವಾಗಿದ್ದು, ಈ ಬಾರಿ ಶತಾಯಗತಾಯ ಗೆಲುವು ಸಾಧಿಸಬೇಕು ಎಂಬ ರಣತಂತ್ರವನ್ನು ಕಾಂಗ್ರೆಸ್​ ರೂಪಿಸಿದೆ.

Karnataka assembly elections 2023: Ramesh Jarakiholi continues to win in Gokak?
ಗೋಕಾಕ್ ಅಧಿಪತಿ ಯಾರಾಗ್ತಾರೆ?... ಮುಂದುವರಿಯುತ್ತಾ ರಮೇಶ ಜಾರಕಿಹೊಳಿ ದಿಗ್ವಿಜಯ?
author img

By

Published : Apr 19, 2023, 3:44 PM IST

Updated : Apr 20, 2023, 4:52 PM IST

ಬೆಳಗಾವಿ: ಇಡೀ ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಜಿಲ್ಲೆಯ ಕರದಂಟು ನಾಡು ಗೋಕಾಕ್ ಮತ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಸತತವಾಗಿ ಆರು ಬಾರಿ ಗೆದ್ದಿರುವ ರಮೇಶ ಜಾರಕಿಹೊಳಿ ಮತ್ತೆ ಗೆಲ್ಲುವ ವಿಶ್ವಾಸದಲ್ಲಿದ್ದರೆ, ರಮೇಶ ಕಟ್ಟಿ ಹಾಕಲು ಕಾಂಗ್ರೆಸ್ ಪಂಚಮಸಾಲಿ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಗೋಕಾಕ್ ವಿಧಾನಸಭೆ ಕ್ಷೇತ್ರ ರಮೇಶ ಜಾರಕಿಹೊಳಿಯ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಇಲ್ಲಿ ಪಕ್ಷ ಮುಖ್ಯವಲ್ಲ, ವ್ಯಕ್ತಿ ಮುಖ್ಯ. ಯಾವುದೇ ಪಕ್ಷದಿಂದ ನಿಂತರೂ ಗೆದ್ದು ಬರುವಷ್ಟು ಹಿಡಿತ ಮತ್ತು ಪ್ರಭಾವವನ್ನು ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಹೊಂದಿದ್ದಾರೆ. ಹೀಗಾಗಿಯೇ ಐದು ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ರಮೇಶ ಜಾರಕಿಹೊಳಿ, ಆರನೇ ಬಾರಿ ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ಕೀರ್ತಿ ಕೂಡ ಇದೇ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿಯ ಅವರಿಗೆ ಸಲ್ಲುತ್ತದೆ. ಒಂದು ಸರ್ಕಾರ ಉರುಳಿಸಿ ಮತ್ತೊಂದು ಸರ್ಕಾರ ತರುವಷ್ಟು ರಾಜಕೀಯ ಶಕ್ತಿಯನ್ನು ಜಾರಕಿಹೊಳಿ ಬ್ರದರ್ಸ್ ಹೊಂದಿದ್ದಾರೆ. ಜಾರಕಿಹೊಳಿ ಸಹೋದರರು ಬೇರೆ ಬೇರೆ ಪಕ್ಷಗಳಲ್ಲಿ ಇದ್ದರೂ ಕೂಡ ತಮ್ಮ ಕುಟುಂಬ ಸದಸ್ಯರಿಗೆ ಸೋಲಾಗದಂತೆ ನೋಡಿಕೊಳ್ಳುತ್ತಾ ಬಂದಿದ್ದಾರೆ. ಮೇಲ್ನೋಟಕ್ಕೆ ಜಾರಕಿಹೊಳಿ ಬ್ರದರ್ಸ್ ಟೀಕೆ ಮಾಡಿದರೂ ಒಳಗೆ ಎಲ್ಲರೂ ಒಂದೇ ಎನ್ನುವುದು ಅನೇಕ ಬಾರಿ ಸಾಬೀತಾಗಿದೆ ಕೂಡಾ.

