ಕರ್ನಾಟಕ

karnataka

ETV Bharat / snippets

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್​ ಬೆದರಿಕೆ ಇ - ಮೇಲ್: ಪ್ರಕರಣ ದಾಖಲು

Hubballi Airport
ಹುಬ್ಬಳ್ಳಿ ವಿಮಾನ ನಿಲ್ದಾಣ (ETV Bharat)

By ETV Bharat Karnataka Team

Published : Oct 25, 2024, 12:23 PM IST

Updated : Oct 25, 2024, 12:30 PM IST

ಹುಬ್ಬಳ್ಳಿ:ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅ. 20 ರಂದು ರಾತ್ರಿ 9.33ರ ಸುಮಾರಿಗೆ ಹುಸಿ ಬಾಂಬ್​ ಬೆದರಿಕೆ ಇ - ಮೇಲ್ ಬಂದಿದೆ. ನಿಲ್ದಾಣದ ನಿರ್ದೇಶಕ ರೂಪೇಶ್​ ಕುಮಾರ್​ ಅವರು ಇದೀಗ ನ್ಯಾಯಾಲಯದ ಅನುಮತಿ ಪಡೆದು ಗೋಕುಲ್​ ರೋಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅನಾಮಧೇಯ ಇ - ಮೇಲ್‌ನಲ್ಲಿ "ಪೋರ್ಟ್ಸ್ ಇನ್ ಕರ್ನಾಟಕ ಟು ಎಕ್ಸ್​ಪೀರಿಯನ್ಸ್ ಇಂಪ್ರೊವೈಲ್ಡ್ ಇಡಿಆರ್‌ಇನ್ ಹಾವರ್ಸ್‌, ಇವಾಕ್ಯೂಯೇಟ್ ಆಲ್ ಬೈ 4 ಎಎಂ" ಎಂಬ ಭಯವುಂಟು ಮಾಡುವ ಸಂದೇಶವಿತ್ತು. "ವಿಮಾನ ನಿಲ್ದಾಣ ಸ್ಫೋಟಗೊಳ್ಳಲಿದೆ. ಮುಂಜಾನೆ 4 ಗಂಟೆಯೊಳಗೆ ಖಾಲಿ ಮಾಡಿ" ಎಂಬ ಸಂದೇಶ ಕಳುಹಿಸಿದ್ದರು. ಕೂಡಲೇ ಸಿಎಎಸ್‌ಒ, ಐಬಿ, ಬಿಡಿಡಿಎಸ್ ಮತ್ತು ಏರ್‌ಪೋರ್ಟ್ ಸ್ಪೆಷಲ್ ಸೆಕ್ಯೂರಿಟಿ ಕಮಿಟಿ ಮೀಟಿಂಗ್‌ನಲ್ಲಿ ವಿಷಯ ತಿಳಿಸಲಾಗಿತ್ತು. ತಕ್ಷಣವೇ ತಂಡ ಕಾರ್ಯಪ್ರವೃತ್ತವಾಗಿತ್ತು.

ಇದನ್ನೂ ಓದಿ:ಮತ್ತೆ 70 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ: 11 ದಿನದಲ್ಲಿ 250 ವಿಮಾನಗಳಿಗೆ 'ಹುಸಿ' ಕಾಟ

Last Updated : Oct 25, 2024, 12:30 PM IST

ABOUT THE AUTHOR

...view details