ETV Bharat / lifestyle

ನಿಮ್ಮ ಪ್ರೀತಿಪಾತ್ರರಲ್ಲಿ ಈ ಗುಣಗಳಿವೆಯೇ?: ಹಾಗಿದ್ದರೆ ನಿಮ್ಮ 'ಸಂಬಂಧ' ಡೇಂಜರ್​ ಝೋನ್​​ನಲ್ಲಿದೆ ಎಂದರ್ಥ!

ನೀವು ಯಾರೊಂದಿಗಾದರೂ ಪ್ರೀತಿ, ಗೆಳೆತನ, ಸಂಬಂಧ ಕುದುರಿಸಲು ಬಯಸಿದರೆ ಅವರು ನಿಮ್ಮನ್ನು ನಿಜವಾಗಿಯೂ ಇಷ್ಟಪಡುತ್ತಾರಾ ಇಲ್ಲವೇ ಎಂಬುದನ್ನು ತಿಳಿಯುವುದು ಮುಖ್ಯ. ಅವರ ಭಾವನೆಗಳಲ್ಲಿ ಈ ಕೆಳಗಿನ ಅಂಶಗಳು ಕಂಡು ಬಂದರೆ ಹುಷಾರ್​.

ಪ್ರೀತಿಪಾತ್ರರ ನಡವಳಿಕೆ ಬಗ್ಗೆ ಇರಲಿ ಗಮನ
ಪ್ರೀತಿಪಾತ್ರರ ನಡವಳಿಕೆ ಬಗ್ಗೆ ಇರಲಿ ಗಮನ (Getty images)
author img

By ETV Bharat Karnataka Team

Published : 2 hours ago

ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುವಾಗ ಅಥವಾ ಸಂಬಂಧದಲ್ಲಿ ಇದ್ದರೆ, ಆತ ಅಥವಾ ಆಕೆ ನಿಮ್ಮನ್ನು ಪೂರ್ಣವಾಗಿ ಇಷ್ಟಪಡುತ್ತಾರೋ ಇಲ್ಲವೋ ಎಂಬುದು ಅವರ ಭಾವನೆಗಳಲ್ಲಿ ಕಂಡು ಹಿಡಿಯಬಹುದು. ಅವರ ನಡವಳಿಕೆಗಳು ನಿಮ್ಮ ಬಾಂಧವ್ಯದ ಬಗ್ಗೆ ಹೇಳುತ್ತದೆ. ಜೀವನದಲ್ಲಿ ನೀವು ಅವರಿಗೆ ಎಷ್ಟು ಮುಖ್ಯ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಆಕೆ ಅಥವಾ ಆತನ ಕೆಲಸಗಳು, ಪ್ರಯತ್ನ, ಅಸಂಗತತೆ ಗಮನಿಸಿದರೆ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ ಹೊಂದಿಲ್ಲ ಎಂಬುದನ್ನು ಗುರುತಿಸಬಹುದು.

ನೀವು ಬಯಸಿದಂತೆ ಆತ/ ಆಕೆ ಇದ್ದಾನೋ ಇಲ್ಲವೋ ಎಂದು ತಿಳಿದುಕೊಳ್ಳಲು ಈ ಒಂಬತ್ತು ಸೂಚನೆಗಳನ್ನು ಗಮನಿಸಬೇಕು. ಇದರಲ್ಲಿನ ಅಂಶಗಳು ಅವರಲ್ಲಿ ಕಂಡುಬಂದರೆ, ನೀವು ಆಗಲೇ ಎಚ್ಚೆತ್ತುಕೊಳ್ಳಬೇಕು. ಅವುಗಳು ಯಾವುವು ಎಂಬುದರ ವಿವರ ಇಲ್ಲಿದೆ.

  • ಅಪರೂಪಕ್ಕೆ ಭೇಟಿ, ಸಂಪರ್ಕ

ನಿಮ್ಮ ಮೇಲೆ ನಿಜವಾದ ಆಸಕ್ತಿ ಇದ್ದರೆ, ಆ ವ್ಯಕ್ತಿಗಳು ನಿಮ್ಮನ್ನು ಭೇಟಿ ಮಾಡಲು ಅಥವಾ ಮಾತುಕತೆ ನಡೆಸಲು ಹವಣಿಸುತ್ತಾರೆ. ಇದ್ಯಾವುದೂ ಇಲ್ಲದೇ ಮಿತ ಮಾತು, ಕಡಿಮೆ ಭೇಟಿ, ನಿಯಮಗಳು ಅನುಸರಿಸಿದರೆ ಅವರಿಗೆ ನಿಮ್ಮ ಅಗತ್ಯ ಇಲ್ಲ ಎಂಬುದನ್ನು ತಿಳಿದುಕೊಳ್ಳಿ.