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಆ ಸಂಪುಟದಲ್ಲಿ ಜಾರಕಿಹೊಳಿ ಮನೆತನದ ಓರ್ವ ಸದಸ್ಯ ಮಂತ್ರಿ ಆಗಿರುತ್ತಾರೆ, ಬೆಳಗಾವಿ ಅಷ್ಟೇ ಅಲ್ಲದೇ ಇನ್ನುಳಿದ ಜಿಲ್ಲೆಗಳಲ್ಲೂ ತಮ್ಮ ಪ್ರಭಾವ ಹೊಂದಿರುವ ಜಾರಕಿಹೊಳಿ ಮನೆತನ ಇಡೀ ರಾಜ್ಯದಲ್ಲಿ ಪ್ರಭಾವಿ ರಾಜಕೀಯ ಮನೆತನವಾಗಿ ಗುರುತಿಸಿಕೊಂಡಿದೆ. ಸದ್ಯ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸ ಮುಖ ಡಾ. ಮಹಾಂತೇಶ ಕಡಾಡಿ, ಜೆಡಿಎಸ್ ಅಭ್ಯರ್ಥಿಯಾಗಿ ನ್ಯಾಯವಾದಿ ಚಂದನ ಗಿಡ್ಡನವರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ರಮೇಶ ವಿರುದ್ಧ ಪಂಚಮಸಾಲಿ ಅಸ್ತ್ರ: ಗೋಕಾಕ್ ಕ್ಷೇತ್ರದಲ್ಲಿ ಅತೀ ಹೆಚ್ಚು ಲಿಂಗಾಯತ ಪಂಚಮಸಾಲಿ ಮತದಾರರು ಇರುವ ಹಿನ್ನೆಲೆಯಲ್ಲಿ ಜಂಗಮ ಸಮಾಜದ ಅಶೋಕ ಪೂಜಾರಿ ಬದಲು ಪಂಚಮಸಾಲಿ ಸಮಾಜದ ಡಾ. ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಕಳೆದ ಎರಡು ವರ್ಷದಿಂದ ಮೀಸಲಾತಿ ಹೋರಾಟ ವಿಚಾರದಲ್ಲಿ ಪಂಚಮಸಾಲಿ ಸಮುದಾಯ ಜಾಗೃತವಾಗಿದ್ದು, ಸಾಮಾನ್ಯ ಕ್ಷೇತ್ರವಾಗಿರುವ ಗೋಕಾಕ್​ನಲ್ಲಿ ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಪಂಚಮಸಾಲಿಗರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ರಮೇಶ ಜಾರಕಿಹೊಳಿ ವಿರುದ್ಧ ಪಂಚಮಸಾಲಿ ಅಸ್ತ್ರವನ್ನು ಕಾಂಗ್ರೆಸ್ ಹೂಡಿದೆ. ಇದು ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಎಂದು ಕಾದು ನೋಡಬೇಕಿದೆ.

ಕ್ಷೇತ್ರದ ವಿಶೇಷತೆ: ಗೋಕಾಕ್ ಕರದಂಟು ಇಡೀ ನಾಡಿನಲ್ಲೆ ಸಾಕಷ್ಟು‌ ಪ್ರಸಿದ್ಧಿ ಪಡೆದಿದೆ. ಉತ್ತರ ಕರ್ನಾಟಕದ ನಯಾಗರ ಎಂದು ಕರೆಯುವ ಪ್ರಸಿದ್ಧ ಗೋಕಾಕ್ ಫಾಲ್ಸ್, ಗೊಡಚಿನ ಮಲ್ಕಿ ಫಾಲ್ಸ್, ಕೊಣ್ಣೂರು ಗ್ರಾಮದ ಬಳಿಯಿರುವ ಧೂಪದಾಳ್ ಜಲಾಶಯ, ಜಲವಿದ್ಯುತ್ ಉತ್ಪಾದನಾ ಕೇಂದ್ರವಾಗಿದ್ದು, ಇವೆಲ್ಲ ಇರುವುದು ಇದೇ ಗೋಕಾಕ್ ಕ್ಷೇತ್ರದಲ್ಲಿ. ಘಟಪ್ರಭಾ, ಮಾರ್ಕಂಡೇಯ ನದಿ ಈ ತಾಲೂಕಿನಲ್ಲಿ ಹರಿಯುತ್ತಿದ್ದು, ರೈತರಿಗೆ ಜೀವನಾಡಿಯಾಗಿವೆ.

