ಕರ್ನಾಟಕ

karnataka

ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ಹಿರಿಯ ಸಹೋದರಿ, ಕಿರಿಯ ಸಹೋದರ

By ETV Bharat Karnataka Team

Published : Aug 2, 2024, 12:56 PM IST

sister brother suicide  Chikkaballapur  Sidlaghatta
ಘಟನಾ ಸ್ಥಳ (ETV Bharat)

ಶಿಡ್ಲಘಟ್ಟ:ಒಂದೇ ಕುಟುಂಬದ ಅಕ್ಕ ಮತ್ತು ತಮ್ಮ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಡ್ಲಘಟ್ಟದಲ್ಲಿ ನಡೆದಿದೆ.

ಇಂದು (ಶುಕ್ರವಾರ) ಬೆಳಗ್ಗೆ ರೈಲ್ವೆ ಹಳಿಗಳ ಮೇಲೆ ಎರಡು ಮೃತ ದೇಹಗಳು ಪತ್ತೆಯಾಗಿದೆ. ಕೆಲಸ ಬಂದಿದ್ದ ರೈಲ್ವೆ ಸಿಬ್ಬಂದಿ ಹಾಗೂ ವಾಯುವಿಹಾರಕ್ಕೆ ಬಂದಿದ್ದ ಸಾರ್ವಜನಿಕರು ಎರಡು ಮೃತ ದೇಹಗಳನ್ನು ಗಮನಿಸಿದ್ದಾರೆ. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಶಿಡ್ಲಘಟ್ಟ ಪ್ರೇಮನಗರದ ನಿವಾಸಿಗಳಾದ ತಮ್ಮ ಪ್ರಭು (30) ಅಕ್ಕ ಶಿಲ್ಪ (32 ವರ್ಷ) ಆತ್ಮಹತ್ಯೆಗೆ ಶರಣಾದವರು ಎಂಬುದು ತಿಳಿದು ಬಂದಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಬೈಕ್​ಗೆ ಲಾರಿ ಡಿಕ್ಕಿ: ಗೆಳೆಯನ ಹುಟ್ಟುಹಬ್ಬಕ್ಕೆ ಬರುತ್ತಿದ್ದ ಇಬ್ಬರು ಸಾವು

ABOUT THE AUTHOR

...view details