  • ನಿಮಗಾಗಿ ಸಮಯ ಮೀಸಲಿಡಲ್ಲ

ವ್ಯಕ್ತಿಯ ಮೇಲೆ ನಿಜವಾದ ಪ್ರೀತಿ ಇದ್ದರೆ, ಎಂಥದ್ದೇ ಸಂದರ್ಭ ಬಂದರೂ ಅದನ್ನು ಮೀರಿ ಅವರನ್ನು ಸಂಧಿಸುವ ಪ್ರಯತ್ನ ಮಾಡುತ್ತಾರೆ. ಎಷ್ಟೇ ಕಾರ್ಯ ಭಾರ ಇದ್ದರೂ ಬಿಡುವು ಮಾಡಿಕೊಂಡು ನಿಮಗೆ ಸಮಯ ನೀಡುತ್ತಾರೆ. ಭೇಟಿಗೆ, ಮಾತಿಗೆ ಸಮಯ ನಿಗದಿ ಮಾಡಿದರೆ ಅದು ಬರೀ ತೋರಿಕೆ ಮತ್ತು ಆದ್ಯತೆ ಇಲ್ಲ ಎಂಬುದರ ಸಂಕೇತ.

  • ಒಟ್ಟಿಗೆ ಕುಳಿತು ಭವಿಷ್ಯದ ಯೋಜನೆ ರೂಪಿಸುವುದಿಲ್ಲ

ಭವಿಷ್ಯದ ಬಗ್ಗೆ ಯಾವುದೇ ಜೋಡಿಗಾದರೂ ಕನಸು ಇರುವುದು ಸಹಜ. ಅದನ್ನು ಪರಸ್ಪರ ಚರ್ಚೆ ಮಾಡುತ್ತಾರೆ. ಇದ್ಯಾವುದೂ ನಿಮ್ಮ ಪಾತ್ರರಲ್ಲಿ ಕಾಣದೇ ಹೋದರೆ ನಿಮ್ಮ ಅಗತ್ಯ ಮತ್ತು ದೀರ್ಘಾವಧಿ ಜೀವನದ ಕನಸು ಅವರಲ್ಲಿ ಇಲ್ಲ ಎಂಬುದು ಮನವರಿಕೆ ಮಾಡಿಕೊಳ್ಳಿ.

  • ನಿಮಗೆ ಆದ್ಯತೆ ನೀಡುತ್ತಿಲ್ಲ ಅನಿಸುವುದು

ಗಾಢವಾದ ಪ್ರೀತಿ ಇದ್ದರೆ ಅವರು ಯಾವಾಗಲೂ ತನ್ನ ಸಂಗಾತಿಗೆ ಹೆಚ್ಚಿನ ಸಮಯ, ಆದ್ಯತೆ ನೀಡುತ್ತಾರೆ. ಎಲ್ಲದಕ್ಕೂ ಇತಿ ಮಿತಿ ಹಾಕಿಕೊಂಡರೆ ಅಥವಾ ನಿಮಗಾಗಿ ಏನೂ ಮಾಡುತ್ತಿಲ್ಲ ಎಂದಾದರೆ ಅವರಿಗೆ ನಿಮ್ಮ ಅಗತ್ಯ ಕಡಿಮೆ ಎಂಬುದು ಇದರ ಸೂಚನೆ.

  • ಮಿತ ಮಾತು, ಅದೂ ಅಸಂಬದ್ಧ

ಆತ/ಆಕೆ ನಿಮ್ಮೊಂದಿಗೆ ಮಾತನಾಡುವಾಗ ಒಂದೇ ವಾಕ್ಯದಲ್ಲಿ ಉತ್ತರ, ಮಿತ ಮಾತು. ಭೇಟಿಗಾಗಿ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುವುದು ಮಾಡಿದರೆ, ಅದು ನಿಮ್ಮ ಸಂಬಂಧ ಮುಂದುವರಿಕೆಗೆ ಅವರಿಗೆ ಇಷ್ಟದ ಕೊರತೆ ಇದೆ ಎಂದು ಭಾವಿಸಬೇಕು.