ಈ ಭಾಗದಲ್ಲಿ ಅತೀ ಹೆಚ್ಚು ಹತ್ತಿ ಬೆಳೆಯುವ ಹಿನ್ನೆಲೆ ಗೋಕಾಕ್ ಮಿಲ್ ಸ್ಥಾಪಿಸಲಾಗಿದೆ. ನೀರಾವರಿ ಸೌಲಭ್ಯ ಹೆಚ್ಚಿರುವುದರಿಂದ ಕಬ್ಬನ್ನು ಇಲ್ಲಿನ ರೈತರು ಅಧಿಕವಾಗಿ ಬೆಳೆಯುತ್ತಾರೆ. ಹೀಗಾಗಿ ಸತೀಶ ಶುಗರ್ಸ್, ಸೌಭಾಗ್ಯಲಕ್ಷ್ಮೀ ಶುಗರ್ಸ್, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗಳು ಈ ಕ್ಷೇತ್ರದಲ್ಲಿವೆ. ಗೋವಿನ ಜೋಳವನ್ನೂ ಇಲ್ಲಿನ ರೈತರು ಹೆಚ್ಚಾಗಿ ಬೆಳೆಯುವುದರಿಂದ ಗೋವಿನ ಜೋಳ ಸಂಸ್ಕರಣ ಘಟಕ ಮತ್ತು ಸಿಮೆಂಟ್ ಫ್ಯಾಕ್ಟರಿ ಕೂಡ ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಮುಖ ವಾಣಿಜ್ಯ ನಗರವಾಗಿ ಗೋಕಾಕ್ ಬೆಳೆದು ನಿಂತಿದೆ.

ಕ್ಷೇತ್ರದ ಹಿನ್ನೆಲೆ: ಈವರೆಗೆ ಗೋಕಾಕ್ ವಿಧಾನಸಭೆ ಕ್ಷೇತ್ರದಲ್ಲಿ 16 ಚುನಾವಣೆಗಳು ನಡೆದಿವೆ. ಇದರಲ್ಲಿ ಬರೊಬ್ಬರಿ 12 ಬಾರಿ ಕಾಂಗ್ರೆಸ್ ಪಕ್ಷವು ಗೆಲುವಿನ ಪತಾಕೆ ಹಾರಿಸಿದ್ದರೆ, ಜನತಾ ಪಕ್ಷ ಎರಡು ಬಾರಿ, ಜನತಾ ದಳ ಮತ್ತು ಬಿಜೆಪಿ ತಲಾ ಒಂದು ಬಾರಿ ಗೆಲುವು ಸಾಧಿಸಿದೆ. 1967ರಿಂದ 2008ರವರೆಗೆ ಗೋಕಾಕ್ ಮೀಸಲು‌ ಕ್ಷೇತ್ರವಾಗಿತ್ತು. 1999, 2004, 2008, 2013, 2018ರ ಸಾರ್ವತ್ರಿಕ ಚುನಾವಣೆ ಮತ್ತು 2019ರ ಉಪ ಚುನಾವಣೆಯಲ್ಲಿಯೂ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಅತೀ ಹೆಚ್ಚು ಎಂದರೆ ಸತತವಾಗಿ 6 ಬಾರಿ ಗೆದ್ದ ಇತಿಹಾಸವನ್ನು ರಮೇಶ ಜಾರಕಿಹೊಳಿ ನಿರ್ಮಿಸಿದ್ದಾರೆ.

ಗೋಕಾಕ್ ವಿಧಾನಸಭೆ ಕ್ಷೇತ್ರದ ಮಾಹಿತಿ
ಗೋಕಾಕ್ ವಿಧಾನಸಭೆ ಕ್ಷೇತ್ರದ ಮಾಹಿತಿ

ಕಳೆದ ಮೂರು ಚುನಾವಣೆಗಳ ಫಲಿತಾಂಶ: 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮೇಶ ಜಾರಕಿಹೊಳಿ 44,989 ಮತ ಪಡೆದರೆ, ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ 37,229 ಮತ ಗಳಿಸಿದ್ದರು. ಈ ವೇಳೆ ರಮೇಶ 7,760 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ 79,175 ಮತ, ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ 51,170 ಮತ ಪಡೆದಿದ್ದರು. ಆಗ 28,005 ಮತಗಳ ಭಾರಿ ಅಂತರದಿಂದ ರಮೇಶ ಗೆದ್ದು ಬೀಗಿದ್ದರು. 2018ರಲ್ಲಿ ರಮೇಶ ಜಾರಕಿಹೊಳಿ 90,249 ಮತ, ಬಿಜೆಪಿಯಿಂದ ಸ್ಪರ್ಧಿಸಿದ್ದ ಅಶೋಕ ಪೂಜಾರಿ 75,969 ಮತ ಪಡೆದಿದ್ದರು. ಈ ವೇಳೆಯೂ 14,280 ಮತಗಳಿಂದ ರಮೇಶ ಗೆದ್ದಿದ್ದರು. ಬಳಿಕ ಬದಲಾದ ರಾಜಕೀಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾದ ನಂತರ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮೇಶ ಜಾರಕಿಹೊಳಿ 87,369 ಮತ ಪಡೆದು, 29,006 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ 58,394, ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಅಶೋಕ ಪೂಜಾರಿ 27,933 ಮತ ಪಡೆದು ಪರಾಭವಗೊಂಡಿದ್ದರು.

