ಮಂಗಳೂರು:ಸುಮಾರು 120 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಎಂಆರ್ಪಿಎಲ್ ಗುತ್ತಿಗೆ ಕಾರ್ಮಿಕ ಮೃತಪಟ್ಟಿರುವ ಘಟನೆ ಮೇ 27ರಂದು ತಡರಾತ್ರಿ ನಡೆದಿದೆ. ಮಾಂಗ್ರಾ ಓರೋನ್ (38) ಮೃತಪಟ್ಟವರು. ಇವರು ಎಂಆರ್ಪಿಎಲ್ನಲ್ಲಿ ಸುಮಾರು 10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಹೈಡ್ರೋ ಕ್ರಾಕರ್ ಪ್ಲಾಂಟ್ನಲ್ಲಿ ನೀರು ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸರಿಪಡಿಸುತ್ತಿದ್ದಾಗ ಹರಿವು ದಿಢೀರ್ ಹೆಚ್ಚಾಗಿ ಮಾಂಗ್ರಾ ಅವರು ಮೇಲಿಂದ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಸಿಬ್ಬಂದಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.