ಬೆಂಗಳೂರು: ಅಖಿಲ ಭಾರತ ಮಟ್ಟದಲ್ಲಿನ ವೈದ್ಯಕೀಯ ಸೀಟು ಉಳಿಸಿಕೊಳ್ಳಲು ಇಚ್ಛಿಸಿರುವವರು ಸೇರಿದಂತೆ ಇತರ ಒಟ್ಟು 206 ಮಂದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಮಗೆ ಹಂಚಿಕೆಯಾಗಿದ್ದ ಸೀಟುಗಳನ್ನು ಶುಕ್ರವಾರ ರದ್ದು ಮಾಡಿಕೊಂಡಿದ್ದಾರೆ.
ಇಷ್ಟೂ ಮಂದಿಯ ಸೀಟುಗಳನ್ನು ಮೆರಿಟ್ ಮೇಲೆ ಇತರ ಅರ್ಹರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್ನಲ್ಲಿ ಅತಿ ಹೆಚ್ಚು ಅಂದರೆ 107 ಮಂದಿ ತಮ್ಮ ಸೀಟುಗಳನ್ನು ರದ್ದುಪಡಿಸಿಕೊಂಡು, ಕೆಇಎಗೆ ವಾಪಸ್ ಮಾಡಿದ್ದಾರೆ. ಹಾಗೆಯೇ, ದಂತ ವೈದ್ಯಕೀಯದಲ್ಲಿ 20, ಆಯುಷ್ ಕೋರ್ಸ್ನಲ್ಲಿ 33, ಎಂಜಿನಿಯರಿಂಗ್ನಲ್ಲಿ 5 ಮತ್ತು ನರ್ಸಿಂಗ್ನಲ್ಲಿ 4 ಮಂದಿ ಸೀಟು ರದ್ದು ಮಾಡಿಕೊಂಡಿದ್ದಾರೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ವಿವರಿಸಿದ್ದಾರೆ.
ಎರಡನೇ ಸುತ್ತಿನ ಸೀಟು ಹಂಚಿಕೆಗೆ 'ರೀ ರನ್' ಮಾಡಲು ಆರಂಭಿಸಿದ್ದು, ಅದರ ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