ರಾಯಚೂರು: ತಾಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಹಳೆ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಶನಿವಾರ ರಾತ್ರಿ ನಡೆದ ಈ ಘಟನೆಯಲ್ಲಿ ಭೀಮೇಶ್ ನಾಯಕ್ (38) ಮೃತ ವ್ಯಕ್ತಿ. ರಾಮಲಮ್ಮ, ಅಲಾರಿ ನಾಯಕ್, ದೂಳಯ್ಯ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದು ಗುಂಪಿನ ಯರ್ರಣ್ಣ, ದೊಳ್ಳಯ್ಯ, ದೇವಪ್ಪ, ಮಾದಗಾನು, ಗೊರಿಯಾನು, ವೀರೇಶ, ತಾಯಪ್ಪ, ಕೃಷ್ಣಗಾರು ಎಂಬುವರು ಕಟ್ಟಿಗೆ, ಕುಡುಗೋಲು, ಭರ್ಚಿ, ಕೊಡಲಿಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಎರಡು ಗುಂಪಿನ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಜಗಳ ನಿನ್ನೆ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಡಪನೂರು ಠಾಣೆಯ ಪೊಲೀಸರು 22 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಾವೇರಿ: ಇಬ್ಬರು ಸೈಬರ್ ಖದೀಮರ ಬಂಧನ