ತುಮಕೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಜನನಿಬಿಡ ಪ್ರದೇಶದಲ್ಲಿ ಲಾಂಗ್ ಹಿಡಿದು ಅಂಗಡಿವೊಂದಕ್ಕೆ ನುಗ್ಗಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಸದಾಶಿವ ನಗರದ ಹುಸೆನ್ ಹಲ್ಲೆ ನಡೆಸಿದ ಯುವಕ. ಇಸ್ಮಾಯಿಲ್ ನಗರದ ಆಯುಬ್ ಹಲ್ಲೆಗೊಳಗಾದ ವ್ಯಕ್ತಿ.
ನಗರದ ಮೇಳಕೋಟೆ ಮುಖ್ಯರಸ್ತೆಯಲ್ಲಿರುವ ಮುಬಾರಕ್ ಸಮೋಸಾ ಸೆಂಟರ್ನಲ್ಲಿ ಹಲ್ಲೆ ನಡೆದಿದೆ. ಹಲ್ಲೆ ಮಾಡಿರುವ ಘಟನೆ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಜನಿಬಿಡ ಪ್ರದೇಶದಲ್ಲಿ ಲಾಂಗ್ ಹಿಡಿದು ಓಡಾಡಿದ್ದರಿಂದ ಘಟನೆ ಸ್ಥಳೀಯನ್ನು ಬೆಚ್ಚಿ ಬೀಳಿಸಿದೆ. ಹಲ್ಲೆಗೊಳಗಾದ ಯುವಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಾವೇರಿ ವಕ್ಫ್ ಗಲಾಟೆ ಪ್ರಕರಣ: 32 ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು