ETV Bharat / state

ಡಿ.ಕೆ.ಸುರೇಶ್ ಸೋಲಿಸಿದ ಕೊಂಡಿಗಳು ಒಂದೊಂದೇ ಕಳಚಿಕೊಂಡಿವೆ: ಡಿಕೆಶಿ - DCM DK SHIVAKUMAR

ಡಿ.ಕೆ.ಸುರೇಶ್ ಸೋಲಿಸಿದ ಕೊಂಡಿಗಳು ಒಂದೊಂದೇ ಕಳಚಿಕೊಂಡವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಡಿಸಿಎಂ ಡಿಕೆಶಿ DK Suresh Channapatna bypoll
ಡಿಸಿಎಂ ಡಿಕೆಶಿ (IANS)
author img

By ETV Bharat Karnataka Team

Published : Nov 25, 2024, 1:52 PM IST

ಬೆಂಗಳೂರು: ಡಿ.ಕೆ.ಸುರೇಶ್ ಸೋಲಿಸಿದ ಕೊಂಡಿಗಳು ಒಂದೊಂದೇ ಕಳಚಿಕೊಂಡವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ವಿಕಾಸಸೌಧದಲ್ಲಿಂದು ಮಾತನಾಡಿದ ಅವರು, ಗೆದ್ದ ಕೂಡಲೇ ಒಕ್ಕಲಿಗ ನಾಯಕನಾಗಲ್ಲ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅಶೋಕಣ್ಣ ನನಗಿಂತ ದೊಡ್ಡವನ ಚಿಕ್ಕವನ‌ ಗೊತ್ತಿಲ್ಲ. ಹೌದು, ನನ್ನ ತಮ್ಮ ಸೋತಿದ್ದಾನೆ. ಸೋಲಿಸಿದ ಕೊಂಡಿಗಳು ಒಂದೊಂದೇ ಕಳಚಿಕೊಂಡವಲ್ಲ‌. ರಾಜರಾಜೇಶ್ವರಿ ನಗರದಲ್ಲಿ ಏನಾಯ್ತು.?. ಚನ್ನಪಟ್ಟಣದಲ್ಲಿ ಏನಾಯ್ತು? ಕನಕಪುರಕ್ಕೆ ಬಂದು ನಿಂತ್ಯಲ್ಲ ಏನಾಯ್ತು? ನನಗೆ ಡಿಚ್ಚಿ ಹೊಡೀತೀನಿ ಅಂತ ಬಂದ್ಯಲ್ಲ ಡೆಪಾಸಿಟ್ ಬಂತಾ? ಎಂದು ಲೇವಡಿ ಮಾಡಿದರು.

IAS ಅಧಿಕಾರಿ ಮುಡಾ ಫೈಲ್ ಕೊಂಡೊಯ್ದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆ ವಿಚಾರ ನನಗೆ ಗೊತ್ತಿಲ್ಲ‌. ಅದು ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ತೆಗೆದುಕೊಂಡು ಹೋಗ್ತಾರೆ?. ಸರ್ಕಾರಿ ದಾಖಲೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ?. ಲೋಕಾಯುಕ್ತ ವರದಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಇದೆಲ್ಲಾ ಕಾಲ್ಪನಿಕ ಆರೋಪ: ಇದೇ ವಿಚಾರವಾಗಿ ಪ್ರತಿಯಿಸಿದ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ಯಾವುದೇ ಖಚಿತ‌ ಮಾಹಿತಿಗಳಿಲ್ಲ. ಇದೆಲ್ಲಾ ಕಾಲ್ಪನಿಕ ಆರೋಪ. ವರದಿ ಕೊಂಡೊಯ್ದಿದ್ದಕ್ಕೆ ದಾಖಲೆ ಏನಿದೆ?. ಕರ್ನಾಟಕ ರಾಜಕೀಯವೇ ಹಾಳಾಗ್ತಿದೆ. ಜೆಡಿಎಸ್ ಬಿಜೆಪಿಯವರು ಆ ರೀತಿ ಮಾಡಿದ್ದಾರೆ. ಮೂರು ಕ್ಷೇತ್ರದಲ್ಲಿ‌ ಅವರಿಗೆ ದೊಡ್ಡ ಸೋಲಾಗಿದೆ. ಇದೆಲ್ಲಾ ಆದ್ರೂ ಅವರು ಬುದ್ಧಿ ಕಲಿತಿಲ್ಲ ಎಂದು ಕಿಡಿ ಕಾರಿದರು.

ದಾಖಲೆ ಎಲ್ಲಿಂದ ಸೋರಿಕೆಯಾಗಿದೆ. ಇದನ್ನು ಅವರು ಹೇಳಬೇಕಲ್ಲ. ಎಲ್ಲಾ ಪ್ರಕ್ರಿಯೆ ಕಾನೂನಾತ್ಮಕವಾಗಿ ನಡೆದಿದೆ. ಪಾವಿತ್ರ್ಯತೆಯನ್ನು ಎಲ್ಲರೂ ಕಾಪಾಡಬೇಕು‌. ಸ್ನೇಹಮಯಿ ಕೃಷ್ಣ ದೂರು ಕೊಟ್ಟಿದ್ದಾರೆ. ಕಾನೂನು ಪಾಲನೆ ಮಾಡಲಿ. ಅದು ಬಿಟ್ಟು ಪ್ರಚಾರಕ್ಕಾಗಿ ಮಾಡುವುದು ಬೇಡ. ಅವರ ಪಕ್ಷದಲ್ಲೇ ಒಡಕು ಮೂಡಿದೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪೊನ್ನಣ್ಣ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಅವಧಿಯಲ್ಲೇ ರೈತರಿಗೆ ಹೆಚ್ಚು ವಕ್ಫ್ ನೋಟಿಸ್ ಜಾರಿ: ಸಚಿವ ಜಿ.ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.