ETV Bharat / international

'ನಮಸ್ತೆ ಆಸ್ಟ್ರೇಲಿಯಾ!': ದ್ವಿರಾಷ್ಟ್ರ ಪ್ರವಾಸ ಪ್ರಯುಕ್ತ ಬ್ರಿಸ್ಬೇನ್​ಗೆ ಆಗಮಿಸಿದ ಇಎಎಂ ಜೈಶಂಕರ್ - EAM JAISHANKAR IN AUSTRALIA

ವಿದೇಶಾಂಗ ಸಚಿವ ಜೈಶಂಕರ್ ಭಾನುವಾರ ಆಸ್ಟ್ರೇಲಿಯಾಗೆ ಆಗಮಿಸಿದ್ದಾರೆ.

ಆಸ್ಟ್ರೇಲಿಯಾಗೆ ಆಗಮಿಸಿದ ವಿದೇಶಾಂಗ ಸಚಿವ ಜೈಶಂಕರ್
ಆಸ್ಟ್ರೇಲಿಯಾಗೆ ಆಗಮಿಸಿದ ವಿದೇಶಾಂಗ ಸಚಿವ ಜೈಶಂಕರ್ (IANS)
author img

By ETV Bharat Karnataka Team

Published : Nov 3, 2024, 4:52 PM IST

ಬ್ರಿಸ್ಬೇನ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಭಾನುವಾರ ಬ್ರಿಸ್ಬೇನ್​ಗೆ ಆಗಮಿಸಿದ್ದಾರೆ. ನವೆಂಬರ್ 3 ರಿಂದ ನವೆಂಬರ್ 8 ರವರೆಗೆ ಆಸ್ಟ್ರೇಲಿಯಾ ಮತ್ತು ಸಿಂಗಾಪುರ ದೇಶಗಳ ಪ್ರವಾಸ ಕಾರ್ಯಕ್ರಮದ ಅಂಗವಾಗಿ ಅವರು ಇಲ್ಲಿಗೆ ಆಗಮಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ, ಅವರು ಭಾರತದ ನಾಲ್ಕನೇ ದೂತಾವಾಸವನ್ನು ಉದ್ಘಾಟಿಸಲಿದ್ದಾರೆ ಮತ್ತು 15 ನೇ ವಿದೇಶಾಂಗ ಸಚಿವರ ಚೌಕಟ್ಟು ಸಂವಾದ (Framework Dialogue) ದಲ್ಲಿ (ಎಫ್ಎಂಎಫ್​ಡಿ) ಭಾಗವಹಿಸಲಿದ್ದಾರೆ.

ಆಸ್ಟ್ರೇಲಿಯಾಗೆ ಆಗಮಿಸಿದ ನಂತರ ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಜೈಶಂಕರ್, "ನಮಸ್ತೆ ಆಸ್ಟ್ರೇಲಿಯಾ! ಇಂದು ಬ್ರಿಸ್ಬೇನ್ ಗೆ ಬಂದಿಳಿದಿರುವೆ. ಭಾರತ-ಆಸ್ಟ್ರೇಲಿಯಾ ದೋಸ್ತಿಯನ್ನು ಮುಂದುವರಿಸಲು ಮುಂದಿನ ಕೆಲವು ದಿನಗಳಲ್ಲಿ ಫಲಪ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ" ಎಂದು ಹೇಳಿದ್ದಾರೆ.

ಜೈಶಂಕರ್ ಅವರ ಮೊದಲ ಹಂತದ ಪ್ರವಾಸವು ಆಸ್ಟ್ರೇಲಿಯಾದಲ್ಲಿ ನವೆಂಬರ್ 7 ರವರೆಗೆ ಮುಂದುವರಿಯಲಿದೆ. ಕ್ಯಾನ್ ಬೆರಾದಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರೊಂದಿಗೆ 15 ನೇ ಎಫ್ಎಂಎಫ್​ಡಿಯ ಸಹ ಅಧ್ಯಕ್ಷತೆ ವಹಿಸಲಿದ್ದಾರೆ. ಇಲ್ಲಿ ಇಬ್ಬರೂ ಇಂಡೋ-ಪೆಸಿಫಿಕ್​ನಾದ್ಯಂತ ಪರಸ್ಪರ ಹಿತಾಸಕ್ತಿಗಳನ್ನು ಕೇಂದ್ರೀಕರಿಸಿ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಿದ್ದಾರೆ. ಕ್ವಾಡ್ ವಿದೇಶಾಂಗ ಸಚಿವರ ಸಭೆಗೆ ಮುಂಚಿತವಾಗಿ ಜೈಶಂಕರ್ ಜುಲೈನಲ್ಲಿ ಟೋಕಿಯೊದಲ್ಲಿ ವಾಂಗ್ ಅವರನ್ನು ಭೇಟಿಯಾಗಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಪ್ರಕಾರ, ಆಸ್ಟ್ರೇಲಿಯಾದ ಸಂಸತ್ ಭವನದಲ್ಲಿ ನಡೆಯಲಿರುವ 2 ನೇ ರೈಸಿನಾ ಡೌನ್ ಅಂಡರ್ ಸಮ್ಮೇಳನದ ಆರಂಭಿಕ ಅಧಿವೇಶನದಲ್ಲಿ ಇಎಎಂ ಜೈಶಂಕರ್ ಮುಖ್ಯ ಭಾಷಣ ಮಾಡಲಿದ್ದಾರೆ. ಆಸ್ಟ್ರೇಲಿಯಾದ ನಾಯಕರು, ಸಂಸದರು, ಭಾರತೀಯ ವಲಸೆಗಾರರ ಸಂಘದ ಸದಸ್ಯರು ಮತ್ತು ವ್ಯಾಪಾರ, ಮಾಧ್ಯಮ ಮತ್ತು ಥಿಂಕ್ ಟ್ಯಾಂಕ್ ಪ್ರತಿನಿಧಿಗಳೊಂದಿಗಿನ ಸಭೆಗಳಲ್ಲಿ ಜೈಶಂಕರ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆಸ್ಟ್ರೇಲಿಯಾ ಭೇಟಿಯ ನಂತರ, ಜೈಶಂಕರ್ ನವೆಂಬರ್ 8 ರಂದು ಸಿಂಗಾಪುರಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಆಸಿಯಾನ್-ಭಾರತ ಥಿಂಕ್ ಟ್ಯಾಂಕ್​ಗಳ ನೆಟ್ ವರ್ಕ್​ನ 8 ನೇ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಉಭಯ ದೇಶಗಳ ನಡುವಿನ ನಿಕಟ ಪಾಲುದಾರಿಕೆಯನ್ನು ಪರಿಶೀಲಿಸಲು ಮತ್ತು ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳನ್ನು ಅನ್ವೇಷಿಸಲು ಅವರು ಸಿಂಗಾಪುರದ ಉನ್ನತ ನಾಯಕರನ್ನು ಎಂದು ಎಂಇಎ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ : ಸುಡಾನ್​ನಲ್ಲಿ ಭೀಕರ ಸಂಘರ್ಷ: 13 ಪತ್ರಕರ್ತರ ಸಾವು - ಹಲವರ ಮೇಲೆ ಹಲ್ಲೆ, ಲೂಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.