ETV Bharat / technology

ಸ್ವೀಡನ್‌ನಿಂದ ಫಿನ್‌ಲ್ಯಾಂಡ್‌ಗೆ ಪ್ರಯಾಣಿಸಿ ವಿಶ್ವದಾಖಲೆ ಬರೆದ ಎಲೆಕ್ಟ್ರಿಕ್ ಬೋಟ್​! - High Speed Electric Boat

Electric Speedboat: ಹೈಡ್ರೊಫಾಯಿಲ್ ಎಲೆಕ್ಟ್ರಿಕ್ ತಂತ್ರಜ್ಞಾನ ಚಾಲಿತ ಕ್ಯಾಂಡೆಲಾ ಸಿ-8 ಬೋಟ್ ಕಡಿಮೆ ವಿದ್ಯುತ್ ಬಳಸಿ ಅತಿ ಹೆಚ್ಚು ದೂರ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿತು. ಈ ಬೋಟ್​ನ ವಿಶೇಷತೆಗಳ ಕುರಿತು ತಿಳಿಯೋಣ.

CANDELA C 8 ELECTRIC SPEEDBOAT  CHEAPEST BOAT RIDE  CANDELA C 8 HYDROFOIL ELECTRIC BOAT
ವಿಶ್ವದಾಖಲೆ ಬರೆದ ಎಲೆಕ್ಟ್ರಿಕ್ ಬೋಟ್ (ಫೋಟೋ: Candela)
author img

By ETV Bharat Tech Team

Published : Sep 17, 2024, 8:16 AM IST

Electric Speedboat: ಕ್ಯಾಂಡೆಲಾ ತನ್ನ ಹೈಟೆಕ್ ಹೈಡ್ರೋಫಾಯಿಲ್ ಎಲೆಕ್ಟ್ರಿಕ್ ಬೋಟ್ 'ಕ್ಯಾಂಡೆಲಾ ಸಿ-8'ನೊಂದಿಗೆ ಹೊಸ ವಿಶ್ವದಾಖಲೆ ಸ್ಥಾಪಿಸಿದೆ. ಈ ಬೋಟ್​ DC ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಪ್ರೊಪಲ್ಷನ್ ದಕ್ಷತೆ ಪ್ರದರ್ಶಿಸುವ ವಿನ್ಯಾಸ ನೀಡಲಾಗಿದೆ.

ಎಲೆಕ್ಟ್ರಿಕ್ ಬೋಟ್ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ನಡುವೆ ವೇಗವಾಗಿ ಸಂಚರಿಸಿ ದಾಖಲೆ ಬರೆದಿದೆ. ವಿದ್ಯುತ್ ಬೋಟ್‌ವೊಂದು ಬಾಲ್ಟಿಕ್ ಸಮುದ್ರ ದಾಟಿದ್ದು ಇದೇ ಮೊದಲು. ಒಂದು ಮೀಟರ್ ಎತ್ತರದ ಅಲೆಗಳ ಮೇಲೂ ಇದು ಸಾಗಬಲ್ಲದು.

ಹೈಡ್ರೋಫಾಯಿಲ್ ತಂತ್ರಜ್ಞಾನ: ಕ್ಯಾಂಡೆಲಾ C-8 ರನ್ನಿಂಗ್​ ವೇಳೆ ಬೋಟ್​ ಅನ್ನು ನೀರಿನಿಂದ ಮೇಲಕ್ಕೆತ್ತಲು ಕಂಪ್ಯೂಟರ್-ಕಂಟ್ರೋಲ್ಡ್​ ಹೈಡ್ರೋಫಾಯಿಲ್‌ಗಳನ್ನು ಬಳಸಲಾಗುತ್ತದೆ. ಹೀಗಾಗಿ ಕ್ಯಾಂಡೆಲಾ C-8 ಇತರ ದೋಣಿಗಳಿಗಿಂತ ಕಡಿಮೆ ಅಂದರೆ, ಶೇ.80ಕ್ಕಿಂತ ಕಡಿಮೆ ವಿದ್ಯುತ್ ಬಳಸುತ್ತದೆ. ಈ ಎಲೆಕ್ಟ್ರಿಕ್ ಬೋಟ್​ ಸ್ವೀಡನ್‌ನಿಂದ ಫಿನ್‌ಲ್ಯಾಂಡ್‌ಗೆ 150 ನಾಟಿಕಲ್ ಮೈಲು (278 ಕಿಮೀ) ದೂರ ಕ್ರಮಿಸಿದೆ.

