ರಾಯಚೂರು: ಬೈಕ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಹೊರವಲಯದ ಪವರ್ ಗ್ರೀಡ್ ಬಳಿ ಸೋಮವಾರ ರಾತ್ರಿ ಜರುಗಿದೆ.
ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ನಿವಾಸಿಗಳಾದ ಶರಣಬಸವ (28), ಶಿವು (26) ಮೃತರೆಂದು ಗುರುತಿಸಲಾಗಿದೆ. ಇರ್ಫಾನ್ ಹಾಗೂ ಗರೀಬ್ ಎಂಬವರು ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರಿನಿಂದ ಕಲ್ಲೂರಿಗೆ ಒಂದೇ ಬೈಕ್ನಲ್ಲಿ ನಾಲ್ವರು ಹೊರಟಿದ್ದರು. ಪವರ್ ಗ್ರಿಡ್ ಬಳಿ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಕಾರು ಸಹಿತ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್: 36 ಪ್ರಯಾಣಿಕರ ಸಾವು, ಪರಿಹಾರ ಘೋಷಣೆ