ಮಹಿಳಾ ಮತದಾರರೇ ಹೆಚ್ಚು: ಕ್ಷೇತ್ರದಲ್ಲಿ ಒಟ್ಟು 2,52,596 ಮತದಾರರಿದ್ದಾರೆ. ಈ ಪೈಕಿ 1,24,634 ಪುರುಷರು, 1,27,944 ಮಹಿಳೆಯರು ಹಾಗೂ 18 ಇತರರು ತಮ್ಮ ಮತ ಹಕ್ಕು ಹೊಂದಿದ್ದಾರೆ. ಇದರಲ್ಲಿ ಪುರುಷರಿಗಿಂತ 3,310 ಮಹಿಳಾ ಮತದಾರರೇ ಹೆಚ್ಚಿರುವುದು ಗೋಕಾಕ್ ಕ್ಷೇತ್ರದ ವಿಶೇಷತೆಯಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ನಿರ್ಣಾಯಕರಾಗಿದ್ದು, ನಂತರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಕುರುಬ, ಮುಸ್ಲಿಂ, ಉಪ್ಪಾರ ಸೇರಿ ಇನ್ನಿತರ ಸಮುದಾಯಗಳ ಮತದಾರರು ಫಲಿತಾಂಶದ ಮೇಲೆ ತಮ್ಮ ಪ್ರಭಾವ ಬೀರಲಿದ್ದಾರೆ.

ಈವರೆಗಿನ ಕ್ಷೇತ್ರದ ಶಾಸಕರ ವಿವರ:
1951 - ಅಪ್ಪಣ್ಣ ರಾಮಪ್ಪ ಪಂಚಗಾವಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1957 - ನಿಂಗಪ್ಪ ಅಪ್ಪಯ್ಯ ಕರಲಿಂಗನವರ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1962 - ನಿಂಗಪ್ಪ ಅಪ್ಪಯ್ಯ ಕರಲಿಂಗನವರ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1967 - ಎಲ್.ಎಸ್.ನಾಯಿಕ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1972 - ಜಿ.ಸಿ.ತಮ್ಮನ್ನ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1978 - ಲಕ್ಷ್ಮಣ ಸಿದ್ದಪ್ಪ ನೇಲ್ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1983 - ಮಲ್ಲಪ್ಪ ಲಕ್ಷ್ಮಣ ಮುತ್ತೆನ್ನವರ - ಜನತಾ ಪಕ್ಷ
1985 - ಮಲ್ಲಪ್ಪ ಲಕ್ಷ್ಮಣ ಮುತ್ತೆನ್ನವರ - ಜನತಾ ಪಕ್ಷ
1989 - ಶಂಕರ ಹಣಮಂತ ಕರನಿಂಗ - ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1994 - ಚಂದ್ರಶೇಖರ ಸದಾಶಿವ ನಾಯಿಕ - ಜನತಾ ದಳ
1999 - ರಮೇಶ ಜಾರಕಿಹೊಳಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
2004 - ರಮೇಶ ಜಾರಕಿಹೊಳಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
2008 - ರಮೇಶ ಜಾರಕಿಹೊಳಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
2013 - ರಮೇಶ ಜಾರಕಿಹೊಳಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
2018 - ರಮೇಶ ಜಾರಕಿಹೊಳಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
2019 - ರಮೇಶ ಜಾರಕಿಹೊಳಿ - ಬಿಜೆಪಿ (ಉಪ ಚುನಾವಣೆ)

ಇದನ್ನೂ ಓದಿ: ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ಪಾರುಪತ್ಯ: ಗತವೈಭವ ಮೆರೆಯುತ್ತಾ ಕಾಂಗ್ರೆಸ್​?

Last Updated : Apr 20, 2023, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.