ಸಂತೋಷ ವ್ಯಕ್ತಪಡಿಸಿದ ಕ್ಯಾಂಡೆಲಾ ಸಂಸ್ಥಾಪಕ: ಇಂದು ಎಲೆಕ್ಟ್ರಿಕ್ ಕ್ರೂಸ್‌ಗಳಿಂದ ಇದು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ಬದಲಾಯಿಸುವಲ್ಲಿ ನಮ್ಮ ಮಿಷನ್ ಯಶಸ್ವಿಯಾಗಿದೆ ಎಂದು ಕ್ಯಾಂಡೆಲಾದ ಸಿಇಒ ಮತ್ತು ಸಂಸ್ಥಾಪಕ ಗುಸ್ತಾವ್ ಹ್ಯಾಸೆಲ್‌ಸ್ಕಾಗ್ ಹರ್ಷ ವ್ಯಕ್ತಪಡಿಸಿದರು. ತಮ್ಮ ಹೈಡ್ರೋಫಾಯಿಲ್ ತಂತ್ರಜ್ಞಾನದಿಂದ ಚಾಲಿತ ಎಲೆಕ್ಟ್ರಿಕ್ ಬೋಟ್ ಡೀಸೆಲ್‌ನಂತಹ ಶಕ್ತಿಯ ನೆರವಿನಿಂದ ಚಾಲಿತ ದೋಣಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಾಧನೆಯನ್ನು ಇತ್ತೀಚಿನ C-8 ಕ್ಯಾಂಡೆಲಾ ಬೋಟ್ 69 kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಸಾಧಿಸಿದೆ ಎಂದು ಅವರು ಹೇಳಿದರು.

ಪ್ರಯಾಣ ವೆಚ್ಚ ಕಡಿತ: ಎಲೆಕ್ಟ್ರಿಕ್ ಬೋಟ್‌ನ ವೆಚ್ಚ ಕಡಿಮೆ ಎಂದು ಪ್ರವಾಸ ಸಾಬೀತುಪಡಿಸಿದೆ. ಪ್ರವಾಸದ ಸಮಯದಲ್ಲಿ ದೋಣಿ ಎಷ್ಟು ದೂರ ಹೋಗುತ್ತದೆ ಎಂಬುದರ ಬಗ್ಗೆ ನಾನು ಚಿಂತಿತನಾಗಿದ್ದೆ. ಆದರೆ ನಿಗದಿತ ದೂರ ತಲುಪಲು ನಾವು ಬೋಟ್ ಅನ್ನು ಮೂರು ಬಾರಿ ಮಾತ್ರ ಚಾರ್ಜ್ ಮಾಡಿದ್ದೇವೆ. ಇದು ಇಂಧನವಾಗಿದ್ದರೆ, ಅದನ್ನು 6 ಬಾರಿ ತುಂಬಿಸಬೇಕಾಗಿತ್ತು ಎಂದು ಅದರ ಸಂಸ್ಥಾಪಕ ಗುಸ್ತಾವ್ ತಿಳಿಸಿದ್ದಾರೆ.

ಕೆಂಪವರ್ ಚಾರ್ಜಿಂಗ್ ತಂತ್ರಜ್ಞಾನ: ಅಸ್ತಿತ್ವದಲ್ಲಿರುವ ಚಾರ್ಜಿಂಗ್ ವ್ಯವಸ್ಥೆಗಳನ್ನು ಬಳಸಿಕೊಂಡು ಸಂಪೂರ್ಣ ಪ್ರಯಾಣವನ್ನು ಸಾಧಿಸಲಾಗಿದೆ. ಕೆಂಪವರ್ ಸಹಯೋಗದಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಹಡಗುಕಟ್ಟೆಗಳಲ್ಲಿ 40 kW Kempower ಮೊಬೈಲ್ ಚಾರ್ಜರ್‌ಗಳೊಂದಿಗೆ ವಿಹಾರ ನೌಕೆಯು ಸೂಪರ್-ಚಾರ್ಜ್ ಆಗಿದೆ.

ಈ ಕುರಿತು ಮಾತನಾಡಿದ ಕೆಂಪವರ್‌ ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಆಂಟಿ ವೌಲಾ, ಶುದ್ಧ ಜಲಮಾರ್ಗವನ್ನು ರಚಿಸಲು ವಿದ್ಯುತ್ ದೋಣಿಗಳನ್ನು ಬಲಪಡಿಸಬೇಕು. ಈ ಉಪಕ್ರಮವನ್ನು ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ ಎಂದರು. ಕ್ಯಾಂಡೆಲಾ ತನ್ನ ನ್ಯೂಸ್‌ರೂಮ್ ಪೇಜ್​ನಲ್ಲಿ ಮೇಲಿನ ಮಾಹಿತಿಯನ್ನು ಪ್ರಕಟಿಸಿದೆ.

ಇದನ್ನೂ ಓದಿ: ಬೆಂಗಳೂರು ಮೂಲದ ಕಂಪನಿಯಿಂದ ಭಾರತದ ಮೊದಲ ಆಲ್ ಟೆರೆನ್ ವಾಹನ ಬಿಡುಗಡೆ - All Terrain Vehicle

ETV Bharat Logo

Copyright © 2024 Ushodaya Enterprises Pvt. Ltd., All Rights Reserved.