ETV Bharat / business

ದಾಖಲೆಯ 1,647 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ ಸಾಧ್ಯತೆ: ಈಗಲಾದರೂ ತಗ್ಗಬಹುದೇ ಆಹಾರ ಹಣದುಬ್ಬರ? - KHARIF FOODGRAIN OUTPUT

ಭಾರತದ ಒಟ್ಟು ಆಹಾರ ಧಾನ್ಯ ಉತ್ಪಾದನೆ ದಾಖಲೆಯ 1,647.05 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ತಲುಪಲಿದೆ.

ಕೃಷಿ ಕಾರ್ಯ (ಸಾಂದರ್ಭಿಕ ಚಿತ್ರ)
ಕೃಷಿ ಕಾರ್ಯ (ಸಾಂದರ್ಭಿಕ ಚಿತ್ರ) (IANS)
author img

By ETV Bharat Karnataka Team

Published : Nov 5, 2024, 7:01 PM IST

ನವದೆಹಲಿ: 2024-25ರ ಖಾರಿಫ್ ಸೀಸನ್​ನಲ್ಲಿ ಭಾರತದ ಒಟ್ಟು ಆಹಾರ ಧಾನ್ಯ ಉತ್ಪಾದನೆ ದಾಖಲೆಯ 1,647.05 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ತಲುಪಲಿದೆ ಎಂದು ಮೊದಲ ಮುಂಗಡ ಅಂದಾಜಿನ ಪ್ರಕಾರ ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷದ ಖಾರಿಫ್ ಆಹಾರ ಧಾನ್ಯ ಉತ್ಪಾದನೆಗೆ ಹೋಲಿಸಿದರೆ 89.37 ಎಲ್ಎಂಟಿ ಹೆಚ್ಚಾಗಿದೆ ಮತ್ತು ಸರಾಸರಿ ಖಾರಿಫ್ ಆಹಾರ ಧಾನ್ಯ ಉತ್ಪಾದನೆಗಿಂತ 124.59 ಎಲ್ಎಂಟಿ ಹೆಚ್ಚಾಗಿದೆ ಎಂದು ಕೃಷಿ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳು ತಿಳಿಸಿವೆ.

ಅಕ್ಕಿ, ಜೋಳ ಮತ್ತು ಮೆಕ್ಕೆಜೋಳದ ಉತ್ತಮ ಉತ್ಪಾದನೆಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದಾಖಲೆಯ ಹೆಚ್ಚಳ ಕಂಡು ಬಂದಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಅಕ್ಕಿಯ ಒಟ್ಟು ಉತ್ಪಾದನೆ 1,199.34 ಎಲ್ಎಂಟಿ ಅಂದಾಜು: 2024-25 ರ ಖಾರಿಫ್ ಸೀಸನ್​ನಲ್ಲಿ ಅಕ್ಕಿಯ ಒಟ್ಟು ಉತ್ಪಾದನೆಯು 1,199.34 ಎಲ್ಎಂಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷದ ಖಾರಿಫ್ ಅಕ್ಕಿ ಉತ್ಪಾದನೆಗಿಂತ 66.75 ಎಲ್ಎಂಟಿ ಹೆಚ್ಚಾಗಿದೆ ಮತ್ತು ಸರಾಸರಿ ಖಾರಿಫ್ ಅಕ್ಕಿ ಉತ್ಪಾದನೆಗಿಂತ 114.83 ಎಲ್ಎಂಟಿ ಹೆಚ್ಚಾಗಿದೆ.

ಹಾಗೆಯೇ ಖಾರಿಫ್ ಮೆಕ್ಕೆಜೋಳದ ಉತ್ಪಾದನೆಯನ್ನು 245.41 ಎಲ್ಎಂಟಿ ಮತ್ತು ಖಾರಿಫ್ ಪೋಷಕಾಂಶ / ಒರಟು ಧಾನ್ಯಗಳ ಉತ್ಪಾದನೆ 378.18 ಎಲ್ಎಂಟಿ ಆಗಬಹುದು ಎಂದು ಅಂದಾಜಿಸಲಾಗಿದೆ.

ಇದಲ್ಲದೇ, 2024-25 ರಲ್ಲಿ ಒಟ್ಟು ಖಾರಿಫ್ ಬೇಳೆಕಾಳುಗಳ ಉತ್ಪಾದನೆಯು 69.54 ಎಲ್ಎಂಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಒಟ್ಟು ಖಾರಿಫ್ ಎಣ್ಣೆಕಾಳುಗಳ ಉತ್ಪಾದನೆಯು 257.45 ಎಲ್ಎಂಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 15.83 ಎಲ್ಎಂಟಿ ಹೆಚ್ಚಾಗಿದೆ.

2024-25ರ ಖಾರಿಫ್ ನೆಲಗಡಲೆ ಉತ್ಪಾದನೆಯನ್ನು 103.60 ಎಲ್ಎಂಟಿ ಮತ್ತು ಸೋಯಾಬೀನ್ ಉತ್ಪಾದನೆಯನ್ನು 133.60 ಎಲ್ಎಂಟಿ ಎಂದು ಅಂದಾಜಿಸಲಾಗಿದೆ. 2024-25ರಲ್ಲಿ ದೇಶದಲ್ಲಿ ಕಬ್ಬಿನ ಉತ್ಪಾದನೆ 4,399.30 ಲಕ್ಷ ಟನ್ ಮತ್ತು ಹತ್ತಿಯ ಉತ್ಪಾದನೆ 299.26 ಲಕ್ಷ ಬೇಲ್ (ತಲಾ 170 ಕೆಜಿ) ಎಂದು ಅಂದಾಜಿಸಲಾಗಿದೆ. 84.56 ಲಕ್ಷ ಬೇಲ್ ಗಳಷ್ಟು (ತಲಾ 180 ಕೆಜಿ) ಸೆಣಬು ಮತ್ತು ಮೆಸ್ತಾ ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿದೆ.

ರಾಜ್ಯಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಈ ಅಂದಾಜುಗಳನ್ನು ಪ್ರಾಥಮಿಕವಾಗಿ ಸಿದ್ಧಪಡಿಸಲಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ತಿಳಿಸಿದೆ. ರಾಜ್ಯಗಳಿಂದ ಪಡೆದ ಬೆಳೆ ಪ್ರದೇಶದ ಮಾಹಿತಿಯನ್ನು ರಿಮೋಟ್ ಸೆನ್ಸಿಂಗ್, ಸಾಪ್ತಾಹಿಕ ಬೆಳೆ ಹವಾಮಾನ ಕಣ್ಗಾವಲು ಗುಂಪು ಮತ್ತು ಇತರ ಏಜೆನ್ಸಿಗಳಿಂದ ಪಡೆದ ಮಾಹಿತಿಯೊಂದಿಗೆ ಮೌಲ್ಯೀಕರಿಸಲಾಗಿದೆ ಮತ್ತು ತ್ರಿಕೋನೀಕರಿಸಲಾಗಿದೆ.

ಇದನ್ನೂ ಓದಿ : ಭಾರತದ ಗ್ರ್ಯಾಂಡ್ ವೆಡ್ಡಿಂಗ್ ಸೀಸನ್: 48 ಲಕ್ಷ ವಿವಾಹ, 6 ಲಕ್ಷ ಕೋಟಿ ರೂಪಾಯಿ ಖರ್ಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.