ETV Bharat / snippets

ಲಂಚ: ಸಹಾಯಕ ಔಷಧ ನಿಯಂತ್ರಕ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ
ಲೋಕಾಯುಕ್ತ ಕಚೇರಿ (ETV Bharat)
author img

By ETV Bharat Karnataka Team

Published : 5 hours ago

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಔಷಧ ನಿಯಂತ್ರಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 40 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದಾಗ ಸಹಾಯಕ ಔಷಧ ನಿಯಂತ್ರಕ ಅಜಯ್ ರಾಜ್.ಡಿ (55) ಅವರನ್ನು ಬಂಧಿಸಲಾಗಿದೆ.

ದೂರುದಾರ ಸುಬ್ರಹ್ಮಣ್ಯ ಅವರು ಹೋಲ್​ಸೇಲ್ ಫಾರ್ಮಸಿಯೊಂದಕ್ಕೆ ಪರವಾನಗಿಗೆ ಅರ್ಜಿ ಸಲ್ಲಿಸಿದ್ದರು. ಪ್ರತಿಯಾಗಿ 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಜಯ್ ರಾಜ್ ವಿರುದ್ಧ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಈ ದೂರಿನನ್ವಯ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಮಹಾದೇವ್ ಜೋಶಿ ನೇತೃತ್ವದ ತಂಡ, ಲಂಚದ ಹಣ ಸಮೇತ ಅಧಿಕಾರಿಯನ್ನು ಬಂಧಿಸಿದೆ.

ಇದನ್ನೂ ಓದಿ: ಹಲ್ಲೆ ಮಾಡಿದವರನ್ನ ಬಂಧಿಸುವುದಾಗಿ ಸುಳ್ಳು ಹೇಳಿ ದೂರುದಾರನಿಗೆ 50 ಸಾವಿರ ಲಂಚ ಕೇಳಿದ ಪಿಎಸ್ಐ ಲೋಕಾ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.