ಕರ್ನಾಟಕ

karnataka

By ETV Bharat Karnataka Team

Published : 7 hours ago

ETV Bharat / snippets

ಅಕ್ಟೋಬರ್ 3ರಿಂದ ಹೈಕೋರ್ಟ್​ಗೆ ದಸರಾ ರಜೆ

DASARA HOLIDAYS FOR COURT
ಸಂಗ್ರಹ ಚಿತ್ರ (ETV Bharat)

ಬೆಂಗಳೂರರು: ರಾಜ್ಯ ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಅಕ್ಟೋಬರ್‌ 3ರಿಂದ 10ರವರೆಗೆ ದಸರಾ ರಜೆ ಇರಲಿದ್ದು, ಅಕ್ಟೋಬರ್‌ 14ರಂದು ಮತ್ತೆ ನ್ಯಾಯಾಲಯದ ಕಲಾಪಗಳು ಪುನರಾರಂಭವಾಗಲಿವೆ.

ಅಕ್ಟೋಬರ್‌ 4 ಮತ್ತು 9ರಂದು ರಜಾಕಾಲೀನ ಪೀಠಗಳು ಕರ್ತವ್ಯ ನಿರ್ವಹಿಸಲಿವೆ. ಈ ವೇಳೆ ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ರಜಾಕಾಲೀನ ಪೀಠಗಳು ವಿಚಾರಣೆ ನಡೆಸಲಿವೆ ಎಂದು ನ್ಯಾಯಾಂಗ ರಿಜಿಸ್ಟ್ರಾರ್‌ ಇ.ರಾಜೀವ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೋರ್ಟ್​ ಕಲಾಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಸ್ಥಗಿತಕ್ಕೆ ಹೈಕೋರ್ಟ್‌ಗೆ ವಕೀಲರ ಸಂಘ ಮನವಿ - Advocates Appeals To High Court

ABOUT THE AUTHOR

...view details