  • ದೀರ್ಘ ಮಾತಿನಿಂದ ದೂರ

ಸಾಂಗತ್ಯವೆಂದರೆ ಅದರಲ್ಲಿ ಪರಸ್ಪರ ಮಾತು, ಕನಸುಗಳ ಹಂಚಿಕೆ, ಭಾವನೆಗಳ ಹೂರಣ ಇರುತ್ತದೆ. ವೈಯಕ್ತಿಕ ವಿಷಯಗಳಿಂದ ದೂರ ಉಳಿದರೆ, ಲಘು ಮಾತು, ಸಂಪರ್ಕವೂ ಕಡಿಮೆಯಾದಲ್ಲಿ ಅವರು ನಿಮ್ಮಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬುದರ ದ್ಯೋತಕವಾಗಿದೆ.

  • ತಮ್ಮ ಜೀವನದ ಬಗ್ಗೆ ಮುಕ್ತವಾಗಿರಲ್ಲ

ಜೋಡಿಗಳ ಮಧ್ಯೆ ವೈಯಕ್ತಿಯ ವಿಚಾರಗಳು ವಿನಿಮಯ, ತಮ್ಮ ಜೀವನದ ಬಗ್ಗೆ ಹಂಚಿಕೊಳ್ಳುವುದು ಸಹಜ. ಇಚ್ಚಾಶಕ್ತಿ ಕೊರತೆ ಇದ್ದಲ್ಲಿ ಆತ. ಆಕೆ ತಮ್ಮ ವೈಯಕ್ತಿಕ ಜೀವನ, ಕೆಲಸ, ಕುಟುಂಬ ಅಥವಾ ಸ್ನೇಹಿತರ ಬಗ್ಗೆ ವಿರಳವಾಗಿ ಹಂಚಿಕೊಳ್ಳುತ್ತಾರೆ. ನಿಮ್ಮನ್ನು ದೂರವಿಡಲು ಬಯಸುವ ಪ್ರಯತ್ನ.

  • ಸ್ನೇಹಿತರು, ಕುಟುಂಬಸ್ಥರ ಪರಿಚಯಿಸುವುದಿಲ್ಲ

ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿ ಮಾಡಿಸುವುದು ಯಾವುದೇ ಸಂಬಂಧದ ನಡುವೆ ತೀರಾ ಸಹಜ ಪ್ರಕ್ರಿಯೆ. ಹೀಗೆ ಮಾಡಿದಲ್ಲಿ ಗಂಭೀರ ಸಂಬಂಧಕ್ಕೆ ಸಾಕ್ಷಿ. ನಿಮ್ಮನ್ನು ಅವರ ಗೆಳೆಯರು, ಕುಟುಂಬಸ್ಥರಿಗೆ ಪರಿಚಯಿಸುವ ಅಥವಾ ಪ್ರೀತಿಪಾತ್ರರ ಬಗ್ಗೆ ಮಾಹಿತಿ ನೀಡದೇ ಹೋದಲ್ಲಿ ವಿಷಯ ಬೇರೆಯೇ ಇದು ಎಂದು ತಿಳಿಯಿರಿ.

  • ವರ್ತನೆಯಲ್ಲಿ 'ಡಬಲ್​​ ಗೇಮ್​'

ನೀವು ಯಾರಿಗಾದರೂ ಬೇಕಾದಲ್ಲಿ ಅವರು ನಿಮ್ಮಲ್ಲಿ ಮುಕ್ತವಾಗಿ ಬೆರೆಯುತ್ತಾರೆ. ಹಾಗೊಂದು ವೇಳೆ ಬೇಡವಾದಲ್ಲಿ ಅವರ ನಡವಳಿಕೆಗಳು ಉಲ್ಟಾ ಪಲ್ಟಾ ಆಗುತ್ತವೆ. ಕೆಲವೊಮ್ಮೆ ಹತ್ತಿರ, ಬಳಿಕ ನಿರ್ಲಕ್ಷ್ಯ. ವರ್ತನೆಯಲ್ಲಿ ಅನಿಶ್ಚಿತತೆ ಕಂಡುಬರುತ್ತದೆ.

ಇದನ್ನೂ ಓದಿ: ಒಟ್ಟಿಗೆ ಈ ಆಹಾರ ಸೇವಿಸಿದರೆ "ತೂಕ" ಹೆಚ್ಚಾಗುತ್ತೆ ಹುಷಾರ್​​​: ತಜ್ಞರು ಮಾಡಿರುವ ಶಿಫಾರಸುಗಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.