ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇಂದು ನೋಟಿಸ್ ನೀಡಿದ್ದಾರೆ.
ಅ.3ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಶಾಂತಿನಗರದಲ್ಲಿರುವ ನಿರ್ದೇಶನಾಲಯದ ಕಚೇರಿಗೆ ಮೂಡಾ ಅಕ್ರಮಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳ ಸಮೇತ ಬರುವಂತೆ ಸೂಚಿಸಲಾಗಿದೆ.
ಕಳೆದ ಶನಿವಾರವಷ್ಟೇ ಸ್ನೇಹಮಯಿ ಕೃಷ್ಣ ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂಮಿಯ ಮೂಲ ಮಾಲೀಕ ದೇವರಾಜು ವಿರುದ್ಧ ಇ.ಡಿ.ಗೆ ದೂರು ನೀಡಿದ್ದರು. ಸೋಮವಾರ ಇ.ಡಿ. ಇಸಿಐಆರ್ ದಾಖಲಿಸಿಕೊಂಡಿತ್ತು.
ಇದನ್ನೂ ಓದಿ: ಸಿಎಂ ಪತ್ನಿ ಹೆಸರಿನ 14 ನಿವೇಶನಗಳ ಕ್ರಯಪತ್ರ ರದ್ದತಿಗೆ ಮುಡಾ ಆಯುಕ್ತರಿಂದ ಆದೇಶ - Plot Deed Cancel