ಹುಬ್ಬಳ್ಳಿ:ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡದಪಾಲಿಕೆ ಸದಸ್ಯ ಆರಿಫ್ ಭದ್ರಾಪೂರ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಮೇಲೆ ಹಲ್ಲೆಗೈದು, ಪರಾರಿಯಾದ ವ್ಯಕ್ತಿಯನ್ನು 8 ವರ್ಷಗಳ ಬಳಿಕ ಬಂಧಿಸುವಲ್ಲಿ ಇಲ್ಲಿನ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಫ್ ಅಲಿ ಬಾಂಬೆ ಬಂಧಿತ ಆರೋಪಿ. ಈತ 2016ರಲ್ಲಿ ಗಣೇಶ್ ಪೇಟ್ ನಿವಾಸಿ ಆರಿಫ್ ಬದ್ರಾಪುರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ. ಅದೃಷ್ಟವಶಾತ್, ಆರಿಫ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.