IPL Mega Auction: ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಈಗಿನಿಂದಲೇ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಆಟಗಾರರ ಮೆಗಾ ಹರಾಜು. ಈ ಬಾರಿ ಬಿಸಿಸಿಐ ಹೊಸ ಧಾರಣ ನೀತಿ ಜಾರಿಗೊಳಿಸಿರುವ ಕಾರಣ ಬಹುತೇಕ ತಂಡಗಳು ಕೆಲವು ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಹರಾಜಿಗೆ ಬಿಡುಗಡೆ ಮಾಡಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಆಟಗಾರರು ಹರಾಜಿನಲ್ಲಿದ್ದಾರೆ. ಅದರಲ್ಲೂ 5 ವೇಗದ ಬೌಲರ್ಗಳಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹಾಗಾದರೆ, ಆ ಡೇಂಜರಸ್ ಬೌಲರ್‌ಗಳು ಯಾರು ಮತ್ತು ಅವರ ದಾಖಲೆಗಳೇನು ನೋಡೋಣ.
6. ಅರ್ಷದೀಪ್ ಸಿಂಗ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಸದ್ಯ ಮೂರು ಪಂದ್ಯಗಳನ್ನು ಆಡಿರುವ ಇವರು 5 ವಿಕೆಟ್ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಟಿ20Iನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಆಗಿ ಜಸ್ಪ್ರೀತ್ ಬುಮ್ರಾ (Jaspreet Bumrah), ಭುವನೇಶ್ವರ್ ಕುಮಾರ್ (Bhuvaneshwar Kumar) ಅವರನ್ನು ಹಿಂದಿಕ್ಕಿದ್ದಾರೆ. ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿರುವ ಅರ್ಷದೀಪ್ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ.
ಐಪಿಎಲ್ ದಾಖಲೆ: ಈವರೆಗೂ 65 ಪಂದ್ಯಗಳನ್ನಾಡಿರುವ ಅರ್ಷದೀಪ್ 76 ವಿಕೆಟ್ ಪಡೆದಿದ್ದಾರೆ. 32ಕ್ಕೆ5 ಇವರ ಅತ್ಯುತ್ತಮ ಪ್ರದರ್ಶನ.
5. ಟ್ರೆಂಟ್ ಬೌಲ್ಟ್: ನ್ಯೂಜಿಲೆಂಡ್ನ ವೇಗದ ಬೌಲರ್ ಟ್ರೆಂಟ್ ಬೌಲ್ಟ್ (Trent Boult) ಟಿ20 ಸ್ವರೂಪದಲ್ಲಿ ಬೆಸ್ಟ್ ಎನಿಸಿಕೊಂಡಿದ್ದಾರೆ. 2025ರ ಮೆಗಾ ಹರಾಜಿನಲ್ಲಿ ಇವರೂ ಇದ್ದಾರೆ. ಬೌಲ್ಟ್ ಇದುವರೆಗೂ 103 ಪಂದ್ಯಗಳನ್ನಾಡಿದ್ದು 121 ವಿಕೆಟ್ ಉರುಳಿಸಿದ್ದಾರೆ. ಪಂದ್ಯವೊಂದರಲ್ಲಿ 18 ರನ್ಗೆ 4 ವಿಕೆಟ್ ಪಡೆದಿದ್ದು ಐಪಿಎಲ್ನ ಬೆಸ್ಟ್ ಇನ್ನಿಂಗ್ಸ್ ಆಗಿದೆ.
4. ಜೋಫ್ರಾ ಅರ್ಚರ್: ಇಂಗ್ಲೆಂಡ್ನ ಸ್ಟಾರ್ ಬೌಲರ್ ಜೋಫ್ರಾ ಅರ್ಚರ್ (Jofra Archer) ಐಪಿಎಲ್‌ನಲ್ಲಿ ಕಡಿಮೆ ಪಂದ್ಯಗಳನ್ನಾಡಿದ್ದರೂ ಕ್ರೇಜ್ ಹೆಚ್ಚಿದೆ. ಇವರು ಒಟ್ಟು 40 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 48 ವಿಕೆಟ್ ಪಡೆದಿದ್ದಾರೆ. 15 ರನ್ಗಳಿಗೆ 3 ವಿಕೆಟ್ ಪಡೆದಿರುವುದು ಇವರ ಅತ್ಯುತ್ತಮ ಸ್ಪೆಲ್.
3. ಮಿಚೆಲ್ ಸ್ಟಾರ್ಕ್: ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) 2024ರ ಐಪಿಎಲ್ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಅವರು 24.75 ಕೋಟಿ ರೂ.ಗೆ ಕೆಕೆಆರ್ ತಂಡದ ಪಾಲಾಗಿದ್ದರು. ಇದೀಗ ಕೆಕೆಆರ್ ತಂಡದಿಂದ ಅವರನ್ನು ಕೈಬಿಡಲಾಗಿದ್ದು, ಹರಾಜಿನಲ್ಲಿದ್ದಾರೆ. ಒಟ್ಟು 40 ಐಪಿಎಲ್ ಪಂದ್ಯಗಳನ್ನಾಡಿರುವ ಸ್ಟಾರ್ಕ್ 51 ವಿಕೆಟ್ ಪಡೆದಿದ್ದಾರೆ. 15ಕ್ಕೆ4 ವಿಕೆಟ್ ಇವರ ಬೆಸ್ಟ್ ಬೌಲಿಂಗ್.
2. ಕಗಿಸೋ ರಬಾಡ: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೋ ರಬಾಡ ಐಪಿಎಲ್‌ನಲ್ಲಿ 117 ವಿಕೆಟ್ ಪಡೆದು ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ. ಇವರೂ ಕೂಡಾ ಮೆಗಾ ಹರಾಜಿನಲ್ಲಿದ್ದಾರೆ
1. ಮೊಹ್ಮದ್ ಶಮಿ: ಟೀಂ ಇಂಡಿಯಾದ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ 2023ರ ಐಪಿಎಲ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿರುವ ಕಾರಣ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ.
ಮೂವರ ಮೇಲೆ RCB ಕಣ್ಣು: ಹರಾಜಿನಲ್ಲಿರುವ 6 ಆಟಗಾರರ ಪೈಕಿ ಆರ್ಸಿಬಿ ಜೋಫ್ರಾ ಅರ್ಚರ್, ಕಗಿಸೋ ರಬಾಡ ಅವರ ಮೇಲೆ ಕಣ್ಣಿಟ್ಟಿದೆ. ಈ ಇಬ್ಬರನ್ನು ತಂಡಕ್ಕೆ ಪಡೆದು ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಪ್ಲಾನ್ ಮಾಡಿಕೊಂಡಿದೆ.
ಇದನ್ನೂ ಓದಿ: 'ನನ್ನ ಮಗನ 10 ವರ್ಷದ ಕ್ರಿಕೆಟ್ ಕೆರಿಯರ್ ಈ ನಾಲ್ವರಿಂದ ಹಾಳಾಯ್ತು': ಸಂಜು ಸ್ಯಾಮ್ಸನ್ ತಂದೆಯ ಆರೋಪ