ಯಾದಗಿರಿ:ಸೆಪ್ಟೆಂಬರ್ 20ರಿಂದ 22ರ ವರೆಗೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಆಂದೋಲಾ ಮಠದ ಪೀಠಾಧಿಪತಿ ಸಿದ್ದಲಿಂಗಯ್ಯ ಶ್ರೀಗಳಿಗೆ ಶಹಾಪುರ ತಾಲೂಕಿನಾದ್ಯಂತ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಆದೇಶ ಹೊರಡಿಸಿದ್ದಾರೆ.
ಆಂದೋಲಾ ಸಿದ್ದಲಿಂಗಯ್ಯ ಶ್ರೀಗಳಿಗೆ 2 ದಿನಗಳ ಕಾಲ ಶಹಾಪುರ ತಾಲೂಕು ಪ್ರವೇಶಿಸದಂತೆ ನಿರ್ಬಂಧ
Published : Sep 20, 2024, 10:26 PM IST
ಸೆ.21ರಂದು ಶಹಾಪುರ ಪಟ್ಟಣದಲ್ಲಿ ಶ್ರೀರಾಮ ಸೇನೆಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ನಿಮಜ್ಜನ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 20ರಂದು ರಾತ್ರಿ 12 ಗಂಟೆಯಿಂದ 2024ರ ಸೆಪ್ಟೆಂಬರ್ 22ರ ಮಧ್ಯಾಹ್ನ 2 ಗಂಟೆಯವರೆಗೆ ಸ್ವಾಮೀಜಿಗೆ ಶಹಾಪುರ ತಾಲೂಕಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಈ ಬಗ್ಗೆ ಸಿಆರ್ಪಿಸಿ ಕಾಯ್ದೆ ಸೆಕ್ಷನ್ 133, 143, 144ಎ ಅನ್ವಯ ನಿರ್ಬಂಧ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೈಸೂರು ದಸರಾ ಪೋಸ್ಟರ್ ಬಿಡುಗಡೆ: ನಾಡಹಬ್ಬದ ಯಶಸ್ಸಿಗೆ ಶ್ರಮಿಸಲು ಸಚಿವರ ಕರೆ - Dasara Poster Release