ಹುಬ್ಬಳ್ಳಿ(ಧಾರವಾಡ): ''ನಾನು ಪಾಸಿಟಿವ್ ಆಗಿ ಯೋಚನೆ ಮಾಡ್ತೀನಿ. ಈಗಲೂ ಆಶಾಭಾವ ಹೊಂದಿದ್ದೇನೆ. ಇವತ್ತಿಗೆ ಎರಡು ದಿನ ಆಯ್ತು. ನಾಳೆ ಟಿಕೆಟ್ ಘೋಷಣೆ ಆಗದೇ ಹೋದ್ರೆ ನಾನು ಯೋಚನೆ ಮಾಡ್ತೀನಿ. ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇನೆ'' ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಮಲ ಅರಳಿಸಲು ಕೆ.ಆರ್.ಪೇಟೆಗೆ ಮತ್ತೊಮ್ಮೆ ಎಂಟ್ರಿ ಕೊಟ್ಟ ವಿಜಯೇಂದ್ರ
ತಮ್ಮ ನಿವಾಸದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ''ನಾಳೆ ಅಭಿಮಾನಿಗಳು ಬರ್ತಾರೆ, ಸಭೆ ಮಾಡ್ತೀನಿ. ವರಿಷ್ಠರನ್ನು ಭೇಟಿ ಮಾಡಿದಾಗ ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ. ನಾಳೆ 11 ಗಂಟೆವರೆಗೂ ನೋಡ್ತೀನಿ. ನಂತರ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಬೇರೆ ಜಿಲ್ಲೆಯಿಂದಲೂ ಜನ ಬರುತ್ತಿದ್ದಾರೆ. ಎಲ್ಲರಿಗೂ ಜಗದೀಶ್ ಶೆಟ್ಟರ್ಗೆ ಅಪಮಾನ ಆಗಿದೆ ಅಂತಿದಾರೆ'' ಎಂದು ಹೇಳಿದರು.
ಇದನ್ನೂ ಓದಿ: ಬಿದ್ದವರಿಗೆ ಡಿಸಿಎಂ ಹುದ್ದೆ ನೀಡಿದ್ರು, ಆದರೂ ಬಿಜೆಪಿಗೆ ನಿಷ್ಠೆ ತೋರಲಿಲ್ಲ: ರಮೇಶ್ ಜಾರಕಿಹೊಳಿ
ನನಗೆಲ್ಲ ಇದು ಮತದಾರರಿಗೂ ಮಾಡಿದ ಅಪಮಾನ-ಶೆಟ್ಟರ್: ''ನನಗಲ್ಲ ಇದು ಮತದಾರರಿಗೂ ಮಾಡಿದ ಅಪಮಾನ. ಇದು ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತ ಅಲ್ಲ. ರಾಜ್ಯದ ಎಲ್ಲ ಕಡೆಗಳಿಂದ ಕರೆ ಮಾಡ್ತಿದಾರೆ. ನಾನು ಕಾಡಿ ಬೇಡಿ ಟಿಕೆಟ್ ಕೇಳಲ್ಲ. ವರಿಷ್ಠರು ಫೋನ್ ಮಾಡಿದ್ದಕ್ಕೆ ಹೋಗಿದ್ದೆ. ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿರೋದಕ್ಕೆ ಹೋಗಿದ್ದು, ನಾಳೆವರೆಗೂ ವೇಟ್ ಮಾಡ್ತೀನಿ. ಪಾಲಿಕೆ ಸದಸ್ಯರು ಬೇಜರಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದು ತಿಳಿಸಿದರು.
ಇದನ್ನೂ ಓದಿ: 'ನಾಗಲೋಕಕ್ಕೆ ಗುಳ್ಳೆನರಿ ಹೋಲಿಕೆ ಸಾಧ್ಯವೇ?': ಶರತ್ ಬಚ್ಚೇಗೌಡಗೆ ಎಂಟಿಬಿ ಟಾಂಗ್
ಕೇಂದ್ರ ಸಚಿವರ ವಿರುದ್ಧ ಅಸಮಾಧಾನ: ''ಜೋಶಿ ಅವರು ರಾಷ್ಟ್ರೀಯ ಅಧ್ಯಕ್ಷರ ಮುಂದೆ ಹೇಳಿದ್ದಾರೆ. ಇಲ್ಲ ಅಂತಲ್ಲ, ಆದ್ರೆ ರಿಸಲ್ಟ್ ಏನು ಎಂದ ಶೆಟ್ಟರ್ ಪರೋಕ್ಷವಾಗಿ ಕೇಂದ್ರ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ. ನಾನೇ ಸ್ಪರ್ಧೆ ಮಾಡ್ತೀನಿ ಎಂದ ಅವರು, ಕಾಂಗ್ರೆಸ್ ಆಗಲಿ ಬೇರೆ ಯಾರೇ ಆಗಲಿ ನಮ್ಮ ಜೊತೆ ಸಂಪರ್ಕ ಮಾಡಿಲ್ಲ. ನಮ್ಮ ಕುಟುಂಬದವರು ಸ್ಪರ್ಧೆ ಮಾಡೋದಿಲ್ಲ ಎಂದು ಶೆಟ್ಟರ್ ಹೇಳಿದರು.
ಇದನ್ನೂ ಓದಿ: ಗುರುಮಠಕಲ್ ಬಿಜೆಪಿ ಅಭ್ಯರ್ಥಿ ಲಲಿತಾ ಅನಪೂರ ಟೆಂಪಲ್ ರನ್
ಬೆಂಗಳೂರಿನ 3 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು: 3ನೇ ಪಟ್ಟಿಯಲ್ಲಿ ಪ್ರಕಟವಾಗುತ್ತಾ ಹೆಸರು?