ಬೆಂಗಳೂರು: ಕೆಸೆಟ್-2023 ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಇದುವರೆಗೂ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗದವರು ನ.12ರಂದು ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಬಂದು ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಹಲವು ಬಾರಿ ಮೂಲ ದಾಖಲೆಗಳ ಪರಿಶೀಲನೆ ಮಾಡಿದ್ದರೂ ಇನ್ನೂ 228 ಮಂದಿ ದಾಖಲೆ ಪರಿಶೀಲನೆಗೆ ಬಂದಿಲ್ಲ. ಹೀಗಾಗಿ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇನ್ನು ಮುಂದೆ ದಾಖಲೆ ಪರಿಶೀಲನೆ ಇರುವುದಿಲ್ಲ. ಹಾಗೆಯೇ ದಾಖಲೆ ಪರಿಶೀಲನೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಅವರು ಸೂಚನೆ ನೀಡಿದ್ದಾರೆ.
ದಾಖಲಾತಿ ಪರಿಶೀಲನೆ ಪೂರ್ಣಗೊಂಡು, ಕೆಸೆಟ್ ಪ್ರಮಾಣ ಪತ್ರ ಪಡೆಯದಿರುವ ಅಭ್ಯರ್ಥಿಗಳು ಕೂಡ ನ.12ರಂದು ಹಾಜರಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪರೀಕ್ಷೆಗೆ ವಿದ್ಯಾರ್ಥಿಗಳಲ್ಲ ಶಿಕ್ಷಕರೇ ಗೈರು: ಆದರೂ ನಿಷ್ಟೆಯಿಂದ ಎಕ್ಸಾಂ ಬರೆದ ಮಕ್ಕಳು! ಹೀಗಾಗಿದ್ದು ಎಲ್ಲಿ ಗೊತ್ತಾ?