ಬೆಂಗಳೂರು :ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ ಯೋಜನೆ ಜುಲೈ 31ರಂದು ಕೊನೆಗೊಳ್ಳಲಿದ್ದು, ಈ ಸಂಬಂಧ ನಾಳೆ 4ನೇ ಶನಿವಾರವೂ ಕಂದಾಯ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
4ನೇ ಶನಿವಾರ ಸಾರ್ವಜನಿಕ ರಜಾ ದಿನವಾಗಿದ್ದು, ವಲಯ ಜಂಟಿ ಆಯುಕ್ತರ ಕಚೇರಿಗಳು ಸ್ಥಾಪಿಸಿರುವ ಹೆಲ್ಪ್ ಡೆಸ್ಕ್‌ಗಳು, ಹಾಗೂ ಎಲ್ಲಾ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿನ ಹೆಲ್ಪ್ ಡೆಸ್ಕ್‌ಗಳು ಕಾರ್ಯನಿರ್ವಹಿಸಲಿವೆ ಎಂದಿದೆ.